ಆಕ್ಷೇಪ - ಉತ್ತರ
ಬರಹ
ಆಕ್ಷೇಪ
ಆನಂದರಾಮ ಶಾ-ಸ್ತ್ರೀ ಎಂಬ
’ಮಹಾಪುರುಷ’ ಇದ್ದಾನಲ್ಲ, ಈತ,
ತಾನು ಮಹಾಪಂಡಿತ ಎಂದುಕೊಂಡಾತ,
ಬರೆದೇ ಬರೀತಾನೆ,
ಬರಿದೇ ಬರೀತಾನೆ,
ಕೊರೆದೇ ಕೊರೀತಾನೆ,
ತಾನು ಮಹಾಜ್ಞಾನಿ ಎಂಬಂತೆ
ಮೆರೀತಾನೆ!
ಆದರೆ ಈತ
ಓದುಗರ ಪ್ರತಿಕ್ರಿಯೆ ಓದೋಲ್ಲ,
ಪ್ರತಿಕ್ರಿಯೆಗೆ ಪ್ರತಿಸ್ಪಂದಿಸೋಲ್ಲ!
ಎಂಥಾ ವಯ್ಯ ಈ ವಯ್ಯ!
ಸಿಗಲಿ ಎದುರಿಗೆ,
ನೋಡ್ಕೋತೀವಿ ಒಂದು ಕೈಯ!
ಉತ್ತರ
ಓದುತ್ತಿದ್ದೇನೆ ಮಿತ್ರರೇ,
ತಮ್ಮೆಲ್ಲ ಪ್ರತಿಕ್ರಿಯೆಗಳನ್ನೂ.
ಹೇಳಲೇನುಂಟೆನಗಿನ್ನು,
ಹೇಳಿಬಿಟ್ಟಿರುವಾಗ ಮನದಲಿದ್ದುದನ್ನು.
ಹೊಸ ದೃಷ್ಟಿ, ಹೊಸ ಹೊಳಹು, ಹೊಸ ವಿಚಾರಗಳು
ಲಭ್ಯವಾಗುವುವೆನಗೆ ತಮ್ಮ ನುಡಿಗಳೊಳು.
ಓದಿ ಮನದೊಳು ಮನನ ನಾ ಗೈಯುತಿರುವೆ;
ಮೋದದಿಂ ತಮಗೆ ಮನದಲೆ ನಮಿಸುತಿರುವೆ.
(ನಂತರ ಸೇರಿಸಿದ್ದು):
ಉತ್ತರಿಸಬೇಕಾದ್ದಕ್ಕೆಲ್ಲ ಉತ್ತರಿಸುತ್ತಬಂದಿದ್ದೇನೆ;
ಮೌನವೂ ಹಲವೊಮ್ಮೆ ಪ್ರಬಲ ಉತ್ತರ ತಾನೆ?