ಎಲ್ಲಾ ಕನ್ನಡ ಹೋರಾಟಕ್ಕೆ ಕೊನೆ !!!

ಎಲ್ಲಾ ಕನ್ನಡ ಹೋರಾಟಕ್ಕೆ ಕೊನೆ !!!

ನಮಸ್ಕಾರ ಗೆಳೆಯರೇ,

ಇವತ್ತಿನ ವಿಜಯ ಕರ್ನಾಟಕ ಪತ್ರಿಕೆಯಲ್ಲಿ "ಕನ್ನಡಕ್ಕಾಗಿ ಕೈ ಎತ್ತಿ: ಜೈಲೇ ಗತಿ" ಅನ್ನೋ ಹೆಸರಿನಡಿಯಲ್ಲಿ ಪ್ರಕಟವಾಗಿರುವ ಲೇಖನವನ್ನ ನೋಡಿ..... ಇದರ ಜೊತೆಗೆ ಲಗತ್ತಿಸಿರುವ ಕಡತವನ್ನು ನೋಡಿ....

ಅಂತರ್ಜಾಲದ ಕೊಂಡಿ : http://www.vijaykarnatakaepaper.com/svww_zoomart.php?Artname=20100426a_009101001&ileft=73&itop=63&zoomRatio=130&AN=20100426a_೦೦೯೧೦೧೦೦೧

ನಿಜವಾದ ಕನ್ನಡ ಕಾಳಜಿ ಇಟ್ಟುಕೊಂಡು ನೀವು ಹೋರಾಟ ಮಾಡುತ್ತೀನಿ ಅನ್ನುವವರಾದರೆ, ಕೊಲೆ ಯತ್ನ, ದರೋಡೆ, ಸುಲಿಗೆ, ಮುಂತಾದ ಕೇಸುಗಳನ್ನು ಮೈಮೇಲೆ ಹಾಕಿಸಿಕೊಂಡು ಜೈಲಿಗೆ ಹೋಗಬೇಕಾಗುತ್ತದೆ. ಹಾಗೆಯೇ ವರ್ಷಾನುಗಟ್ಟಲೆ ಆ ಕೇಸನ್ನ ಮುಗಿಸುವುದಕ್ಕೆ ಕೋರ್ಟಿಗೆ ಅಲೆಯಬೇಕಾಗುತ್ತದೆ. ರಾಜ್ಯದ ಗಡಿ ಒತ್ತುವರಿಯಂತಹ ಅರೋಪ ಮತ್ತು ಅಪರಾಧಗಳನ್ನು ಕೈಬಿಡುವ ರಾಜ್ಯ ಸರಕಾರ, ಈ ನಾಡಿನ ಮಣ್ಣಿಗೆ, ನೆಲಕ್ಕೆ, ಜಲಕ್ಕೆ ಹಾಗು ನಾಡಿಗರ ಸ್ವಾಭಿಮಾನದ ವಿಷಯಗಳಲ್ಲಿ ಹೋರಾಟ ನಡೆಸಿದರೆ ಅವರಿಗೆ ವರ್ಶಾನುಗಟ್ಟಲೆ ಕೋರ್ಟಿಗೆ ಅಲೆದಾಡಿಸುತ್ತಿದೆ.

ನಿಜಲಿಂಗಪ್ಪ ಅವರಿಂದ ಹಿಡಿದು ಕುಮಾರಸ್ವಾಮಿಯವರೆಗು ಎಲ್ಲಾ ಮುಖ್ಯಮಂತ್ರಿಗಳು ಕನ್ನಡ ಪರ ಹೋರಾಟಗಾರರ ಮೇಲಿನ ಕೇಸುಗಳನ್ನು ಕೈಬಿಟ್ಟಿದ್ದಾರೆ. ಹೋರಾಡಿದ್ದು ಕನ್ನಡದ ರಕ್ಷಣೆಗಾಗಿಯಲ್ಲವೇ, ಒಳ್ಳೆಯದಾಗಲಿ ಬಿಡಿ ಎಂದು. ಆದರೆ ಯಡಿಯೂರಪ್ಪನವರ ಸರಕಾರಕ್ಕೆ ಮಾತ್ರ ಈ ಬಗ್ಗೆ ಕಾಳಜಿ ಇಲ್ಲ.

ಈ ನಾಡಿನ ನೆಲ,ಜಲ, ಗಡಿ, ಭಾಷೆಯ ವಿಷಯದಲ್ಲಿ ನಾಡಿನ ಪರವಾಗಿ ಹೋರಾಟಗಳನ್ನು ಮಾಡುತ್ತಿರುವ ನಾಡಿನ ಬಲಿಷ್ಠ ಸಂಘಟನೆಯಾಗಿರುವ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕತರ ಮೇಲೆ ಇರುವ ಕೇಸುಗಳು ಸುಮಾರು ೧೦೩೬ ಕ್ಕೂ ಹೆಚ್ಚು.. ಕನ್ನಡದ ಹೆಸರಿನಲ್ಲಿ ಸರಕಾರ ರಚಿಸಿದ ಬಿಜೆಪಿ, ನಾಡಿಗೆ ಮಾರಕವಾಗುವಂತಹ ಕ್ರಮ ಕೈಗೊಂಡ ಅನೇಕ ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ.

ಇದಕ್ಕೆಲ್ಲ ಪರಿಹಾರ ನಮ್ಮ ರಾಜ್ಯದ ಹಿತಾಸಕ್ತಿ ಕಾಪಾಡುವಂತಹ ಪ್ರಾದೇಶಿಕ ಪಕ್ಷವೊಂದರ ಉದಯವಾಗಬೇಕು..... ಏನಂತೀರಿ????

(ಕೃಪೆ : ವಿಜಯ ಕರ್ನಾಟಕ ದಿನ ಪತ್ರಿಕೆ)

Rating
No votes yet

Comments