ಪ್ರೀತಿಸದೆ ಇರೋದಕ್ಕೂ ಕಾರಣ ಬೇಕಾ?

ಪ್ರೀತಿಸದೆ ಇರೋದಕ್ಕೂ ಕಾರಣ ಬೇಕಾ?

ನಾನು ನಿನ್ನ ಪ್ರೀತಿಸ್ತಿದ್ದೀನಿ, ಈ ಮೂರು ಶಬ್ದ ಹೇಳ್ಬಿಟ್ರೆ, ಅವನನ್ನು ಒಪ್ಪಿಕೊಳ್ಳಲೇಬೇಕಾ?

ಹೌದು ಅಂದ್ರೆ ಸರಿ, ಇಲ್ಲಾ ಅಂದ್ರೆ ನಿನ್ನನ್ನು ಬದುಕೊದಿಕ್ಕೆ ಬಿಡಲ್ಲ. ನೀನು ಬರಿ ನನ್ನವಳು. ನನಗೆ ಬಿಟ್ರೆ ನೀನು ಬೇರೆಯವರಿಗೆ ಸಿಗಬಾರದು. 

ನಾನು ಜೈಲಿಗೆ ಹೋದರು ಸರಿ ನಿನ್ನ ಮಾತ್ರ ಜೀವಂತ ಬಿಡಲ್ಲ. ನನ್ನ ಪ್ರೀತಿ ಅರ್ಥ ಮಾಡ್ಕೋ....ಪ್ಲೀಸ್.......

 

ಇದು ಒಂದು ಪ್ರೀತಿ ನಿವೇದನೆನಾ?? ಭಯ ಹುಟ್ಟಿಸಿ ಪ್ರೀತಿ ಪಡೆಯಲು ಸಾಧ್ಯನ? ಹಾಗೊಂದು ವೇಳೆ ಒಪ್ಪಿಕೊಂಡರು ಅದು ನಿಜವಾದ ಪ್ರೀತಿ ಅಂತ ನಂಬಬಹುದಾ? ಅವ್ಳು ಒಪ್ಪಲಿಲ್ಲ ಅಂತ ಅವ್ನು ಆತ್ಮಹತ್ಯೆ ಮಾಡ್ಕೊಳ್ಳಿ, ಅದರಲ್ಲಿ ಅರ್ಥನಾದರು ಇರುತ್ತೆ, ಅಯ್ಯೋ ಎಷ್ಟೊಂದು ಪ್ರೀತಿಸ್ತಿದ್ದ ಅಂತಾ ಕನಿಕರನಾದ್ರು ತೋರಿಸಬಹುದು. ಅದು ಬಿಟ್ಟು ಪ್ರೀತಿಸದವಳನ್ನೇ ಕೊಂದರೆ ಮೃಗಕ್ಕು, ಅವನಿಗೂ ವ್ಯತ್ಯಾಸವೇನು??

ಇಷ್ಟಕ್ಕೂ ಪ್ರೀತಿಸದೆ ಇರೋದಕ್ಕೂ ಕಾರಣ ಬೇಕಾ??

 

-ಅಶ್ವಿನಿ
Rating
No votes yet

Comments