ಇವರು ಬಕೇಟ್ ಹಿಡಿಯುವ ಮಂದಿ...
ಮೊನ್ನೆ ನಮ್ಮ ಕಾರ್ಯಾಲಯದ ಮಂದಿಎಲ್ಲಾ ಒಟ್ಟಾಗಿ ಸೇರಿದ್ವಿ. ಅಂದು ನಮ್ಮ ಕಾರ್ಯಾಲಯಕ್ಕೆ ೧೦ ವರುಷ ತುಂಬಿದ ಸಡಗರ. ನಾನು ಆ ಕಾರ್ಯಾಲಯವನ್ನ ಸೇರಿದಾಗ ಕನ್ನಡಿಗರ ಸಂಖ್ಯೆ ಬಹಳವಾಗಿತ್ತು. ಇದ್ದ ೨೫ ಜನರಲ್ಲಿ ೨೦ ಜನ ಕನ್ನಡಿಗರು :) ಮೊದಲ ಆರುತಿಂಗಳು ಯಾವುದೇ ತೊಂದರೆಇಲ್ಲದೇ ಸರಾಗವಾಗಿ ಎಲ್ಲಾ ಕೆಲಸಗಳು ನೆರವೇರಿದವು. ಆಮೇಲೆ ಬಂತು ನೋಡಿ ಗ್ರಹಚಾರ...
ನಮ್ಮ ಕಾರ್ಯಾಲದಮೇಲೆ ತಮಿಳಿಗಳ ವಕ್ರದೃಷ್ಟಿ ಬಿದ್ದೇ ಬಿಡ್ತು. ಹೌದು... ನಮ್ಮ ಹೊಸಾ HR ಅಡ್ಮಿನ್... ಒಬ್ಬ ತಮಿಳಿಗಳು. ಎಡಗಾಲಿಟ್ಟು ಒಳಗೆ ಬಂದವಳು ಒಬ್ಬೊಬ್ಬರಿಗೆ ಒಂದೊಂದು ರೀತಿಯಲ್ಲಿ ತೊಂದರೆ ಕೊಟ್ಟು ಕೆಲಸ ಬಿಡುವಂತೆ ಮಾಡಿದಳು.
ನಮ್ಮ Boss ಮೇಲೆ ಅದೇನು ಮಾಟ ಮಾಡಿಸಿದ್ದಾಳೋ ಗೊತ್ತಿಲ್ಲ... ಖಾಲಿಯಾದ ಹುದ್ದೆಗೆಲ್ಲಾ ತಮಿಳರೇ ಅರ್ಹರೆಂಬಂತೆ ಪ್ರತಿಯೊಂದು ಹುದ್ದೆಗೂ ತಮಿಳರನ್ನೇ ಕರೆದು ಕುಳ್ಳಿರಿಸಿದ್ದಾಳೆ. ಮೊದಲೇ ಬಕೇಟ್ ಪಾರ್ಟಿ.... ಅವಳು ಹೇಳಿದ್ದೇ ವೇದವಾಕ್ಯವಾಗಿದೆ... ದಿನದಲ್ಲಿ ಬಹುತೇಕ ಜಿ-ಟಾಕಿನಲ್ಲಿ ಇರುವ ಈಕೆ ನಮ್ಮ Bossನ ಕಂಡೊಡನೆಯೇ ಯಾರೂ ಮಾಡದಿರುವಷ್ಟು ಕೆಲಸ ಮಾಡುತ್ತಿರುವುದಾಗಿ ನಾಟಕವಾಡುತ್ತಾಳೆ...
ನಮ್ಮ Bossನ ಮತ್ತೆ ನಮ್ಮನ್ನ ಆ ದೇವರೇ ಕಾಪಾಡಬೇಕು...