ದ್ರಾವಿಡ ನುಡಿ ಕೂಟ

ದ್ರಾವಿಡ ನುಡಿ ಕೂಟ



 

ದ್ರಾವಿಡ ನುಡಿಗಳು ಸಂಸ್ಕೃತದಿಂದ ಹುಟ್ಟಿಲ್ಲ, ಮತ್ತು ಅವು ಬೇರೆಯದೇ ಭಾಷಾ ವರ್ಗಕ್ಕೆ ಸೇರಿವೆ ಅಂತ ಮೊತ್ತಮೊದಲಿಗೆ ಪ್ರದಿಪಾದಿಸಿದ ವ್ಯಕ್ತಿ ಯಾರು?.

 

ಅನ್ನೋ ಪ್ರಶ್ನೆಗೆ ಹಲವರು ಪ್ರತಿಕ್ರಿಯಿಸಿದರು. ಇಂತ ಸಂದರ್ಭದಲ್ಲೂ ತಲೆಗೆ ಬಂದ ಕೆಲ ಮಾತುಗಳು.

................................

> 1816 ರಲ್ಲಿ  Alexander D. Campbell ನ    " A grammer of the teloogoo language  " ಅನ್ನುವ ಪ್ರಬಂಧ  / ಪುಸ್ತಕದಲ್ಲಿ ಈ ವಿಷಯ ಬರುತ್ತೆ.

>  Sir. Francis White Ellis ಈ ಬಗ್ಗೆ ತನ್ನ ವಾದವನ್ನು ಇಡುತ್ತಾನೆ. 

> ೧೮೫೬ ರಲ್ಲಿ Robert Caldwell ತನ್ನ Comparative grammar of the Dravidian or South-Indian family of languages ನಲ್ಲಿ ಇದಕ್ಕೆ ತಕ್ಕ ಪುರಾವೆ ಒದಗಿಸಿ ಈ ವಾದವನ್ನು ಗಟ್ಟಿಗೊಳಿಸಿದ. 

>ಈಗಂತೂ ದ್ರಾವಿಡ ಭಾಷೆಗಳು ಬೇರೆಯದೇ ವರ್ಗದ ಭಾಷೆಗಳು ಅಂತ ಎಲ್ಲ ಭಾಶತಜ್ನರೂ ಒಪ್ಪಿಕೊಂಡಿದ್ದಾರೆ.  

 

..........................................................

 

ಸ್ವಲ್ಪ ಒಗ್ಗರಣೆ.

> ಇದಕ್ಕೂ ಮುಂಚೆ ಎಲ್ಲ ಭಾರತೀಯ ಭಾಷೆಗಳೂ ಸಂಸ್ಕೃತದಿಂದ ( ಇಂಡೋ ಯೂರೋಪಿಯನ್ ಭಾಷ ವರ್ಗ) ಹುಟ್ಟಿವೆ ಅಂತ ಪುರಾಣ ಪುಣ್ಯ ಕಥೆಗಳು ಸಾರುತ್ತಾ ಇದ್ದವು. 

>ಪುರಾಣ ಪುಣ್ಯಕಥೆಗಳನ್ನು, ಅಲ್ಲಿನ ಕೆಲ ಪಾತ್ರಗಳ ಮ್ಯಾಜಿಕ್ ಗಳನ್ನು  ಪರಮ ಸತ್ಯವೆಂದೂ ನಂಬಿಕೊಂಡ ಬಂದ ನಮ್ಮ ಜನ ಅಂತದೆ ಜನರೇಳಿದ  ಸಂಸ್ಕೃತವೆ  ಎಲ್ಲ ಭಾಷೆಗಳಿಗೂ ತಾಯಿ ಅನ್ನೋ ಕಥೆ ಯನ್ನು ಅಕ್ಷರಶ: ನಂಬಿಬಿಟ್ಟರು.

>ಈಗಲೂ ಸಂಸ್ಕೃತವೇ ದೇವ ಭಾಷೆ , ಇತರ ಭಾಷೆಗಳು ಕೀಳು / ಅಪಬ್ರಂಶ ವಷ್ಟೇ ಅನ್ನೋ ಮೂರ್ಖರೂ, ಮತ್ತು ಕನ್ನಡವೂ ಸೇರಿದಂತೆ ಅನ್ಯ ಭಾಷೆಗಳನ್ನು ಸಂಸ್ಕೃತಕ್ಕೆ ತಕ್ಕಂತೆ ಹೊಂದಿಸಿಕೊಂಡು ಬಳಸುವ ಒತ್ತಡ ಹೇರುವ, ಸಂಸ್ಕೃತ ಶೈಲಿಯಲ್ಲಿ ಮಾತನಾಡದ ಜನರನ್ನು ಕೆಳಜಾತಿ  ಅಂತ ಮೂದಲಿಸುವ ಪರಮ ಮೌಡ್ಯರು ಅನಾಗರೀಕ ಜನರೂ ಇಲ್ಲಿ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ.

