ವಿಕಾಸವಾದವೆಂಬ ಮೊಂಡುವಾದ ! (ತಿಳಿಹಾಸ್ಯ)
ಸಂಪದಿಗರೇ,
ಇದೊಂದು ತಿಳಿಹಾಸ್ಯ ಬರಹ. ಇದರಲ್ಲಿ ಸ್ವಲ್ಪ 'ಕುಹಕ' ಇದೆ, ಆದರೆ ದುರುದ್ದೇಶ ಇಲ್ಲ. ಇದಕ್ಕೆ ಸ್ಪೂರ್ತಿ ಸಂಪದದಲ್ಲಿ ನಾನು ಓದಿದ ಕೆಲವು ಪ್ರತಿಕ್ರಿಯೆಗಳು. ಕೆಲವು ನಾಸ್ತಿಕ (?) ಸಂಪದಿಗರು ಆಸ್ತಿಕರ ಕಾಲೆಳೆಯುವುದನ್ನೇ ಕಾಯಕ ಮಾಡಿಕೊಂಡಿರುವಂಥವರು ಬರೆದ ಪ್ರತಿಕ್ರಿಯೆಗಳನ್ನು ನೋಡಿ ನನಗೂ ಅವರ ಥರಹ ಬರೆಯಬೇಕೆನ್ನಿಸಿತು. ಆದರೆ ಈ ಸಲ ಪಾತ್ರಗಳು ಮಾತ್ರ ಅದಲು ಬದಲು. 'ಆ' ವ್ಯಕ್ತಿ (ಗಳು) ಆಧ್ಯಾತ್ಮದ ಬಗ್ಗೆ, ದೇವರು ಇತ್ಯಾದಿ ನಂಬಿಕೆಗಳ ಬಗ್ಗೆ, ಅದರಲ್ಲೂ ಮುಖ್ಯವಾಗಿ ಹಿಂದೂ ಧರ್ಮದ ಬಗ್ಗೆ ಬರೆದ ಅರ್ಧಸತ್ಯಗಳು, ಕುಚೋದ್ಯಗಳನ್ನು ಅನುಸರಿಸಿ ಅವರ ಇಷ್ಟದ ವಿಷಯವಾದ ವಿಕಾಸವಾದಕ್ಕೆ ಅನ್ವಯಿಸಿ ನಾನು ಬರೆಯುತ್ತೇನೆ. ಇಲ್ಲಿ ನಾನು ಬರೆಯುವ ಯಾವುದೇ ವಿಷಯ ನನ್ನ ನಿಜವಾದ ಅಭಿಮತವಾಗಲೀ ಪ್ರಶ್ನೆಗಲಾಗಲೀ ಅಲ್ಲ. ನಿಜಕ್ಕೂ ನನಗೆ ವಿಕಾಸವಾದದ ಬಗ್ಗೆ ಪ್ರಷ್ನೆಗಳನ್ನು ಕೇಳುವಷ್ಟು ಆಳವಾದ ಜ್ನಾನವಿಲ್ಲ. ಹಾಗೆಯೇ ಅವರಿಗೂ ಆಧ್ಯಾತ್ಮದ ಬಗ್ಗೆ ನಯಾ ಪೈಸೆ ತಿಳಿದಿರಲಿಲ್ಲ, ತಿಳಿಯುವ ಆಸಕ್ತಿಯೂ ಇರಲಿಲ್ಲ ಎಂದು ಅರಿತುಕೊಂಡಿದ್ದೇನೆ (ಇದನ್ನು ಅವರು ಒಪ್ಪುವುದಿಲ್ಲ ಎಂದು ತಿಳಿದಿದೆ.
ಹಾಗೆಯೇ ಉಬುಂಟು ಕನ್ನಡ ಸ್ಕ್ರಿಪ್ಟ್ ಅನ್ನು ಬಳಸುತ್ತಿರುವುದರಿಂದ ಅಲ್ಲಲ್ಲಿ ಕೆಲವು ಅಕ್ಷರ ಅಧ್ವಾನಗಳಿವೆ. ಅದು ಉಬುಂಟು ತಪ್ಪಲ್ಲ, ಕಲಿಯದೇ ಇರುವುದು ನನ್ನ ತಪ್ಪು ಅಷ್ಟೆ.
