ಮಾಡದಿರಬಹುದು ಅಶ್ರುತರ್ಪಣ!

ಮಾಡದಿರಬಹುದು ಅಶ್ರುತರ್ಪಣ!

ಮುಂದೊಂದು ದಿನ

ನಾನು ಕಣ್ಮುಚ್ಚಿ

ಮಲಗಿದರೆ ಆಗಿ ಹೆಣ

ಯಾವ ಕಣ್ಣುಗಳೂ

ಮಾಡದಿರಬಹುದು

ನನಗಾಗಿ ಅಶ್ರುತರ್ಪಣ;

 

ಆದರೆ,

ಈಗ ಹೀಗಳೆಯುವರಲ್ಲಾ

ಬಹಳ ಮಾತಾಡುತ್ತಾನೆಂದು

ಅವರೇ ಆಸುಮನದ 

ಮಾತಿಗಾಗಿ ಚಡಪಡಿಸಬಹುದಂದು!

*******

 

ಆತ್ರಾಡಿ ಸುರೇಶ ಹೆಗ್ಡೆ

Rating
No votes yet

Comments