ಕುಡಿ ಬ್ಯಾಡ ಮಗಾ ನಿ ಇಷ್ಟ್ಯಾಕ ಕುಡಿತಿ

ಕುಡಿ ಬ್ಯಾಡ ಮಗಾ ನಿ ಇಷ್ಟ್ಯಾಕ ಕುಡಿತಿ

ಭರತ್ ರವರ  "ಅನಿಸುತಿದೆ ಯಾಕೋ ಇಂದು,ಬಾರೆಲ್ಲ ನನ್ನದೆ ಎಂದು" ಕವನಕ್ಕೆ ಪ್ರತಿಕ್ರಿಯೆ


ಕುಡಿ ಬ್ಯಾಡ ಮಗಾ ನಿ ಇಷ್ಟ್ಯಾಕ ಕುಡಿತಿ ,
ಕುಡಿದು ಕುಡಿದು ರೋಡ್ ಮ್ಯಾಗ ನೀ ಸಾಯಿತಿ,
ಕುಡಿದು ನೀ ಎಡವಟ್ ಮಾಡ್ಕೋತಿ,
ಮನಿ ಮಂದಿ ಇಜ್ಜತ್ ನೀ ಕಳಿತಿ.


kingfisher ಅಂತ ಬಾಯಾಗ್ bottle ನೀ ಹಿಡಿತಿ,
ವಿಜಯ್ ಮಲ್ಯನ ಹೊಟ್ಟಿ ನೀ ತುಂಬತಿ,
ಲಿವರ್ ಕೆಟ್ಟಿ ಹೋದು ಅಂತ ಎದಿ ಬಡ್ಕೊಂಡು ನೀ ಅಳತಿ,
ಮಲ್ಯನ ದವಖಾನ್ಯಾಗ ರೊಕ್ಕ ನೀ ಬಡಿತಿ.


ಬಾರ್ ಎಲ್ಲ ನಂದೇ ಅಂತ ನೀ ಒದರತಿ,
ಸಿಕ್ಕವರ ಜೊತೆ ಜಗಳ ನೀ ತೆಗಿತಿ,
ದಿನ ನಾಕು ಓದ್ದುಸ್ಕೊಂಡು ಮನಿಗಿ ಬರತಿ,
ಮನಿಗ್ ಬಂದು ಹೆಂಡ್ತಿ ಮ್ಯಾಲ ಪೌರುಷ ತೋರುಸ್ತಿ.


ಕುಡಿ ಬ್ಯಾಡ ಮಗಾ ನಿ ಇಷ್ಟ್ಯಾಕ ಕುಡಿತಿ ,
ಕುಡಿದು ಕುಡಿದು ರೋಡ್ ಮ್ಯಾಗ ನೀ ಸಾಯಿತಿ,


-ಅಶ್ವಿನಿ

Rating
No votes yet

Comments