ಬಿರಿದ ಭಾವಗಳ ಹಿಂದೆ ಓಡುವ ಮುನ್ನ...

ಬಿರಿದ ಭಾವಗಳ ಹಿಂದೆ ಓಡುವ ಮುನ್ನ...

      ನನ್ನ ಗೆಳೆಯ. ಹೆಸರು ಬೇಡ. ತುಂಬಾ ನಾಜೂಕು ಸ್ವಭಾವ. ಅಗತ್ಯವಿಲ್ಲದಿದ್ದರೆ  ಜಪ್ಪಯ್ಯ ಅಂದರೂ ಬಾಯಿ ತೆರೆಯುವವನಲ್ಲ. ಓದು ಅವನ ಪ್ರೀತಿಯ ಹವ್ಯಾಸ. ಹಾಗಾಗಿಯೇ ಎಂ ಎಸ್ಸಿಯ ಪ್ರಥಮ ವರ್ಷದಲ್ಲಿ ಆತನಿಗೆ ಅತ್ಯಂತ ಹೆಚ್ಚು ಅಂಕ. ಎಲ್ಲ ಗುರುಗಳ ಪ್ರೀತಿಯ ಶಿಷ್ಯ. ಕಂಪ್ಯೂಟರ್ ಎಂದರೆ ಪ್ರಾಣ.  ಎಲ್ಲವೂ ಚೆನ್ನಾಗಿಯೇ ಇತ್ತು. ಆಕೆಯ ಪರಿಚಯ ಆಗುವ ತನಕ. ಆರಂಭದಲ್ಲಿ ಎಲ್ಲರ ಹಾಗೆಯೇ ಆ ವಿಷಯದ ಕುರಿತು ಆತನೂ ಉದಾಸೀನನಾಗಿ ಇದ್ದ. ಆದರೆ ಗೆಳೆಯರು ಬಿಡಬೇಕಲ್ಲ. ದಿನವೂ ಗಾಳಿ ಹಾಕತೊಡಗಿದರು. ಅವನೋ ಬಿಸಿ ಗಾಳಿ ತುಂಬಿದ ಬಲೂನಿನಂತೆ ಸ್ವಚ್ಛಂದ ಕನಸಿನ ಲೋಕದಲ್ಲಿ ಹಾರತೊಡಗಿದ. ಕನಸು ಕಾಣುವಾಗ ಯಾವಾಗ ಕೈಯಿಂದ ಪುಸ್ತಕ ಜಾರಿತೋ ತಿಳಿಯಲೇ ಇಲ್ಲ. ಕುಂತರೂ ನಿಂತರೂ ಅವಳದೇ ಮಾತು. ಅವೇ ಮಾತು ಕೇಳಿ ಕೇಳಿ ಅವನ ಹತ್ತಿರ ಸುಳಿಯದೇ ಹೋದರು ಅದೇ ಗೆಳೆಯರು. 

    ಇಷ್ಟೇ ಆಗಿದ್ರೆ ಮುಗಿತಿತ್ತೇನೋ ಆದರೆ ಆಕೆಯೂ ಕೂಡ ಆತನ ಪ್ರೀತಿಗೆ ಸಮ್ಮತಿಸಿದ್ದು ಮಂಗನಿಗೆ ಹೆಂಡ ಕುಡಿಸಿದಂತಾಯ್ತು. ಎಂದೂ ಸರಿಯಾಗಿ ತಲೆಯೇ ಬಾಚದವನು, ಇನ್ ಶೆರ್ಟ್ ಮಾಡಿ ಕನ್ನಡಿಯ ಮುಂದೆ ಕಾಲು ಗಂಟೆ ನಿಲ್ಲದಿದ್ದರೆ ಆತನಿಗೆ ತೃಪ್ತಿಯೇ ಇರುತ್ತಿರಲ್ಲಿಲ್ಲ.  ಇದರ ಫಲಿತಾಂಶವೆಂಬಂತೆ  ಗಾನ್ ಪೇಷೇಂಟ್ ನ ಬ್ಲೆಡ್ ಪ್ರೆಸರ್ ಇಳಿಯುವಂತೆ ಮಾರ್ಕಗಳು ಇಳಿಯತೊಡಗಿದವು. ಆದರೆ ಅವನು "ಮಗ ಇನ್ನು ಮುಳುಗಿದ' ಅಂತ ತಿಳಿದುಕೊಂಡವರಿಗೆ ಅಚ್ಚರಿಯಾಗುವಾಗುವ ಹಾಗೆ ಕಷ್ಟಪಟ್ಟು ಸುಧಾರಿಸಿಕೊಂಡು ಓದಿದನಾದರೂ ಎರಡನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು. ಆದರೂ ಕಡೆಗೆ ಆ ಹುಡುಗಿ ಸಿಕ್ಕಲ್ಲಿಲ್ಲ. ಆಕೆಗೆ ಮದುವೆ ಗೊತ್ತಾಯ್ತು. ಒಂದು ದಿನ ಅತ್ತು ಕರೆದು 'ನೀನು ನನ್ನನ್ನು ತಂಗಿ ಅಂದುಕೋ' ಅಂದಳು. ಅವನಿಗೆ ಅಳಲು ಕಣ್ಣಿನಲ್ಲಿ ನೀರಿರಲಿಲ್ಲ. ಎಚ್ಚೆತ್ತು ದಿನ ಇಡೀ ಹೆಣ್ಣು ಕುಲವನ್ನೇ ಶಪಿಸಿದ. ಆತನಿಗೆ ಆ ಆಘಾತದಿಂದ ಹೊರಬರಲು ಒಂದೆರಡು ವರ್ಷಗಳೇ ಬೇಕಾಯಿತು.

ಇಷ್ಟೆಲ್ಲ ಆದಮೇಲೆ ಒಂದು ವಿಷಯ ಹೇಳದಿದ್ರೆ ವಿಷಯ ಅಪೂರ್ಣ ಆಗುತ್ತೆ. ಎಂ ಎಸ್ಸಿ ಫೈನಲ್ ಇಯರ್ ಫಲಿತಾಂಶ ಬಂದಾಗ ನನ್ನ ಗೆಳೆಯನ ಹುಡುಗಿ ಪ್ರಥಮ ರ್ಯಾಂಕ್(rank) ಬಂದಿದ್ದಳು.

Rating
No votes yet

Comments