ನಾನು ಬರೆದಿದ್ದನ್ನು ಓದಿ ನಿಮಗೆ ನಗು ಬಂದರೆ ಸಂತೋಷ. ಇದನ್ನು ಓದಿದವರಿಗೆ ಇದಕ್ಕಿಂತಲೂ ಉತ್ತಮವಾದ ವಿಷಯಗಳು/ಪ್ರಷ್ನೆಗಳು ಹೊಳೆಯಬಹುದು. ಅವುಗಳನ್ನು ದಯವಿಟ್ಟು ಬರೆಯಲು ಮರೆಯಬಬೇಡಿ.
ವಿಕಾಸವಾದವೆಂಬ ಗೊಡ್ಡು ನಂಬಿಕೆ
--------------------------
ಮೊದಲ್ನೇದಾಗಿ ವಿಕಾಸವಾದ ಎಂಬೋದೊಂದು ಗೊಡ್ಡು ನಂಬಿಕೆ. ಯಾಕೇಂದ್ರೆ ಅದು ಗೊಡ್ಡು ಅನ್ನೋದನ್ನ ನಾನೂ ನಂಬ್ತೀನಿ. ಅದು ಗೊಡ್ಡಲ್ಲ ಅಂದಿದ್ರೆ ನಾನೇಕೆ ಹಾಗೆ ನಂಬ್ತಿದ್ದೆ ನೀವೇ ಹೇಳಿ?? ಇರಲಿ. ವಿಕಾಸವಾದದ ಬಗ್ಗೆ ನಂಗೆ ಕೆಲವು ಮೂಲಭೂತ ಸಂಶಯಗಳಿವೆ. ಅದು ಗೊಡ್ಡು ಯಾಕಲ್ಲ ಎಂಬುದೇ ನನ್ ಮೊದಲ್ನೇ ಸಂಶಯ. ಅದು ಗೊಡ್ಡಲ್ಲದಿದ್ದರೆ ಡಾರ್ವಿನ್ನನ್ನ ಮೊದಲೂ ನಂತರವೂ ಯಾಕೆ ಅದನ್ನು ಯಾರೂ ಪ್ರತಿಪಾದಿಸಿಲ್ಲ? ಇನ್ನು ಅದರ ತತ್ವಗಳೋ, ಅದ್ವಾನ... ಒಂದೂ ಅರ್ಥವಾಗದು. ಅದೇನೋ ಹೈಡ್ರೋಜನ್ ಕಾರ್ಬನ್ನಿನಿಂದ ಮೊದಲನೆಯ ಜೀವಿ ಉತ್ಪತ್ತಿಯಾಯಿತಂತೆ.. ಎಷ್ಟೋ ಕೋಟಿ ಕೋಟಿ ವರ್ಷಗಳ ಹಿಂದೆ... ಅಷ್ಟು ವರ್ಷಗಳ ಹಿಂದೆ ಆಗಿದ್ದು ಡಾರ್ವಿನ್ನನಿಗೆ ಹ್ಯಾಗ್ರೀ ಗೊತ್ತಾಯ್ತು?? ಅವ್ನೇನು ಅದನ್ನು ನೋಡಿದ್ದನಾ? ಅಥವಾ ಐನ್ಸ್ಟೀನ್ ನ 'ಟೈಮ್ ಮಷೀನ್' ಅನ್ನು ಉಪಯೋಗಿಸಿ ಅಷ್ಟು ಸಮಯ ಹಿಂದೆ ಹೋಗಿ ಬಂದಿದ್ದಿರಬಹುದೇ?... ಇದೇ ವಿಷ್ಯ ನನ್ ತಲೆ ಕೊರೀತಾ ಇತ್ತು... ಆಮೇಲೆ ಯಾರೋ ಹೇಳಿದ್ರು... ಡಾರ್ವಿನ್ ಏನೂ ನೋಡಿಲ್ಲ, ಆ ಥರ ಆಗಿತ್ತು ಅಂತ ವಾದಿಸಿದ್ದ ಅಂತ... ಏನೋ ವಿಜ್ನಾನ ಅಂದ್ರೆ ಎಲ್ಲದಕ್ಕೂ ಸಾಕ್ಷಿ ಬೇಕು ಅಂತ ಅಂದ್ಕೊಂಡಿದ್ದೆ... ಇದು ಹಿಂಗಿದೆ ಅಂತ ನಂಗೇನು ಗೊತ್ತಿತ್ತು??
