ಕನ್ನಡಸಾಹಿತ್ಯಡಾಟ್‌ಕಾಂ ತುಮಕೂರು ಜಿಲ್ಲೆ ಬೆಂಬಲಿಗರ ಬಳಗದ ಉದ್ಘಾಟನಾ ಸಮಾರಂಭ
ಕನ್ನಡಸಾಹಿತ್ಯಡಾಟ್‌ಕಾಂ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುತ್ತಾ ಹೋಗುತ್ತಿದೆ ಎನ್ನುವುದು ಸಂತೋಷಕರವಾದಂತಹ ಸಂಗತಿ. 'ಬೆಂಬಲಿಗರ ಬಳಗಗಳು' ಬರಿ ಸೈಬರ್ ಸ್ಪೇಸ್‌ನ ವಿರ್ಚುವಲ್ ಚಟುವಟಿಕೆಗೆ ಮಾತ್ರ ಸೀಮಿತವಾಗದೆ ಭೂಮಿಗಿಳಿದ ಜನರಿಗೆ ಹತ್ತಿರವಾಗುತ್ತ ಅನೇಕ ಪ್ರಶ್ನೆಗಳನ್ನು, ಸಂವಾದಗಳನ್ನು ಹುಟ್ಟಿ ಹಾಕುತ್ತಿವೆ. ಇದಕ್ಕೆ ಪೂರಕವೆಂಬಂತೆ ಹಲವೆಡೆ ಬೆಂಬಲಿಗರ ಬಳಗಗಳು ಸಹ ಹುಟ್ಟಿಕೊಳ್ಳಲಾರಂಭಿಸಿವೆ.
ಈ ನಿಟ್ಟಿನಲ್ಲಿ ತುಮಕೂರು ಜಿಲ್ಲೆಯ ಕನ್ನಡಸಾಹಿತ್ಯಡಾಟ್‌ಕಾಂ ಆಸಕ್ತರು "ತುಮಕೂರು ಜಿಲ್ಲೆಯ ಕನ್ನಡಸಾಹಿತ್ಯಡಾಟ್‌ಕಾಂ ಬೆಂಬಲಿಗರ ಬಳಗ"ದ ವಿದ್ಯುಕ್ತ ಉದ್ಘಾಟನೆಯ ಕಾರ್ಯಕ್ರಮಕ್ಕೆ ಸಜ್ಜಾಗುತ್ತಿದ್ದಾರೆ. ಕಾರ್ಯಕ್ರಮದ ವಿವರಗಳು ಕೆಳಕಂಡಂತಿವೆ:-
ಉದ್ಘಾಟಕರು:
ಶ್ರೀ ಪಿ. ಶೇಷಾದ್ರಿ
ರಾಷ್ಟ್ರಪ್ರಶಸ್ತಿ ವಿಜೇತ ಚಲನಚಿತ್ರ ನಿರ್ದೇಶಕರು
ಅಧ್ಯಕ್ಷತೆ:
ಡಾ|| ಎಂ ಎನ್ ಚನ್ನಬಸಪ್ಪ
ಆಡಳಿತಾಧಿಕಾರಿಗಳು
ಸಿದ್ಧಗಂಗಾ ತಾಂತ್ರಿಕ ಕಾಲೇಜು,
ತುಮಕೂರು
ಮುಖ್ಯ ಅತಿಥಿಗಳು:
ಶ್ರೀ ಕೊಪ್ಪಳ್ ನಾಗರಾಜ್
ಎಸ್‌ಬಿಎಂ ಅಧಿಕಾರಿಗಳ ಒಕ್ಕೂಟ, ಬೆಂಗಳೂರು,
ಡಾ||ಸುರೇಶ್‌ಕುಮಾರ್
ನಿರ್ದೇಶಕರು
ಚನ್ನಬಸವೇಶ್ವರ ತಾಂತ್ರಿಕ ಕಾಲೇಜು, ಗುಬ್ಬಿ,
ಶ್ರೀ ಎಸ್ ನಾಗಣ್ಣ
ಸಂಪಾದಕರು
ಪ್ರಜಾಪ್ರಗತಿ,
ಪ್ರೊ|| ಎಸ್ ಆರ್ ದೇವಪ್ರಕಾಶ್
