ಉಬುಂಟು(ಲಿನಕ್ಸ್ ) ನಲ್ಲಿ PDF ಕಡತಗಳ ಆಯ್ದ ಪುಟ ಬೇರೆ ಮಾಡಿ ಇನ್ನೊಂದು PDF ಮಾಡಿದ್ದು.

ಉಬುಂಟು(ಲಿನಕ್ಸ್ ) ನಲ್ಲಿ PDF ಕಡತಗಳ ಆಯ್ದ ಪುಟ ಬೇರೆ ಮಾಡಿ ಇನ್ನೊಂದು PDF ಮಾಡಿದ್ದು.

ನಮ್ಮ ಲಿನಕ್ಸಾಯಣ(http://linuxaayana.net  ಮತ್ತು  ) ದ ಗುರುಗಳು ( http://sampada.net/user/omshivaprakash)   ನ್ನೂ  ಮೊದಲಿಗೆ ನೆನೆದು , ಲಿನಕ್ಸ್ (ಉಬುಂಟು) ಅನ್ನು  ಸಂಪದದಲ್ಲಿ ಪರಿಚಯಿಸಿದ    ಹರಿಪ್ರಸಾದ್ ನಾಡಿಗರನ್ನೂ ಮೊದಲಿಗೆ ನೆನೆಯುವೆ. 

ನನ್ನ ಹತ್ತಿರ ಸುಮಾರು ನಾಲ್ಕು ವರ್ಷದ ಕಂಪ್ಯೂಟರ್ ಮ್ಯಾಗಝೀನುಗಳ PDF ಗಳು ಇದ್ದವು .  ಪ್ರಿಂಟ್ ರೂಪದಲ್ಲಿದ್ದರೆ  ಬೇಕಾದ ಪುಟ ಹರಿದುಕೊಂಡು ಉಳಿದವನ್ನು ರದ್ದಿಗೆ ಹಾಕುತ್ತಿದ್ದೆ . ಇವು ಕಂಪ್ಯೂಟರ್ ಕಡತಗಳು.  ಅವುಗಳಲ್ಲಿನ ಆಯ್ದ  ಪುಟಗಳನ್ನಷ್ಟೇ  ತೆಗೆದು ಇನ್ನೊಂದು ಕಡತ ಮಾಡಿಟ್ಟುಕೊಂಡರೆ ಓದಲು ಅನುಕೂಲ ಆಗುವುದಲ್ಲವೇ ?  ಅಂತ ತಲೆಯಲ್ಲಿ ವಿಚಾರ ಬಂದಿತು. ಸರಿ  , split PDF ubuntu ಅಂತ ಗೂಗಲಿಸಿದೆ. ಯಾರೋ ಈ ಪ್ರಶ್ನೆ ಕೇಳಿದ್ದರು . ಇನ್ನಾರೋ ಮಹಾನುಭಾವರು pdfsam ಅನ್ನು ಹಾಕಿಕೊಳ್ಳಲು ಹೇಳಿದ್ದರು .

ಸರಿ ,  

sudo apt-get install pdfsam  

ಆದೇಶ ಕೊಟ್ಟು ಇಂಟರ್ನೆಟ್ಟಿನಿಂದ ಇಳಿಸಿಕೊಂಡೆ .

pdfsam  ಕಮ್ಯಾಂಡ್ ಕೊಟ್ಟು  ನೋಡಿದೆ . GUI   ಆಧಾರಿತ ಸೌಲಭ್ಯ ಇದು .  ಬೇರೆ ಬೇರೆ  ಆಯ್ಕೆ  ಕೊಟ್ಟು ನೋಡಿದೆ . ನನ್ನ ಉದ್ದೇಶ ಸಫಲ ಆಯಿತು.

 

ಈ ರೀತಿಯಾಗಿ ನನ್ನ   ಅಗತ್ಯಗಳು ಕಂಪ್ಯೂಟರ್ ನಲ್ಲಿ ಹೆಚ್ಚೇನೂ ಖರ್ಚಿಲ್ಲದೆ ಪುಕ್ಕಟೆಯಾಗಿ ಈಡೇರಿವೆ.

ಜೈ ಲೀನಕ್ಸ್ !   ಜೈ ಉಬುಂಟು!! 

("ಲಿನಕ್ಸಾಯಣ: ಸಾಮಾನ್ಯ ಕಂಪ್ಯೂಟರ್ ಬಳಕೆದಾರರಿಗೆ ಒಂದು ಗ್ನು/ಲಿನಕ್ಸ್ ಕೈಪಿಡಿ"  ಅಂತ  ಗೂಗಲ್ ನಲ್ಲಿ  ಹುಡುಕಿದರೆ ಲಿನಕ್ಸಾಯಣದ  ಎಲ್ಲ ಬರಹಗಳು ನಿಮಗೆ ಸಿಗುತ್ತವೆ )

Rating
No votes yet

Comments