ಕೃಷಿ ವಿವಿಗೆ ತಾಳಗುಂದ ವಿವಿ ಎಂದು ನಾಮಕರಣ ಮಾಡುವಂತೆ ಒತ್ತಾಯ

ಕೃಷಿ ವಿವಿಗೆ ತಾಳಗುಂದ ವಿವಿ ಎಂದು ನಾಮಕರಣ ಮಾಡುವಂತೆ ಒತ್ತಾಯ

ಬರಹ

ಇತ್ತೀಚೆಗೆ

ಮಾನ್ಯ ಮುಖ್ಯಮಂತ್ರಿ ಯಡಿಯೂರಪ್ಪ ಶಿವಮೊಗ್ಗದಲ್ಲಿ ಒಂದು ಕೃಷಿ ವಿಶ್ವ ವಿದ್ಯಾನಿಲಯ ಸ್ಥಾಪಿಸುವುದಾಗಿ ತಮ್ಮ ಬಜೆಟ್ ನಲ್ಲಿ ಹೇಳಿದ್ದಾರೆ. ಇದರ ನಾಮಕರಣದ ಬಗ್ಗೆ ಹಲವರ ಹಿರಿಯರ ಹೆಸರು ಹಾಗೇ ವಿವಿಧ ಮಠಾಧೀಶರ ಹೆಸರು ಕೇಳಿ ಬಂದಿದೆ. ಆದರೆ ಹಿರಿಯರು ತಾಳಗುಂದ ವಿಶ್ವ ವಿದ್ಯಾನಿಲಯ ಎಂದು ನಾಮಕರಣ ಮಾಡಿ ಎಂದು ಒಕ್ಕೊರಲಿನ ಒತ್ತಾಯವಿದೆ. ಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಇದೀಗ ನಾಮಕರಣದ ವಿವಾದ ಎದ್ದಿದೆ. ಈ ಒತ್ತಾಯ ಯಾಕೆ ಮಾಡುತ್ತಿದ್ದಾರೆ ಎನ್ನುವುದನ್ನು ನಿಮಗೆ ಹೇಳ ಬೇಕಲ್ಲವೆ. ಶಿಕಾರಿಪುರ ತಾಲ್ಲೂಕನ್ನ ಶರಣರ ನಾಡು ಎಂದೇ ಕರೆಯಲಾಗುತ್ತದೆ. ಇಲ್ಲಿ ಅಕ್ಕಮಹಾದೇವಿ, ಅಲ್ಲಮಪ್ರಭು,ಅಜಗಣ್ಣ, ಮಲ್ಲಕ್ಕ ಸೇರಿದಂತೆ ಅನೇಕ ಶರಣರು ಇಲ್ಲಿ ಜನ್ಮ ತಾಳಿದ್ದಾರೆ. ಹಾಗೇ ಸಮಾಜಕ್ಕೆ ಉತ್ತಮ ಕೊಡುಗೆಗಳನ್ನು ನೀಡಿದ್ದಾರೆ. ಹೊಯ್ಸಳರ ವಿಷ್ಣುವರ್ಧನ ಶಾಂತಲೆಯ ನೃತ್ಯವನ್ನು ನೋಡಿ ಅವಳನ್ನು ವರಿಸಿದ್ದು ಶಿಕಾರಿಪುರ ತಾಲ್ಲೂಕಿನ ಬಳ್ಳಿಗಾವಿಯಲ್ಲಿ. ಶಾಂತಲೆಯ ತವರು ಮನೆ ಕೂಡ ಶಿಕಾರಿಪುರದ ಬಳ್ಳಿಗಾವಿಯ ಗ್ರಾಮವೇ, ಅವಳು ನೃತ್ಯ ಮಾಡಿದ ದೇವಸ್ಥಾನ ಇಂದಿಗೂ ಇದೆ. ಈ ಗ್ರಾಮದಲ್ಲಿ ಕಾಲಿಗೊಂದಂರಂತೆ ಬಸವಣ್ಣ ಹಾಗೂ ಶಿವನ ಲಿಂಗಗಳು ದೊರೆಯುತ್ತದೆ. ಇದರ ಬಗ್ಗೆ ಇನ್ನೊಮ್ಮೆ ಸಂಪೂರ್ಣವಾಗಿ ಬರೆಯುತ್ತೇನೆ. ತಾಳಗುಂದ ವಿವಿ ಎಂದು ಯಾಕೆ ಇಡಬೇಕು ಎನ್ನುವುದು ನಮ್ಮೆಲ್ಲರ ಪ್ರಶ್ನೆ. ಹೊಯ್ಸಳರ ಕಾಲದಲ್ಲಿ ಯಾವುದೇ ವಿದ್ಯೆ ಕಲಿಯಬೇಕೆಂದರೆ ಶಿಕಾರಿಪುರದ ತಾಳಗುಂದಕ್ಕೆ ಬರಬೇಕಿತ್ತು. ಆಗಿನ ಕಾಲದಲ್ಲಿ ತಾಳಗುಂದ ವಿಶ್ವ ವಿದ್ಯಾನಿಲಯ ಇತ್ತು ಎನ್ನುವುದಕ್ಕೆ ಪುರಾತನ ದಾಖಲೆಗಳು, ಜೊತೆಗೆ ಅಲ್ಲಿನ ಶಾಸನಗಳು ಹೇಳುತ್ತದೆ. (ಆ ದಾಖಲೆಗಳು ಪ್ರಾಚೀನ ವಸ್ತು ಇಲಾಖೆ ಅಧೀನದಲ್ಲಿರುವುದರಿಂದ ನಿಮ್ಮ ಮುಂದೆ ಇಡಕ್ಕಾಗುತ್ತಿಲ್ಲ) ತಾಳಗುಂದದ ಕೆಲವೇ ಕಿ.ಮೀ ದೂರಿವಿರುವ ಬಳ್ಳಿಗಾವಿಯಲ್ಲ ಕಲ್ಲಿನ ಕೆತ್ತನೆಯ ಪಾಠ ಹೇಳಿಕೊಡಲಾಗುತ್ತಿತ್ತು ಎನ್ನುವುದಕ್ಕೆ ಕಾಲಿಗೊಂದಂರಂತೆ ಇಲ್ಲಿ ವಿಗ್ರಹಗಳು ಸಿಗುತ್ತಿರುವುದೇ ವಿದ್ಯಾನಿಲಯ ಇತ್ತು ಎನ್ನುವುದಕ್ಕೆ ಸಾಕ್ಷಿಯಾಗಿದೆ. ಇಲ್ಲಿನ ಶಾಸನಗಳಲ್ಲಿ ಹಲವಾರು ವಿಷಯಗಳು ಇದೆಯಾದರೂ ಅದು ದ್ರಾವಿಡದಲ್ಲಿ ಇದೆ ಎನ್ನುತ್ತಾರೆ ಹಿರಿಯರು. ( ಆ ಭಾಷೆಯ ಬಗ್ಗೆ ನನಗೆ ಅಷ್ಟಾಗಿ ಗೊತ್ತಿಲ್ಲ), ತಾಳಗುಂದದಲ್ಲಿ ಜಕಣಚಾರಿ ಕೆತ್ತಿದಂತಹ ದೇವಸ್ಥಾನ ಹಾಗೇ ಅನೇಕ ಶಿಲ್ಪ ಕಲೆಗಳು ಇಂದಿಗೂ ಇದೆ. ಅವುಗಳನ್ನು ಇದೀಗ ಆಧುನೀಕರಿಸಲಾಗಿದೆ. ಇದರಿಂದಾಗಿ ಇಷ್ಟೆಲ್ಲಾ ಹಿನ್ನಲೆಯಿರುವ ತಾಳಗುಂದವನ್ನು ಸಮಾಜಕ್ಕೆ ಪರಿಚಯಿಸಬೇಕೆಂದರೆ ಕೃಷಿ ವಿವಿಗೆ ತಾಳಗುಂದ ವಿವಿ ಎಂದು ಇಡಬೇಕು ಎನ್ನುವ ಒತ್ತಾಯ ಹಿರಿಯರಿಂದ ಕೇಳಿ ಬರುತ್ತಿದೆ. ಆದರೆ ಸರ್ಕಾರ ಇದರ ಬಗ್ಗೆ ಗಮನ ಹರಿಸುತ್ತದಯೇ ಎನ್ನುವುದು ಪ್ರಶ್ನೆಯಾಗಿದೆ.