ಪ್ರಾಂಶುಪಾಲರು, ಶ್ರೀದೇವಿ ತಾಂತ್ರಿಕ ಕಾಲೇಜು, ತುಮಕೂರು,
ಶ್ರೀ ಕರುಣಾಕರ್
ವಿಭಾಗ ಮುಖ್ಯಸ್ಥರು
ಇನ್‌ಪರ್‌ಮೇಶನ್ ಹಾಗು ಇಂಜಿನಿಯರಿಂಗ್
ಶ್ರೀ ಸಿದ್ಧಾರ್ಥ ತಾಂತ್ರಿಕ ಕಾಲೇಜು, ತುಮಕೂರು,
ಶ್ರೀ ನಿಟ್ಟೂರು ರಾಂಪುರ ಸದಾನಂದ
ಅಧ್ಯಕ್ಷರು, ಕನ್ನಡಸಾಹಿತ್ಯ ಪರಿಷತ್ತು, ತುಮಕೂರು,
ಸಂಪಿಗೆ ಜಗದೀಶ್
ನೀರಾವರಿ ತಜ್ಞ
ಜಲಸಂಪನ್ಮೂಲ ಇಲಾಖೆ
ಕರ್ನಾಟಕ ಸರ್ಕಾರ,
ಡಾ|| ಎಸ್ ಕೆ ನಾರಾಯಣ
ಪ್ರಾಂಶುಪಾಲರು, ಎಚ್ ಎಂ ಎಸ್ ತಾಂತ್ರಿಕ ಕಾಲೇಜು, ತುಮಕೂರು,
ಶ್ರೀ ಎಚ್ ಜಿ ಸಣ್ಣಗುಡ್ಡಯ್ಯ,
ಹಿರಿಯ ಸಾಹಿತಿ, ತುಮಕೂರು,
ಪ್ರೊ||ಎಚ್ ಎನ್ ಜಗನ್ನಾಥ ರೆಡ್ಡಿ
ಬಿಐಟಿ, ಬೆಂಗಳೂರು
ಶ್ರೀ ಕೆ ದೊರೈರಾಜ್
ನಿವೃತ್ತ ಜಂಟಿ ನಿರ್ದೇಶಕರು, ಪಿ ಯು ಶಿಕ್ಷಣ ಇಲಾಖೆ, ತುಮಕೂರು
ವಿಷಯ ಮಂಡನೆ:
"ಮಾಹಿತಿ ತಂತ್ರಜ್ಞಾನ ಸಂದರ್ಭದಲ್ಲಿ ಕನ್ನಡ ಹಾಗು ಸಂಸ್ಕೃತಿ-ಒಂದು ಪ್ರತಿಕ್ರಿಯೆ"
ಶೇಖರ್‌ಪೂರ್ಣ
`ಬರಹ' ಹಾಗು `ನುಡಿ' ಪ್ರಾತ್ಯಕ್ಷಿಕೆ
ಅರೇಹಳ್ಳಿ ರವಿ, ಬೆಂಗಳೂರು.
ದಿನಾಂಕ: ೧೦-೧೨-೨೦೦೬ ಬೆಳಿಗ್ಗೆ: ೧೦.೦೦ ಗಂಟೆಗೆ
ಸ್ಥಳ: ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿ ಸಭಾಂಗಣ
ಸಿದ್ಧಗಂಗಾ ಬಾಲಕರ ಕಾಲೇಜು, ಪುರಸಭಾ ವೃತ್ತದ ಸಮೀಪ, ತುಮಕೂರು.
ಸಹೃದಯಿಗಳು ಮತ್ತು ಸಮಾನಾಸಕ್ತರೆಲ್ಲಾ ಈ ಕಾರ್ಯಕ್ರಮಕ್ಕೆ ಆಗಮಿಸಬೇಕಾಗಿ ವಿನಂತಿ.
ಎಲ್ಲ ಬೆಂಬಲಿಗರ ಬಳಗದ ಪರವಾಗಿ
ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ: ಕೋಟೆ ನಾಗಭೂಷಣ್(ತುಮಕೂರು)
-98800 18381