ಇರಲಿ ಬಿಡಿ.. ಸಾಕ್ಷಿ ಮನೆ ಹಾಳಾಗಿ ಹೋಗ್ಲಿ.. ಈಗ ಮೊದಲ ಜೀವ ಉತ್ಪತ್ತಿಯನ್ನೇ ತಗೊಳ್ಳಿ... ಆ ಜೀವಿ ಹೈಡ್ರೋಜನ್ ಕಾರ್ಬನ್ ನಿಂದನೇ ಉತ್ಪತ್ತಿ ಯಾಕೆ ಆಯ್ತು? ಕಾಪರ್ ಮತ್ತು ಐರನ್ ನಿಂದ ಯಾಕೆ ಆಗಿಲ್ಲ? ಇದು ದೊಡ್ಡ ಮೋಸ ಅಂತ ನಂಗೆ ಅನ್ನಿಸೋದು... ಕಾಪರ್ ಐರನ್ ನಿಂದ ಉತ್ಪತ್ತಿ ಆಗಿದ್ದಿದ್ರೆ ಈಗಿನ ಥರಹ ರಕ್ತಪಾತವೇ ಇರ್ತಿರ್ಲಿಲ್ಲ. ಕತ್ತಿಯಿಂದ ಹೊಡೆದ್ರೂ ಗುಂಡು ಹಾರ್ಸಿದ್ರೂ ಏನೂ ಆಗ್ತಿರ್ಲಿಲ್ಲ. ಅಪಘಾತದಿಂದ ಸಾಯೋದು ಇತ್ಯಾದಿ ಸಮಸ್ಯೆಗಳಿರ್ತಿಲ್ಲಿಲ್ಲ ಅಲ್ಲವೇ? ಹ ಹಾ.. ಇದು ಈ ವಿಕಾಸವಾದದ ಹಿಂಸಾತ್ಮಕ ಮುಖವನ್ನು ತೋರಿಸುತ್ತದೆ. ಅದು ಮನಸು ಮಾಡಿದ್ದಿದ್ದರೆ ಈಗಿನ ಮಾನವರ ಎಷ್ಟೋ ನೋವುಗಳನ್ನು ಇಲ್ಲವಾಗಿಸಬಹುದಿತ್ತು. ಈಗ ಹೇಳಿ - ವಿಕಾಸವಾದಕ್ಕೂ ನರೇಂದ್ರ ಮೋದಿಗೂ ಏನು ವ್ಯತ್ಯಾಸ? ಅದಕ್ಕೇ ನನಗೆ ಈ ವಿಕಾಸ ತತ್ವಗಳನ್ನೂ ಡಾರ್ವಿನ್ನನ್ನೂ ಕಂಡರಾಗದು.. ಏನು ಮಾಡೋಣ ಹೇಳಿ.. ಎಷ್ಟೋ ಮೂರ್ಖ ವಿಕಾಸವಾದಿಗಳು ಇನ್ನೂ ಈ ಹಳೆಯ ಉಪಯೋಗವಿಲ್ಲದ ಗೊಡ್ಡು ವಾದಗಳನ್ನೇ ನಂಬಬೇಕು ಅಂತ ಹೇಳ್ತಾರೆ. ಎಲ್ಲ ಕಾಲದ ಮಹಿಮೆ! ಅಲ್ಲಾ, ಈ ಜನರ ತಲೆಗೆ ಹೊಸ ವಿಚಾರಗಳು ಬರೋದೇ ಇಲ್ಲಾ ಅಂತೀನಿ! ರಾಮ ರಾಮ !!
