ಕುರುಹನ್ನು ಅರಸುತ್ತಾ!
(ಅಪ್ಪನ ಆಲದ ಮರಕ್ಕೆ ಜೋತಾಡದೆ ತಮ್ಮದೊಂದು ಹೊಸ ಬದುಕು ಕಟ್ಟಬಯಸುವ ಹುಡುಗರಿಗೆ ಅರ್ಪಣೆ. )
ದಿಟದ ಬೇಲಿಗಳ ದಾಟಿ
ಋಣದ ನೆರಳುಗಳ ನೂಕಿ
ಹೊರಟಿರುವೆ ಕುರುಹನರಸಿ
ಹೊಸದೊಂದು ಕನಸನರಸಿ!
ತೊಲಗಾಚೆ ತನ್ನೆರಳೆ
ಸಾರಿ ದೂರ ಬಿಳಲುಗಳೆ
ಬೇಡವೆನಗೆ ನಿಮ್ಮ ನೇಣು
ಬೇಡವೆನಗೆ ಆಧಾರದ ಬೇರು!
ಬೇಯಬೇಕು ನಾನು
ಬರಡು ಬೇಗೆಯಲ್ಲಿ
ಮೀಯಬೇಕು ನಾನು
ಮುಳುಗಿಸುವ ಸುಳಿಯಲ್ಲಿ
ಮೊಗವ ನೀಡಬೇಕು ಆಗಸದೆಡೆಗೆ
ಕೈಚಾಚಬೇಕು ತಾರೆಗಳೆಡೆಗೆ
ಜಗದ ಭಿತ್ತಿಯಲಿ ನನ್ನದೊಂದು ಮುದ್ರೆ
ಚರಿತ್ರೆಯ ಪುಟದಲ್ಲಿ ನನ್ನದೊಂದು ಹೆಸರು!
Rating
Comments
ಉ: ಕುರುಹನ್ನು ಅರಸುತ್ತಾ!
ಉ: ಕುರುಹನ್ನು ಅರಸುತ್ತಾ!
ಉ: ಕುರುಹನ್ನು ಅರಸುತ್ತಾ!