’ಪ್ರತಿಷ್ಠಿತ ಐಪಿಎಲ್ ಕ್ರಿಕೆಟ್ ವಿಜಯ ಶ್ರೀ ’, ”ಚೆನ್ನೈ ಸೂಪರ್ ಕಿಂಗ್ಸ್ ’ ಗೆ ವರಮಾಲೆ ತೊಡಿಸಿರುತ್ತಾಳೆ !
’ಸುರೇಶ್ ರೈನಾ’ರವರ ಬ್ಯಾಟಿಂಗ್ ನೋಡಲು ತುಂಬಾ ಚೆನ್ನಾಗಿತ್ತು !
೨೫-೦೪-೨೦೧೦, ರ ಭಾನುವಾರದಂದು, ನವಿ-ಮುಂಬೈನ ’ಡಿ ವೈ ಪಾಟೀಲ್ ಕ್ರೀಡಾಂಗಣ” ದಲ್ಲಿ ನಡೆದ ’ಟ್ವೆಂಟಿ-೨೦ ಲೀಗ್ ನ ಫೈನಲ್ಸ್ ’ನಲ್ಲಿ”ಸುರೇಶ್ ರೈನಾ ’ರವರ ಅಜೇಯ ೫೭ ಸ್ಪೋಟಕ ರನ್ ಗಳು”ಚೆನ್ನೈ ಸೂಪರ್ ಕಿಂಗ್ಸ್ ’ ಪಾಲಿಗೆ ವರದಾನವಾಗುವ ಮೂಲಕ, ’ಮುಂಬೈಇಂಡಿಯನ್ಸ್ ತಂಡ ’ವನ್ನು ೨೨ ರನ್ ಗಳಿಂದ ಸೋಲಿಸಿ, ವಿಜಯಪತಾಕೆಯನ್ನು ಹಾರಿಸಿ, ’ಪ್ರತಿಷ್ಠಿತ ಐಪಿಎಲ್-೩ ಮುಕುಟ ’ ವನ್ನು ತನ್ನ ಮುಡಿಗೇರಿಸಿಕೊಂಡಿದೆ.
ಮುಂಬೈಇಂಡಿಯನ್ಸ್ ತಂಡದ ನಾಯಕ, ’ಸಚಿನ್ ತೆಂಡುಲ್ಕರ್,” ಆಡುವ ಸಾಧ್ಯತೆಗಳ ಬಗ್ಗೆ ಅನಿಶ್ಚಿತತೆ ಇದ್ದು, ಅವರು ಆಟದ ಮೈದಾನಕ್ಕೆ ಬಂದಾಗ, ಸಹಸ್ರಾರು ಕ್ರಿಕೆಟ್ ಅಭಿಮಾನಿಗಳು ಚಪ್ಪಾಳೆಯ ಮಳೆಗರೆದು ತಮ್ಮ ಅಭಿಮಾನ ಮತ್ತು ಹರ್ಷಗಳನ್ನು ವ್ಯಕ್ತಪಡಿಸಿದದರು. ಅವರ ಬಲಗೈಗೆ ಏಟುಬಿದ್ದು ಕೊನೆಗಳಿಗೆಯವರೆಗೆ ಮತ್ತೆ ಆಡುವ ಬಗ್ಗೆ ಖಚಿತವಾಗಿ ತಿಳಿದಿರಲಿಲ್ಲ.
ಮೊದಲು ಟಾಸ್ ಗೆದ್ದು, ಬ್ಯಾಟಿಂಗ್ ಶುರುಮಾಡಿದ ’ಚೆನ್ನೈ ಸೂಪರ್ ಕಿಂಗ್ಸ್ ತಂಡ,” ೫ ವಿಕೆಟ್ ಗ ೧೬೮ ರನ್ ಗಳಿಸಿ ತಂಡಕ್ಕೆ ಒಳ್ಳೆಯ ಭದ್ರ ಬುನಾದಿಯನ್ನು ದೊರಕಿಸಿತು. ಅವರ ತಂಡದ ’ಸುರೇಶ್ ರೈನಾ ’ರವರು, (೫೭ ರನ್, ೩೫ ಎಸೆತ, ೩ ಸಿಕ್ಸ್, ಮತ್ತು ೩ ಬೌಂಡರಿಗಳು) ’ಪಂದ್ಯಶೇಷ್ಠಪ್ರಶಸ್ತಿ’ ಗೆ ಭಾಜನರಾದರು.