>ಸಾಮಾನ್ಯರನ್ನು ಬಿಟ್ಟು ಹಾಕಿ... ನಮ್ಮ ಹೆಮ್ಮೆಯ ಕೇಶಿರಾಜನೆ ಕನ್ನಡ ಸಂಸ್ಕೃತದಿಂದ ಹುಟ್ಟಿದೆ ಅನ್ನೋ ಭ್ರಮೆ ಇಟ್ಟುಕೊಂಡು ತನ್ನ ಶಬ್ದ ಮಣಿ ದರ್ಪಣವನ್ನು ಬರೆದಿದ್ದಾನೆ  ಅನ್ನುವ ವಾದ ಇದೆ.

>ನಮ್ಮ ಕನ್ನಡದ ಎಲ್ಲ ಹಿಂದಿನ ಲಾಕ್ಷಣಿಕರೂ , ವೈಯಾಕರನಿಗಳೂ ಸಂಸ್ಕೃತವೇ ಕನ್ನಡದ ತಾಯಿ ಭಾಷೆ ಅಂದು ನೇರವಾಗಿ / ಪರೋಕ್ಷವಾಗಿ ಒಪ್ಪಿಕೊಂಡು , ಸಂಸ್ಕೃತಕ್ಕೆ ಹೊಂದಿಸ್ಕೊಂಡು ಕನ್ನಡ ವ್ಯಾಕರಣವನ್ನು ಬರೆದಿದ್ದಾರೆ. 

>ನಮ್ಮ ಶಾಲೆಗಳಲ್ಲೂ ಹಿಂದಿಗೂ ಕನ್ನಡ ಭಾಷೆಯ ವಿಷಯದಲ್ಲಿ ಕನ್ನಡ ವ್ಯಾಕರಣದ ಬದಲು ಸಂಸ್ಕೃತ ವ್ಯಾಕರಣವನ್ನೇ ಕಲಿಸುತ್ತಾರೆ. ಇನ್ನು ಈ ಕನ್ನಡದಲ್ಲಿ?! ಬರೆದ ವಿಜ್ಞಾನದ technical words ಗಳೆಲ್ಲವೂ ಸಂಸ್ಕೃತವೇ.. ನನಗಂತೂ ಈ ಕನ್ನಡದಲ್ಲಿನ (?)  ವಿಜ್ಞಾನ ಕಬ್ಬಿಣದ ಕಡಲೆ. 

>ನಾವು ಕನ್ನಡಿಗರು ಇಷ್ಟು ದಿನ ಸಂಸ್ಕೃತವನ್ನು ಕನ್ನಡದ ತಲೆ ಮೇಲೆ ಇಟ್ಟು ಕೀಳಿರಿಮೆಯಿಂದ ನರಳಿದದಾಯ್ತು. ಇನ್ನು ಮುಂದಾದರೂ ನಮಗೆ ನಮ್ಮದೇ ಆದ ಪರಂಪರೆ, ಹಿನ್ನಲೆ ಇದೆ, ಸಂಸ್ಕೃತದ ಹಂಗು ಇಲ್ಲ ಅಂತ ಸಾರಿ ಸಾರಿ ಹೇಳುವ ಅವಕಾಶ ಇತ್ತೀಚಿಗೆ ನಮಗೆ ಸಿಕ್ಕಿದೆ. 

>ಕನ್ನಡವನ್ನು ಸಂಸ್ಕೃತದ (ದೈವ ಭಾಷೆ ಅನ್ನೋ ಹೆಸರಲ್ಲಿ) ಕೆಳಗೆ ಹಾಕಿ ,ಸಂಸ್ಕೃತ ಬಲ್ಲದವರನ್ನು ತುಂಬಾ ಕೀಳಾಗಿ ಕಂಡ / ಕಾಣುವ ಒಂದು ಕ್ಷುದ್ರ ಪರಂಪರೆಯೇ ನಮ್ಮಲ್ಲಿದೆ. ಅಂತವರಿಗೆ ಬುದ್ದಿ  ಹೇಳುವ ಶಕ್ತಿ ಕನ್ನಡಿಗರಿಗೆ ಬರಲಿ. 

>"ದೇವ ಭಾಷೆ"ಯ ಎದುರು "ಶಿವ ಭಾಷೆ" ಹೆಮ್ಮೆಯಿಂದ ಮೆರೆಯಬೇಕು. ಇನ್ನು ಮುಂದಾದರೂ ಈ ಪ್ರಯತ್ನಗಳು ಸಾಗಲಿ.

 

  
Rating
No votes yet

Comments