ಇದು ಅಷ್ಟಕ್ಕೇ ನಿಲ್ಲುವುದಿಲ್ಲ. ಈ ವಿಕಾಸವಾದ ಓದುತ್ತಾ ಹೋದಂತೆಲ್ಲ ತಲೆ ಚಿಟ್ಟು ಹಿಡಿದು ಹೋಗುತ್ತೆ. ಈ ಭೂಮಿ ಅನ್ನೋದು ಮೊದಮೊದಲು ಅಂದರೆ ಜೀವಿಗಳು ಉಗಮ ಆಗೋದಕ್ಕಿಂತ ಎಷ್ಟೋ ವರ್ಷಗಳ ಮೊದಲು ಈಗಿನ ಸೂರ್ಯನ ಥರಾನೇ ಇತ್ತಂತೆ. ಅಷ್ಟೇ ಬಿಸಿಯಾಗಿ, ಅನಿಲದ ರೂಪದಲ್ಲಿ ಇತ್ತಂತೆ. ಅಲ್ಲಾರೀ.. ಇದನ್ನೂ ನಂಬೇಕಾ ಅಂತೀನಿ? ಒಂದು ವೇಳೆ ಹಾಗೆ ಇತ್ತೂ ಅಂತಾನೇ ಅಂದ್ಕೊಳ್ಳಿ.. ಅದನ್ನ ಈಗಿನಿ ರೂಪಕ್ಕೆ ತಂದೋರ್ಯಾರು? ಹ್ಯಾಗೆ ತಂದ್ರು? ಅಷ್ಟು ಬಿಸಿ ಗಾಳಿಯನ್ನ ತಂಪು ಮಾಡಕ್ಕೆ ಬೇಕಾದ 'ಬೀಸಣಿಗೆ' ಎಷ್ಟು ದೊಡ್ಡದಾಗಿರ್ಬೋದು? ಹೋಗಲಿ, ಆ ಗಾಳೀನೇ ಈಗಿನ ಕಲ್ಲು ಮಣ್ಣು ಆಗಿ ಪರಿವರ್ತನೆ ಆಗಿದೆ ಅಂತಂತಿದ್ರೆ ಅದನ್ನ ಈಗ್ಲೂ ಮಾಡಬಹುದಲ್ವೇ? ಯಾಕೆ ಇನ್ನೂ ಯಾವ ವಿಜ್ನಾನಿನೂ ಅದನ್ನ್ನು ಮಾಡಕ್ಕಾಗಿಲ್ಲ? ಇವೆಲ್ಲಾ ಕಾಗಕ್ಕ ಗುಬ್ಬಕ್ಕ ಕಥೆಗಳಳ್ದೇ ಮತ್ತೇನು?
ಇರಲಿ, ಅಷ್ಟು ಹಳೇ ಸಂಗತಿಗಳನ್ನ ಕೆದಕೋದು ಬೇಡ. ಇತ್ತೀಚ್ಗಿನ ವಿಶಯಗಳನ್ನ ನೋದೋಣ.. ಅದೇ - ಮಂಗ, ಮಾನವನ ಪೂರ್ವಜರಾದ ಯಾವುದೋ ಒಂದು ಜೀವಿ ಇತ್ತಂತಲ್ಲ... ಆ ಪೂರ್ವಜನೇ ಮುಂದೆ ಎರಡು ಕವಲಾಗಿ ಒಂದು ಮಾನವ, ಒಂದು ಮಂಗನಾಗಿದ್ದು... ಅಲ್ಲಾರೀ, ಆ ಜೀವಿಗೆ ಎರಡೇ ಸಂತಾನಗಳು ಆಗಿದ್ದು ಯಾಕೆ ಅಂತ? ಅವು ೪ - ೫ ಕವಲುಗಳಾಗಿ ಮಂಗ, ಮಾನವ, ಜೀವಿ೧, ಜೀವಿ೩, ಜೀವಿ೩ ಇತ್ಯಾದಿ ಯಾಕೆ ಆಗಿಲ್ಲ? ಒಂದು ನಾಯಿಗೇ ೪ - ೫ ಮರಿಗಳಾಗುತ್ತಂತೆ, ಇನ್ನು ಆ ಜೀವಿಗೆ ಯಾಕೆ ಎರಡೇ ಮರಿಗಳು? ಹೋಗಲಿ, ಒಂದೇ ಬಾರಿಗೆ ಜಾಸ್ತಿ ಮರಿ ಹಾಕಕ್ಕಾಗಿಲ್ಲ ಅಂದ್ರೆ ಆಮೇಲಾದ್ರು ಹಾಕಿದ್ರೆ ಚೆನ್ನಾಗಿರೋದು.. ಅಲ್ವೇ? ಏನು ಅವುಗಳೂ ಈಗಿನ ಮನುಷ್ಯರ ಥರಾ ಫ್ಯಾಮಿಲಿ ಪ್ಲಾನಿಂಗ್ ಏನಾರ ಇಟ್ಕಂಡಿದ್ದವೋ ಏನೋ?? ಇದೆಲ್ಲಾ ನಂಗೆ ಅರ್ಥಾನೇ ಆಗೊಲ್ಲಪ್ಪ.. ಅದ್ಕೇನೆ.. ಈ ಕಥೆಗಳೆಲ್ಲ ನನಗೆ ಆಗಿ ಬರೋದಿಲ್ಲ.
