ಅದು ಪ್ರೀತಿಯ ಕುರುಹು
ನಿಂತಲ್ಲಿ ಕೂತಲ್ಲಿ
ಹಗಲಲ್ಲಿ ಇರುಳಲ್ಲಿ
ನಿನ್ನ ದಿನಚರಿಯ
ಪ್ರತಿ ಗಳಿಗೆಯಲ್ಲೂ
ನನ್ನ ನೆನಪೇ ನಿನ್ನನ್ನು
ಕಾಡತೊಡಗಿದಾಗ
ಅಲ್ಲಿ ನಡೆಯುವ ಚಿಕ್ಕಪುಟ್ಟ
ವಿಷಯವನ್ನೂ ನನ್ನೊಡನೆ
ಹಂಚಿಕೊಳ್ಳಬೇಕೆಂದು
ನಿನಗಿಚ್ಚೆ ಆಗತೊಡಗಿದಾಗ
ನೀ ಮೌನವಾಗಿದ್ದಾಗಲೂ
ನನ್ನೊಡನೆ ಸಂಭಾಷಣೆಯಲಿ
ಸದಾ ನಿರತಳಾಗಿರುವೆಯೇನೋ
ಎಂದು ನಿನಗನಿಸತೊಡಗಿದಾಗ
ಅರಿತುಕೋ ಸಖೀ ನಿನ್ನೊಡಲ
ಕೊಡದಲ್ಲಿ ನನಗಾಗಿ ಪ್ರೀತಿಯ
ಅಮೃತ ತುಂಬಿಕೊಂಡಿಹುದೆಂದು!
*****
ಆತ್ರಾಡಿ ಸುರೇಶ ಹೆಗ್ಡೆ
Rating
Comments
ಉ: ಅದು ಪ್ರೀತಿಯ ಕುರುಹು
In reply to ಉ: ಅದು ಪ್ರೀತಿಯ ಕುರುಹು by sathvik N V
ಉ: ಅದು ಪ್ರೀತಿಯ ಕುರುಹು