ಮೊಹಮ್ಮದ್ ಹಾಸ್ಯದಿಂದ ಹೊರತೇ?
ಜಗತ್ತಿನಲ್ಲಿ ಯಾವ ವ್ಯಕ್ತಿಯನ್ನಾದರೂ, ವಿಷಯವನ್ನಾದರೂ ವಿಡಂಬನೆಗೆ ಒಳ ಪಡಿಸಬಹುದು. ಲೌಕಿಕ ಜಗತ್ತಿನಲ್ಲಿ ಅತಿ ಶಕ್ತಿಶಾಲಿಯಾದ ರಾಜ, ದೇಶದ ಅಧ್ಯಕ್ಷನಿಂದ ಹಿಡಿದು ಶಾಲೆಯ ಮುಖ್ಯೋಪಾಧ್ಯಾಯನವರೆಗೆ ಯಾರನ್ನಾದರೂ ಹಾಸ್ಯಕ್ಕೀಡು ಮಾಡಬಹುದು. ಆದರೆ ಧಾರ್ಮಿಕ ಸಂಗತಿಗಳನ್ನು ಮುಟ್ಟಿದರೆ ಜನರು ಸಿರ್ರನೆ ಸಿಡುಕುತ್ತಾರೆ. ನನ್ನನ್ನು ಬೇಕಾದರೂ ಹಾಸ್ಯ ಮಾಡಿ ನನ್ನ ನಂಬಿಕೆಯ ತಂಟೆಗೆ ಬರಬೇಡಿ ಎಂದು ಪ್ರತಿರೋಧಿಸುತ್ತಾರೆ.
ಆದರೆ ಎಲ್ಲಾ ಧಾರ್ಮಿಕರೂ ಒಂದೇ ಬಗೆಯ ಪ್ರತಿರೋಧ ತೋರುವುದಿಲ್ಲ. ಗಣಪತಿಯನ್ನು ನಾನಾ ವೇಷಗಳಲ್ಲಿ ಅಲಂಕರಿಸಿ ವಿಡಂಬನೆ ಮಾಡುವ ಸ್ವಾತಂತ್ರ್ಯ ಹಿಂದೂಗಳಲ್ಲಿದೆ. ತಿರುಪತಿ ತಿಮ್ಮಪ್ಪನ ನಾಮದಿಂದ ಹಿಡಿದು ಇಂದ್ರನ ಲೋಭದವರೆಗೆ ಅನೇಕ ಹಾಸ್ಯ ಸಂಗತಿಗಳಿವೆ. ಯೇಸು ಕ್ರಿಸ್ತನೇ ಬಿದ್ದು ನಗಾಡುವಷ್ಟು ಆತನನ್ನು ಹಾಸ್ಯಕ್ಕೀಡು ಮಾಡಲಾಗಿದೆ.
ಆದರೆ ಇಂತಹ ಟ್ರೀಟ್ ಮೆಂಟಿಗೆ ಹೊರತಾಗಿರುವುದು ಇಸ್ಲಾಂ ಧರ್ಮ. ಹಾಸ್ಯ ಮಾಡುವುದಿರಲಿ, ಮುಸ್ಲೀಮರು ನಂಬಿಕೆಗಳನ್ನು ಪ್ರಶ್ನಿಸಿದರೇನೇ ಐಸ್ ಲ್ಯಾಂಡಿನ ಜ್ವಾಲಾಮುಖಿಯ ಹಾಗೆ ಪ್ರತಿರೋಧ ಸ್ಪೋಟಿಸುತ್ತದೆ. ಎಷ್ಟೇ ಪ್ರತಿರೋಧವಿದ್ದರೂ ಇಸ್ಲಾಮಿನಿಂದ ಹಾಸ್ಯದ ಏಟನ್ನು ತಡೆಯಲು ಸಾಧ್ಯವಾಗಿಲ್ಲ ಎನ್ನುವುದಕ್ಕೆ ಇತ್ತೀಚಿನ ಸಾಕ್ಷಿ: ಸೌತ್ ಪಾರ್ಕ್ ಎಂಬ ಟವಿ ನಗೆ ಕಾರ್ಯಕ್ರಮದ ಈ ಸಂಚಿಕೆ. (ಅಶ್ಲೀಲವೆನಿಸಬಹುದಾದ ಮಾತು, ದ್ರುಶ್ಯಾವಳಿವೆ, ಎಚ್ಚರಿಕೆಯಿಂದ ವೀಕ್ಷಿಸಿ)
http://www.southparkstudios.com/episodes/267114
Comments
ಉ: ಮೊಹಮ್ಮದ್ ಹಾಸ್ಯದಿಂದ ಹೊರತೇ?