ಇರಲಿ, ಗೊಡ್ಡುವಾದದ ವಿಷಯ ಬಿಡಿ. ಪ್ರಾಕ್ಟಿಕಲ್ ಆಗಿ ಈಗಿನ ವಿಷಯಕ್ಕೆ ಬರೋಣ. ಅಲ್ಲಾರಿ, ಈ ಮಂಗ ಮಾನವನ ಪೂರ್ವಜ ಜೀವಿ ಮರಿ ಹಾಕಿ ಎಷ್ಟೋ ಬಿಲಿಯನ್ ವರ್ಷ ಆಯ್ತಂತೆ. ಆ ಮರಿಗಳೂ ಬರೇ ಗೊಡ್ಡು ಅನ್ಸುತ್ತೆ.. ಇಷ್ಟು ವರ್ಷ ಆದ್ರೂ ಇನ್ನೂ ಮರಿ ಹಾಕಿಲ್ಲ ಅವುಗಳು. ಅದೇ ಮಂಗ ಮೂತಿ, ಮಾನವ ಬುಧ್ಧಿ ಇನ್ನೂ ಇದೆ. ಅದೇನು ಖರ್ಮನೋ.. ಬಿಟಿ ಬದನೇಕಾಯಿ ಥರ ಇವುಗಳ ಬೀಜಗಳೂ ಜೊಳ್ಳು ಇರ್ಬೋದೇನೋ?? ಇವುಗಳು ಮರಿ ಹಾಕೋ ಥರ ಯಾವ್ದಾದ್ರೂ ಪೂಜೆ ವ್ರತ ಇರ್ಬೋದು... ಯಾವುದಕ್ಕೂ ಕೇಳಿ ನೋಡ್ಬೇಕು ಶಾಸ್ತ್ರಿಗಳನ್ನ್.. ಅವ್ರಿಗೆ ಇದೆಲ್ಲಾ ನೀರು ಕುಡಿದಂಗೆ.. ಟಪ್ಪಂತ ಉತ್ರ ಹೇಳ್ಬಿಡ್ತಾರೆ..
ಇನ್ನು ಮನುಷ್ಯ ತನ್ನ ಬಾಲ ಉಪ್ಯೋಗ್ಸಿಲ್ಲ, ಅದ್ಕೇ ಅವ್ನ ಬಾಲ ಹೊರ್ಟೋಯ್ತು ಅಂತದೆ ವಿಕಾಸವಾದ. ಹಂಗಾರೆ ಹಸೂದು ಬಾಲ ಹ್ಯಾಗೆ ಉಳ್ಕೊಳ್ತು? ಹಸ ಬಾಲ ಏನು ಉಪ್ಯೋಗ ಇದೆ ಸ್ವಾಮಿ..? ಅಬ್ಬಬ್ಬಾ ಅಂದ್ರೆ ಸೊಳ್ಳೆ ಹೊಡೀಬೋದು. ಹಾಗಿದ್ರೆ ಮಾನವ ಯಾಕೆ ಸೊಳ್ಳೆ ಹೊಡೀಲಿಲ್ಲ? ಈಗಿನ ಥರ ಸೊಳ್ಳೆ ಬತ್ತಿ ಆಗ ಇರ್ಲಿಲ್ಲ ತಾನೇ? ಬಾಲ ಇದ್ದಿದ್ರೆ ಮನುಷ್ಯಾನೂ ಅದ್ರಲ್ಲೇ ಸೊಳ್ಳೆ ಓಡಿಸ್ತಿರ್ಲಿಲ್ವೇ? ಸೊಳ್ಳೆ ಓಡ್ಸಿದ್ದಿದ್ದ್ರೆ ಬಾಲ ಉಪಯೋಗ ಇಲ್ಲ್ ಅಂತ ಆಗೊದಾದ್ರೂ ಹ್ಯಾಗೆ? ಇದಿಕ್ಕಿಂತಾ ದೊಡ್ಡ ಬೊಗಳೆ ಬೇಕಾ? ಇನ್ನು ಜಿರಾಪೇದು. ಸೊಪ್ಪು ತಿನ್ನಕ್ಕೆ ಹೋಗಿ ಕತ್ತು ಈಷ್ಟುದ್ದ್ ಆಯ್ತಂತೆ. ಅಲ್ರೀ ನಮ್ಮನೇಲಿ ನಮ್ ಹಸಾನೂ ಸೊಪ್ಪು ತಿನ್ನತ್ತೆ. ಇಷ್ಟು ವರ್ಷದಿಂದ ಸೊಪ್ಪು ತಿನ್ನಿಸ್ತಾನೇ ಇದೀನಿ.. ಅದ್ರ ಕತ್ತು ಒಂದಿಂಚೂ ಉದ್ದ ಆಗಿಲ್ಲ. ಇರ್ಲಿ.. ಈ ಜಿರಾಪೆ ಕತ್ತು ಈಷ್ಟುದ್ದ ಮಾಡಿ ಮಾಡಿ ಸೊಪ್ಪೇ ಯಾಕೆ ತಿನ್ಬೇಕಿತ್ತು? ಮರದ್ಮೇಲೆ ಹಣ್ಣು ಸಿಗಲ್ವೇ? ಹಣ್ಣು ಸಿಗೋಂಗಿದ್ರೆ ಯಾರಾದ್ರೂ ಸೊಪ್ಪು ತಿಂತಾರ?? ನೀವೇ ಹೇಳಿ... ಅದ್ರಲ್ಲೇ ಗೊತ್ತಾಗಲ್ವೇ ಈ ವಿಕಾಸವಾದ ಎಲ್ಲ ಬರೀ ಬೊಗಳೆ ಅಂತೇಳಿ...
ನಾನು ಇಷ್ಟೆಲ್ಲಾ ಹೇಳಿದ್ಮೇಲೂ ನೀವು ವಿಕಾಸವಾದ ನಂಬಿದ್ರೆ ಅದು ನಿಮ್ಮ ಖರ್ಮ. ನಾನೇನು ಮಾಡ್ಲಿ. ಹೇಳೋದನ್ನೆಲ್ಲ್ ಹೇಳಿದ್ದೀನಿ. ಇನ್ನು ಇದರ ಬಗ್ಗೆ ತಲೆ ಕೆಡ್ಸೊಕೊಳೋ ಜರೂರು ನನಗಿಲ್ಲ. ನಂಗೆ ಅದು ಬೇಕಾಗೂ ಇಲ್ಲ. ಬೇರೆಯೇ ಕೆಲ್ಸ ಇದೆ ನಂಗೆ. ಹೊಲ ಉಳ್ಬೇಕು, ದನ ಮೇಯಿಸ್ಬೇಕು, ಸ್ನಾನ ಪೂಜೆ ತಿಂಡಿ ಎಲ್ಲ ಮಾಡ್ಬೇಕು.. ಆಗ್ಲೇ ಟೇಮಾಗೋಯ್ತು.. ಕತೆ ಹೇಳಿದ್ರೆ ಜೀವ್ನ ನಡೆಯತ್ತಾ ಸಾಮೀ? ನೀವೇ ಹೇಳಿ??
