ನ್ಯಾಯ ಸಂಕಟ
ಬರಹ
ಕರ್ನಾಟಕದ ಮಾಜಿ ಮುಖ್ಯ ನ್ಯಾಯಾಧೀಶ ದಿನಕರನ್ ಅವರ ಮೇಲಿನ ಲಂಚದ ಆರೋಪದ ಕಾರಣ ಅವರನ್ನು ಸರ್ವೋಚ್ಚ ನ್ಯಾಯಾಲಯಕ್ಕೆ ನೇಮಿಸಿಕೊಳ್ಳಲು ಆಗಲಿಲ್ಲ. ಅವರನ್ನು ಸಿಕ್ಕಿಂ ರಾಜ್ಯಕ್ಕೆ ವರ್ಗಾವಣೆ ಮಾಡಲಾಗಿದೆ. ಸಿಕ್ಕಿಂ ನಲ್ಲಿ ವಕೀಲರ ತಕರಾರು, ನಮಗೆ ದಿನಕರನ್ ಬೇಡ. ಒಂದು ರಾಜ್ಯದಲ್ಲಿ ಸಲ್ಲದ ವ್ಯಕ್ತಿ ನಮಗೇಕೆ ಸಲ್ಲಬೇಕು ಎಂದು ದಿನಕರನ್ ಅವರ ಪ್ರತಿಜ್ಞಾ ವಿಧಿಯ ಸಮಾರಂಭವನ್ನು ಬಹಿಷ್ಕರಿಸಲು ನಿರ್ಧರಿಸಿದ್ದಾರೆ. ಪರಿಸ್ಥಿತಿ ಹೀಗಿರುವಾಗ
ನ್ಯಾಯಕ್ಕಾಗಿ ದಿನಕರನ್ ಯಾವ ನ್ಯಾಯಾಲಯದ ಕಟ್ಟೆ ಹತ್ತಬೇಕು? ನಮಗೆ ಬೇಡ ಎಂದು ಪರೋಕ್ಷವಾಗಿ ಸರ್ವೋಚ್ಚ ನ್ಯಾಯಾಲಯ ಹೇಳಿಯಾಗಿದೆ. ದಿನಕರನ್ ಅವರಿಗೆ ನ್ಯಾಯ ದೊರಕಿಸಿ ಕೊಡಲು ಕೇಂದ್ರ ಸರಕಾರ ಮಧ್ಯೆ ಪ್ರವೆಶಿಸಬೇಕಾಗಬಹುದೇ? ನ್ಯಾಯಮೂರ್ತಿಗಳು ನ್ಯಾಯಕ್ಕಾಗಿ ಯಾರ ಮೊರೆ ಹೋಗಬೇಕು?
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
Comments
ಉ: ನ್ಯಾಯ ಸಂಕಟ
ಉ: ನ್ಯಾಯ ಸಂಕಟ