ರಾಜ್ಯಪ್ರಶಸ್ತಿ ವಿಜೇತ ‘ಬನದ ನೆರಳು’ ಚಿತ್ರ ಪ್ರದರ್ಶನ ಮತ್ತು ಸಂವಾದ
ರಾಜ್ಯಪ್ರಶಸ್ತಿ ವಿಜೇತ ‘ಬನದ ನೆರಳು’ ಚಿತ್ರ ಪ್ರದರ್ಶನ ಮತ್ತು ಸಂವಾದ ಬೆಂಗಳೂರಿನ ಬಸವನಗುಡಿಯ ಸೃಜನಶೀಲ ಚಟುವಟಿಕೆಗಳ ಕೇಂದ್ರ ಸೃಷ್ಟಿ ವೆಂಚರ್ಸ್ ಎಪ್ರಿಲ್ ೧೮ ಭಾನುವಾರ ದಂದು ಸಮರ್ಪಕ ಸಿನೆಮಾ-ಸದಭಿರುಚಿಯ ಚಿತ್ರಪ್ರದರ್ಶನ ಸರಣಿ ಕಾರ್ಯಕ್ರಮದಡಿಯಲ್ಲಿ ಉಮಾಶಂಕರ ಸ್ವಾಮಿ ನಿರ್ದೇಶನದ ರಾಜ್ಯ ಪ್ರಶಸ್ತಿ ವಿಜೇತ ಚಿತ್ರ ‘ಬನದ ನೆರಳು’ ಪ್ರದರ್ಶನ ಹಾಗೂ ಸಂವಾದ ಕಾರ್ಯಕ್ರಮ ಏರ್ಪಡಿಸಿದೆ.
ಬನದ ನೆರಳು ಚಿತ್ರದ ಕಲಾವಿದರು ಹಾಗೂ ತಂತ್ರಜ್ಞರು ಸಂವಾದದಲ್ಲಿ ಭಾಗವಹಿಸಲಿದ್ದಾರೆ.
‘ಸೃಷ್ಟಿ ವೆಂಚರ್ಸ್’ ಕಲೆ, ಸಾಹಿತ್ಯ, ಸಂಸ್ಕೃತಿ ಹಾಗೂ ಸಾಮಾಜಿಕ ಕಾಳಜಿಯ ವಿವಿಧ ಸೃಜನಶೀಲ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದ್ದು ಹಲವು ಕ್ಷೇತ್ರಗಳ ಪ್ರತಿಭಾನ್ವಿತರಿಗೆ ಪ್ರೋತ್ಸಾಹ ನೀಡುವ ಪ್ರಯತ್ನ ಮಾಡುತ್ತಿದೆ. ಈ ಎಲ್ಲಾ ಕ್ಷೇತ್ರಗಳಲ್ಲಿ ಆಸಕ್ತಿ ಬೆಳೆಸುವ, ಅರಿವು ಮೂಡಿಸುವ ಮತ್ತು ಆರೈಕೆ ಮಾಡುವ ವಿಶಿಷ್ಟ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದೆ.
ಅಮರೇಶ ತೋಟಗಾರಿಕೆ ಮಾಡುವ ಸಲುವಾಗಿ ತನ್ನ ಜಮೀನಿನಲ್ಲಿ ಬೆಳೆದು ನಿಂತಿದ್ದ ಹಳೇ ಮರಗಳನ್ನು ಕಡಿಯಲು ನಿರ್ಧರಿಸುತ್ತಾನೆ. ಈ ಜಮೀನಿನ ಮೊದಲ ಒಡತಿ ಬನವ್ವ ಮರ ಕಡಿಯುವುದನ್ನು ತಡೆಯುತ್ತಾಳೆ. ಈ ಜಮೀನನ್ನು ಮಾರಿರುವುದು ನಿಜ ಆದರೆ ಮರಗಳನ್ನಲ್ಲ, ಅವುಗಳನ್ನು ಕಡಿಯಲು ಬಿಡಲಾರೆ ಎಂಬುದು ಬನವ್ವನ ವಾದ. ತನ್ನ ಪ್ರತಿರೋಧವನ್ನು ವ್ಯಕ್ತಪಡಿಸುವ ಸಲುವಾಗಿ ಹಲವು ಬಾರಿ ಸಾಯಲು ಪ್ರಯತ್ನಸುತ್ತಾಳೆ, ಆದರೆ ಸಾಯದೆ ಬದುಕುತ್ತಾಳೆ.ಅವಳ ಈ ವರ್ತನೆ ಹಳ್ಳಿ ಜನರಿಗೆ ಸಾಕಷ್ಟು ಮನರಂಜನೆ ನೀಡುತ್ತದೆ. ಇಷ್ಟಾದರೂ ಬನವ್ವ ತನ್ನ ನಿರ್ಧಾರವನ್ನು ಬದಲಿಸುವುದಿಲ್ಲ, ಬನವ್ವನ ಈ ಪ್ರತಿರೋಧ ಅಮರೇಶ್ ಮತ್ತು ಊರಿನವರ ಮೇಲೆ ಉಂಟುಮಾಡುವ ಪರಿಣಾಮವೇ ಬನದ ನೆರಳುನೆಲದ ಜೀವಸತ್ವ ಹಾಗೂ ಸ್ಥಳೀಯ ಸಾಂಸ್ಕೃತಿಕ ಪಲ್ಲಟಗಳನ್ನು ಈ ಸಿನಿಮಾ ನವಿರಾಗಿ ನಿರೂಪಿಸುತ್ತದೆ.
ನಿರ್ದೇಶನ -ಚಿತ್ರಕಥೆ- ಉಮಾಶಂಕರ ಸ್ವಾಮಿ,
ಕಲಾವಿದರು-ಬಿ.ಜಯಶ್ರೀ,ಹರೀಶ್ ರಾಜ್,ಗಂಗಾಧರ್,
ಛಾಯಾಗ್ರಹಣ- ರಾಮಚಂದ್ರ ಐತಾಳ್
ಸಂಗೀತ-ಪಿಚ್ಚಳ್ಳಿ ಶ್ರೀನಿವಾಸ
ಕಥೆ-ಕೋಟಗಾನಹಳ್ಳಿ ರಾಮಯ್ಯ ಮತ್ತು ಉಮಾಶಂಕರ ಸ್ವಾಮಿ
ದಿನಾಂಕ: ೧೮-೦೪-೨೦೧೦
ಸಮಯ: ಮಧ್ಯಾಹ್ನ ೩ ರಿಂದ ೬:೩೦
ಚಿತ್ರ ಪ್ರದರ್ಶನದ ಸ್ಥಳ :
ಸೃಷ್ಟಿ ವೆಂಚರ್ಸ್, ನಂ.೮೧, ೧ ನೇ ಮಹಡಿ,
(ಪುಳಿಯೋಗರೆ ಪಾಯಿಂಟ್ ಮೇಲೆ)
E A T ರಸ್ತೆ, ಎನ್.ಆರ್.ಕಾಲೋನಿ,
ಬಸವನಗುಡಿ, ಬೆಂಗಳೂರು-೦೪.
ಪಾಸುಗಳಿಗೆ ಸಂಪರ್ಕಿಸಬಹುದಾದ ಸಂಖ್ಯೆಗಳು: ಮೊಬೈಲ್: 9448171069, 9900439930, 9986372503