--
ಪ್ರೀತಿಯಿಂದ,
ಮಹೇಶ
Comments
ಉ: ವಿಕಾಸವಾದವೆಂಬ ಮೊಂಡುವಾದ ! (ತಿಳಿಹಾಸ್ಯ)
ಉ: ವಿಕಾಸವಾದವೆಂಬ ಮೊಂಡುವಾದ ! (ತಿಳಿಹಾಸ್ಯ)
In reply to ಉ: ವಿಕಾಸವಾದವೆಂಬ ಮೊಂಡುವಾದ ! (ತಿಳಿಹಾಸ್ಯ) by ksraghavendranavada
ಉ: ವಿಕಾಸವಾದವೆಂಬ ಮೊಂಡುವಾದ ! (ತಿಳಿಹಾಸ್ಯ)
ಉ: ವಿಕಾಸವಾದವೆಂಬ ಮೊಂಡುವಾದ ! (ತಿಳಿಹಾಸ್ಯ)
In reply to ಉ: ವಿಕಾಸವಾದವೆಂಬ ಮೊಂಡುವಾದ ! (ತಿಳಿಹಾಸ್ಯ) by gnanadev
ಉ: ವಿಕಾಸವಾದವೆಂಬ ಮೊಂಡುವಾದ ! (ತಿಳಿಹಾಸ್ಯ)
ಉ: ವಿಕಾಸವಾದವೆಂಬ ಮೊಂಡುವಾದ ! (ತಿಳಿಹಾಸ್ಯ)
In reply to ಉ: ವಿಕಾಸವಾದವೆಂಬ ಮೊಂಡುವಾದ ! (ತಿಳಿಹಾಸ್ಯ) by inchara123
ಉ: ವಿಕಾಸವಾದವೆಂಬ ಮೊಂಡುವಾದ ! (ತಿಳಿಹಾಸ್ಯ)
ಉ: ವಿಕಾಸವಾದವೆಂಬ ಮೊಂಡುವಾದ ! (ತಿಳಿಹಾಸ್ಯ)
In reply to ಉ: ವಿಕಾಸವಾದವೆಂಬ ಮೊಂಡುವಾದ ! (ತಿಳಿಹಾಸ್ಯ) by nagenagaari
ಉ: ವಿಕಾಸವಾದವೆಂಬ ಮೊಂಡುವಾದ ! (ತಿಳಿಹಾಸ್ಯ)
ಉ: ವಿಕಾಸವಾದವೆಂಬ ಮೊಂಡುವಾದ ! (ತಿಳಿಹಾಸ್ಯ)
In reply to ಉ: ವಿಕಾಸವಾದವೆಂಬ ಮೊಂಡುವಾದ ! (ತಿಳಿಹಾಸ್ಯ) by prasca
ಉ: ವಿಕಾಸವಾದವೆಂಬ ಮೊಂಡುವಾದ ! (ತಿಳಿಹಾಸ್ಯ)
ಉ: ವಿಕಾಸವಾದವೆಂಬ ಮೊಂಡುವಾದ ! (ತಿಳಿಹಾಸ್ಯ)
In reply to ಉ: ವಿಕಾಸವಾದವೆಂಬ ಮೊಂಡುವಾದ ! (ತಿಳಿಹಾಸ್ಯ) by thesalimath
ಉ: ವಿಕಾಸವಾದವೆಂಬ ಮೊಂಡುವಾದ ! (ತಿಳಿಹಾಸ್ಯ)
In reply to ಉ: ವಿಕಾಸವಾದವೆಂಬ ಮೊಂಡುವಾದ ! (ತಿಳಿಹಾಸ್ಯ) by mpneerkaje
ಉ: ವಿಕಾಸವಾದವೆಂಬ ಮೊಂಡುವಾದ ! (ತಿಳಿಹಾಸ್ಯ)
In reply to ಉ: ವಿಕಾಸವಾದವೆಂಬ ಮೊಂಡುವಾದ ! (ತಿಳಿಹಾಸ್ಯ) by shivarama
ಉ: ವಿಕಾಸವಾದವೆಂಬ ಮೊಂಡುವಾದ ! (ತಿಳಿಹಾಸ್ಯ)
In reply to ಉ: ವಿಕಾಸವಾದವೆಂಬ ಮೊಂಡುವಾದ ! (ತಿಳಿಹಾಸ್ಯ) by mpneerkaje
ಉ: ವಿಕಾಸವಾದವೆಂಬ ಮೊಂಡುವಾದ ! (ತಿಳಿಹಾಸ್ಯ)
In reply to ಉ: ವಿಕಾಸವಾದವೆಂಬ ಮೊಂಡುವಾದ ! (ತಿಳಿಹಾಸ್ಯ) by mpneerkaje
ಉ: ವಿಕಾಸವಾದವೆಂಬ ಮೊಂಡುವಾದ ! (ತಿಳಿಹಾಸ್ಯ)
ಉ: ವಿಕಾಸವಾದವೆಂಬ ಮೊಂಡುವಾದ ! (ತಿಳಿಹಾಸ್ಯ)