 

ತಾಳಗುಂದದ ಪುರಾತನ ಶಿವನ ದೇವಸ್ಥಾನ

ದಕ್ಷಿಣ ಕೇದಾರೇಶ್ವರ ಎಂದೇ ಕರೆಯುವ ಬಳ್ಳಿಗಾವಿಯ ಶಿವನ ದೇವಸ್ಥಾನ. ಇಲ್ಲಿ ಶಿವ ಮುಂದೆ ಕೂತಿರುವ ಬೃಹತ್ ಬಸವಣ್ಣನನ್ನು ಹಾಗೇ ನಕ್ಷತ್ರ ಆಕಾರದಲ್ಲಿ ಇರುವ ದೇವಸ್ಥಾನವನ್ನು ಕಾಣಬಹುದಾಗಿದೆ.

ಕೋಟ್ಯಾಂತರ ರೂಗಳ ಬೆಲೆ ಬಾಳುವ ಬಳ್ಳಿಗಾವಿಯ ಪಚ್ಚೆ ಕಲ್ಲಿನ ಲಿಂಗ. ಇದು ದಿನಕ್ಕೆ ಮೂರು ಬಣ್ಣ ಬರುತ್ತದೆ. ಬೆಳಗ್ಗೆ ನೀಲಿ, ಮಧ್ಯಾಹ್ನ ಹಸಿರು ಮತ್ತು ಸಂಜೆ ಜೇನು ತುಪ್ಪದ ಬಣ್ಣ. ಇದನ್ನು ಈ ಹಿಂದೆ ಕಳ್ಳತನಕ್ಕೆ ಪ್ರಯತ್ನಿಸಿದ ಕಾರಣ ಮೂಲ ದೇವಸ್ಥಾನ ಬದಲಾಗಿ ಗ್ರಾಮದ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಇಡಲಾಗಿದೆ.

ಬಳ್ಳಿಗಾವಿಯಲ್ಲಿ ಸೂರಿಲ್ಲದೆ ಅನಾಥನಾಗಿರುವ ಬಸವಣ್ಣ.

  

ಉತ್ತಮ ಶಿಲ್ಪಕಲೆಯಿರುವ ಕಟ್ಟಡ ಧರೆಗೆ ಉರುಳಿರುವುದು.

ಈ ಮುಂಚೆ ಪಚ್ಚೆ ಲಿಂಗ ಇದ್ದದ್ದು ಇಲ್ಲಿಯೇ

ಹೊಯ್ಸಳ ವಿಷ್ಣುವರ್ಧನ ಶಾಮತಲೆಯನ್ನು ಮೊದಲ ಬಾರಿಗೆ ನೋಡಿದ್ದು ಬಳ್ಳಿಗಾವಿಯ ಇದೇ ಹರಿಹರೇಶ್ವರ ದೇವಸ್ಥಾನದಲ್ಲಿ

 

 

 

 

ಮಲೆನಾಡಿನ 

ಆದರೆ