’ಮುಂಬೈ ಇಂಡಿಯನ್ಸ್ ’ ’ಚೆನ್ನೈ ಸೂಪರ್ ಕಿಂಗ್ಸ್ ತಂಡ ’ ಕ್ಕೆ ಉತ್ತರವಾಗಿ ತಮ್ಮ ೨೦ ಓವರ್ ಗಳಲ್ಲಿ, ೯ ವಿಕೆಟ್ ನಷ್ಟಕ್ಕೆ, ೧೪೬ ರನ್ ಮಾತ್ರಗಳಿಸಿದರು. ಹಾಗಾಗಿ ೨೨ ರನ್ ಗಳಿಂದ ’ಐಪಿಎಲ್ ಟ್ರೋಫಿ ’ಯನ್ನು ಚೆನ್ನೈ ತಂಡಕ್ಕೆ ಬಿಟ್ಟುಕೊಟ್ಟು”೨ ನೇ ಸ್ಥಾನ ’ಕ್ಕೆ ಸಮಾಧಾನಪಟ್ಟುಕೊಳ್ಳಬೇಕಾಯಿತು.
*”ಮುಂಬೈಇಂಡಿಯನ್ಸ್’ ನ ”ಕಿರನ್ ಪೊಲಾರ್ಡ್ ’ರವರನ್ನು ಕೊನೆಯಲ್ಲಿ ಏಕೆ ಉಪಯೋಗಿಸಿಕೊಂಡರು. ಅವರನ್ನು ಸಚಿನ್ ಮರೆತದ್ದಾದರೂ ಏಕೆ ? ಎಂದು ಕೆಲವು ವಲಯದ ಕ್ರಿಕೆಟ್-ತಜ್ಞರು ಮಾತಾಡಿಕೊಳ್ಳುತ್ತಿದ್ದಾರೆ. ಚೆನ್ನೈ ತಂಡ ಮುಂಬೈ ಇಂಡಿಯನ್ಸ್ ನ ಸಪ್ಪೆ ಫೀಲ್ಡಿಂಗ್ ಬಲದ ಉಪಯೋಗವನ್ನು ಚೆನ್ನಾಗಿ ಪಡೆದುಕೊಂಡು ತಮ್ಮ ರನ್ ರೇಟನ್ನು ಮೇಲೇರಿಸಿ, ತಂಡದ ಬಲವನ್ನು ಸಧೃಢಪಡಿಸಿದರು.
