ಬಿ.ಎಮ್.ಟಿ.ಸಿ. ಬಸ್ಸುಗಳಲ್ಲಿ ಕನ್ನಡ ಹಾಡು

ಬಿ.ಎಮ್.ಟಿ.ಸಿ. ಬಸ್ಸುಗಳಲ್ಲಿ ಕನ್ನಡ ಹಾಡು

ನಮ್ಮ ಬಸ್ಸುಗಳಲ್ಲಿ ನಮ್ಮ ಹಾಡು ಮಾತ್ರ.....

ನಮ್ಮಲ್ಲಿ ಹಲವರು ಬಿ.ಎಮ್.ಟಿ.ಸಿ. ಬಸ್ಸುಗಳಲ್ಲಿ ಪಯಣಿಸುವಾಗ ಬಸ್ಸಿನ ನಿರ್ವಾಹಕರು ಪರಭಾಶೆಯ ಹಾಡುಗಳನ್ನು ಹಾಕುವುದನ್ನು ನೋಡಿರುತ್ತೇವೆ. ಒಲ್ಲದ ಮನಸ್ಸಿನಲ್ಲಿ ಸಹಿಸಿಯೂ ಇರುತ್ತೇವೆ. ಹಲವು ಬಾರಿ ನಿರ್ವಾಹಕರ ದುರ್ನಡತೆಗೆ ಹೆದರಿ ನಮಗೆ ಇದನ್ನು ಖ೦ಡಿಸಲು ಹಿ೦ಜರಿಕೆ ಆಗಿದ್ದೂ ಇರಬಹುದು.

ಬಿ.ಎಂ.ಟಿ.ಸಿ ಯ ಈ ನಡತ ಪ್ರಶ್ನಿಸಿ ನಾವು ಜಾಗ್ರುತ ಗ್ರಾಹಕರು ಮಿಂಚೆ ಬರೆದಿದ್ದೆವು.
ನಮ್ಮ ಮಿಂಚೆಗಳಿಗೆ, ಬೆಂ.ಮ.ಸಾ.ಸಂಸ್ಥೆಯ ಮುಖ್ಯ ಸಂಚಾರ ವ್ಯವಸ್ಥಾಪಕರಿಂದ ಬಂದ ಉತ್ತರ ನೋಡಿ.
ಇನ್ನು ಮುಂದೆ ಯಾವುದೇ ವೋಲ್ವೋದಲ್ಲಿ ಕನ್ನಡ ಹಾಡು ಹಾಕದೇ ಇದ್ದಲ್ಲಿ, ಆ ಬಸ್ಸಿನ ನಿರ್ವಾಹಕರಿಗೆ ಈ ರೀತಿಯ ನಿಯಮದ ಬಗೆಗೆ ತಿಳಿಹೇಳಿ.
ಆಮೇಲೂ ಕನ್ನಡ ಹಾಡು ಹಾಕದೇ ತಲೆಹರಟೆ ಮಾಡಿದರೆ, ಇವರಿಗೆ ಮಿಂಚಿಸಿ: Chief Traffic Manager (O) <ctmobmtc@gmail.com>

*********************************************************************************
ಮಾನ್ಯರೇ,

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಕನ್ನಡಕ್ಕೆ ಮೊದಲ ಪ್ರಾಧನ್ಯತೆಯನ್ನು ನೀಡುತ್ತಿದ್ದು, ಕಛೇರಿಗಳಲ್ಲಿ ಆಡಳಿತ ಭಾಷೆಯನ್ನಾಗಿ ಕನ್ನಡವನ್ನೇ ಬಳಸುತ್ತಿದ್ದೇವೆ ಎಂಬ ಅಂಶವನ್ನು ತಮ್ಮ ಗಮನಕ್ಕೆ ತರಬಯಸುತ್ತೇವೆ.

ಬೆಂ.ಮ.ಸಾ.ಸಂಸ್ಥೆಯ ವಜ್ರ ಮತ್ತು ವಾಯು ವಜ್ರ ಬಸ್ಸುಗಳಲ್ಲಿ ಕನ್ನಡ ಹಾಡುಗಳ ಬದಲಾಗಿ, ಹಿಂದಿ ಹಾಗೂ ಇನ್ನಿತರ ಭಾಷೆಗಳ ಹಾಡುಗಳನ್ನು ಹಾಕುತ್ತಿರುವ ಬಗ್ಗೆ ತಾವು ದೂರನ್ನು ನೀಡಿದ್ದು, ಈ ಸಂಬಂಧ ವಜ್ರ ಮತ್ತು ವಾಯು ವಜ್ರ ವಾಹನಗಳಲ್ಲಿ ಕರ್ತವ್ಯ ನಿರ್ವಹಿಸುವ ಎಲ್ಲಾ ಚಾಲಕ ಮತ್ತು ನಿರ್ವಾಹಕರುಗಳಿಗೆ ಕಡ್ಡಾಯವಾಗಿ ಕನ್ನಡ ಹಾಡುಗಳನ್ನು ಹಾಕುವಂತೆ ಸೂಕ್ತ ನಿರ್ದೇಶನಗಳನ್ನು ನೀಡಲಾಗಿದೆ ಎಂಬ ವಿಷಯವನ್ನು ತಮ್ಮ ಗಮನಕ್ಕೆ ತರಬಯಸುತ್ತೇನೆ.

ವಂದನೆಗಳೊಂದಿಗೆ,

ತಮ್ಮ ವಿಶ್ವಾಸಿ,
ಮುಖ್ಯ ಸಂಚಾರ ವ್ಯವಸ್ಥಾಪಕರು(ಆ),
ಬೆಂ.ಮ.ಸಾ.ಸಂಸ್ಥೆ.
*********************************************************************************

Rating
No votes yet

Comments