ನನಗಾಗಿ ಬರುವರು…
ಬರಹ
ಆಗಸದಲ್ಲಿ ಹಾರುವ ಬಯೆಕೆಯಿದು.
ಆದರೆ, ಹಾರುವ ನೀತಿ ಯಾವುದು?
ಮನ, ಮನದ ಬಾಗಿಲಲ್ಲಿ ನಿ೦ತು
ಕೂಗುತಿದೆ, ಕಿರಿಚುತಿದೆ…
ಕೇಳುವವರಾರು? ಹೇಳುವವರಾರು?
ಅನ೦ತದಾರಿಯ ಪಕ್ಕದಲ್ಲಿ ಕುಳಿತು
ಕಾಯುತ್ತಲಿದೆ ಈ ಮನವಿದು.
ಬರುವವರಾರು? ಯಾರವರು? ತಿಳಿವಿಲ್ಲ.
ಬರುವರಿರುವರು ತನಗೋಸ್ಕರ ಎ೦ದು
ಹೇಳುವುದಿದು, ಕಾಯುತ್ತಲಿಹುದು.
ಬರುವವರ ಪರಿಚಯವು ಇಲ್ಲವು,
ಹೇಗಿಹರು? ಏನಿಹರು? ನಿರುತ್ತರವು.
ನೆನೆದಾಗ ಮನದಲ್ಲಿ ನವ ಚೇತನ ಬರುವುದು,
ನೋಡಲವರನ್ನ ಮನದಲ್ಲಿ ತವಕವಿದು,
ಬರುವರು ಬರುವರು ಎನ್ನುವುದು…