ಅಯ್ಯೋ, ಪ್ರೀತಿಯ ಮಾತಂತಿರಲಿ!
ಸಾಕಿನ್ನು ಈ ದೂರ
ಬಂದು ಬಿಡು ಬೇಗನೇ
ಎಂದು ನೀವನ್ನುತಿರುವುದು
ನನ್ನ ಮೇಲಿನ
ಪ್ರೀತಿಯಿಂದಲೇ ಅಲ್ಲವೇನು
ಎಂದು ನೀನೆನ್ನ
ಕೇಳುತಿರುವೆಯಲ್ಲೇ?
ಅಯ್ಯೋ,
ಪ್ರೀತಿಯ ಮಾತಂತಿರಲಿ
ನೀನಲ್ಲಿ ನನ್ನನ್ನು
ನೆನಸಿಕೊಂಡಾಗಲೆಲ್ಲಾ
ಇಲ್ಲಿ ನನ್ನನ್ನು
ಬಿಡದೆ ಕಾಡುವ
ಬಿಕ್ಕಳಿಕೆ, ಆಕಳಿಕೆ,
ಒಂಟಿ ಸೀನುಗಳಿಂದ
ನಾನು ನೊಂದಿರುವೆನಲ್ಲೇ!
*****
ಆತ್ರಾಡಿ ಸುರೇಶ ಹೆಗ್ಡೆ
Rating