ಇನ್ನೊಂದು ಆಶ್ಹರ್ಯವೆಂದರೆ, ೪ ನೆಯ ಕ್ರಮಾಂಕದ ಖಿಲಾಡಿ, ಹರ್ಭಜನ್ ಸಿಂಗ್ ಮೈದಾನಕ್ಕೆ ಇಳಿದರು, ’ಸಿದ್ದು ಪಾಜಿ ’ಯವರು ಹೇಳುವಂತೆ ಬ್ಯಾಟಿಂಗ್ ನಲ್ಲಿ ಅವರು ಗಮನಾರ್ಹ ಕೊಡುಗೆಯನ್ನು ಕೊಡುವರೆಂದು. ಅದರೆ, ಅವರಿಂದ ಯಾವ ಅಚ್ಚರಿಯೂ ನಡೆಯಲಿಲ್ಲ. ಕೇವಲ ೧ ರನ್ ಗಳಿಸಿ, ಎಲ್ ಬಿ ಡಬ್ಲ್ಯೂ ಆಗಿ, ಪೆವಿಲಿಯನ್ ಗೆ ಮರಳಿದರು. ಬೋಲಿಂಗ್ ನಲ್ಲೂ ಅವರು ಹೆಚ್ಚು ರನ್ ಕೊಟ್ಟು ಮುಖಕೆಡೆಸಿಕೊಂಡರು. ಕೊನೆಗೆ ’ಹಳೆಗಂಡನ ಕಾಲುಹಿಡಿದರು,’ ಅನ್ನೊಹಾಗೆ, ಸಚಿನ್ ಗಾಯಾಳುವಾಗಿಯೂ (೪೫ ಬಾಲ್ ಗಳಲ್ಲಿ ೭ ಸುಂದರ ಬೌಂಡರಿಗಳನ್ನು ಸಿಡಿಸಿ, ಕ್ಯಾಚ್ ಕೊಟ್ಟು, ವೈಯಕ್ತಿಕ ೪೮, ರನ್ ಹೊಡೆದು ಔಟಾದರು) ಕೈನವ್ವಿನ ಪ್ರಸಂಗದಲ್ಲೂ ತಂಡದ ರನ್ ಗಳಿಕೆಗೆ ಶ್ರಮಿಸಬೇಕಾಯಿತು. ತೆಂದುಳ್ಕರ್ ನಂತರ ಬಂದವರು, ಆಯಾರಾಮ್ ಗಯಾರಾಮ್ ಎನ್ನುವಂತೆ ಒಬ್ಬೊಬ್ಬರಾದಿಬಂದು ಏನೂ ಗಳಿಸದೆ, ವಿಫಲರಾಗಿ ಪೆವಿಲಿಯನ್ ಗೆ ಮರಳಿದರು. ಒತ್ತಡದಲ್ಲಿ ಆಟವಾಡುವುದು ಬಹಳ ಕಠಿಣ. ಟಾಸ್ ಗೆಲ್ಲುವುದೇನು ಪರಿಣಾಮ ಮಾಡುವುದಿಲ್ಲ. ’ಅವರು ಮೊದಲು ಆಡಲಿ ನಾವು ಆಮೇಲೆ ಆಡುತ್ತೇವೆ ’ ಎಂದುನುಡಿದ ಸಚಿನ್ ಗೆ, ಟಾಸ್ ಗೆಲ್ಲುವುದರ ಮಹತ್ವವನ್ನು ತಿಳಿಸುವ ಅಗತ್ಯವಿಲ್ಲ ! ಅವರು ಚೆನ್ನಾಗಿ ಬಲ್ಲರು.
ಮುಂಬೈ ಇಂಡಿಯನ್ಸ್ ತಮ್ಮ ಇನ್ನಿಂಗ್ಸ್ ಶುರುಮಾಡುವಾಗ, ಸಚಿನ್ ತೆಂಡುಲ್ಕರ್ ಮತ್ತು ಅಭಿಷೆಕ್ ನಾಯರ್ ಗಳು, ೧೦ ಓವರ್ ಗಳಲ್ಲಿ ೫೦ ರನ್ ಬಾರಿಸಿದ್ದರು. ನಾಯರ್ ಸ್ವಲ್ಪ ಸೆಟ್ಟಾಗಿ ಸುಮಾರಾಗಿ ಆಡಲು (೨೭ ರನ್ ಹೊಡೆದಿದ್ದರು) ಪ್ರಾರಂಭಿಸುತ್ತಿರುವಂತೆಯೇ ರನ್ ಔಟ್ ಆಗಿ ತಂಡದ ಸ್ಕೋರಿನ ಜೋಳಿಗೆಗೆ, ಮತ್ತಷ್ಟು ನಿರಾಸೆಯನ್ನು ಸುರಿದರು.
-ಕೃಪೆ : 'Rediff mail.com.'