ರಹದಾರೀ ಸಂಕೇತಗಳು ಎಷ್ಟು?
ಮೊನ್ನೆ ಮೊನ್ನೆ ಶೀನ ನನ್ನ ಹತ್ತಿರ ಒಂದು ಪ್ರಶ್ನೆ ಕೇಳಿದ "ಬೆಂಗಳೂರಿನ ರಹದಾರಿ ಸಂಕೇತ ಎಷ್ಟು ಇವೆ ಎಂತ?
ಕರಾರುವಾಕ್ಕಾಗಿ ಹೇಳಬೇಕಾದರೆ ಬೆಂಗಳೂರಿಗೆ ಬಂದು ೪-೫ ವರ್ಷಗಳಾದರೂ ಇಡೀ ಬೆಂಗಳೂರನ್ನು ನೋಡಿಯೇ ಇಲ್ಲ.
ನಾನು ಲೆಕ್ಕ ಮಾಡುವುದು ನೋಡಿ ಆತನೇ ಹೇಳಿದ ಮೂರೇ ಅಲ್ವಾ ಮಾರಾಯ್ರೇ. ನಮ್ಮ ಜೀವನವೂ ಅವೇ ಮೂರು ಸಂಕೇತಗಲ್ಲೇ ಅಡಗಿವೆ.
ಹಸಿರು.... ಓಡ್ತಾನೇ ಇರಿ ಫುಲ್ ಫ್ರೀಡಮ್. ................ ಬಾಲ್ಯ
ಆರೇಂಜ್ .. ಕಿತ್ತಳೆ ... ಸ್ವಲ್ಪ ಅಲರ್ಟ್ ಆಗಿರಿ ............... ಯವ್ವನ
ಕೆಂಪು ತುಂಬಾನೇ ಡೇಂಜರ್ ಅದಂತೂ ಪ್ರಯಾಣವನ್ನೇ ಎಲ್ಲೆಂದರಲ್ಲಿ ನಿಲ್ಲಿಸಿ ಬಿಡುತ್ತೆ............. ವ್ರದ್ಧಾಪ್ಯ
ಏನಂತೀರಾ?
Rating