ನಮ್ಮದೆಲ್ಲ ಒಂದೆ ಜಾತಿ ಒಂದೆ ಭಾಷೆ ..ನಾವು ಭಾರತೀಯರು..

ನಮ್ಮದೆಲ್ಲ ಒಂದೆ ಜಾತಿ ಒಂದೆ ಭಾಷೆ ..ನಾವು ಭಾರತೀಯರು..

Comments

ಬರಹ
ಭಾರತದಲ್ಲಿ ಎಲ್ಲೆಡೆಯೂ ಜಾತಿ ಮತ್ತು ಭಾಷೆಯ ರಾಜಕಾರಣವೇ ನಡೆದಿದೆ..ಯಾವುದೇ ರಾಜಕಾರಣಿ ಆಗಲಿ ಅಧಿಕಾರಿ ಆಗಲಿ ಇವೆರಡೂ ಶಬ್ದಗಳಿಲ್ಲದೇ ಮಾತನಾಡುವುದೇ ಇಲ್ಲಾ..ಇವೆರಡೂ ಶಬ್ದಕ್ಕೂ ಹಾಗೂ ದೇಶದ ಅಭಿವೃಧ್ಧಿಗೂ ಹಾವು ಮುಂಗಸಿ ಸಂಬಂಧ.. ಈಗ,ನೀವು ಜಗತ್ತಿನ ಯಾವುದೇ ತ್ವರಿತಗತಿಯಲ್ಲಿ ಅಭಿವೃಧ್ಧಿ ಮಾಡಿದ ದೇಶ ತೆಗೆದುಕೊಂಡರೆ ( ಉದಾಹರಣೆಯಾಗಿ ಚೀನಾ,ಜಪಾನ್) ಅವರಲ್ಲಿನ  ಭಾಷೆ ಒಂದೇ,ಸಂಸ್ಕೃತಿ ಒಂದೇ ,ಜಾತಿ ಇದ್ದರೂ ಬಹಳವಿಲ್ಲ..
ಇವೆಲ್ಲವುಗಳೇ ಆ ದೇಶಗಳ ಸಂಪೂರ್ಣ ಅಭಿವೃಧ್ಧಿ ಗೆ ಪೂರಕ ಅಂತ ನನ್ನ ಭಾವನೆಯಾಗಿತ್ತು .. ಮತ್ತು ಖಂಡಿತ ನಿಜ ಅಂತ ಈಗ ಅನಿಸುತ್ತಾ ಇದೆ..
 
ನಮ್ಮ ದೇಶದಲ್ಲಿ ಯಾಕೆ ಎಲ್ಲಾ ಜಾತಿಯನ್ನೂ ಕೂಡಿಸಿ ಒಂದೇ ಜಾತಿ,ಎಲ್ಲಾ ಭಾಷೆಗಳನ್ನೂ ಕೂಡಿಸಿ ಒಂದೇ ಭಾಷೆ ಮಾಡಬಾರದು..?ಈ ವಿಚಾರ ಸೂಕ್ತವೇ? ಇಂತಹ ಒಂದು ವಿನೂತನ ಪ್ರಸ್ತಾಪವಿಟ್ಟರೆ ಹೇಗೆ? ಹೀಗೊಂದು ವೇಳೆ ನಾವು ಒಂದು ಆಗದಿದ್ದರೆ ಮುಂದಿನ ೧೦ ವರ್ಷಗಳಲ್ಲಿ ನಮ್ಮ ದೇಶದಲ್ಲಿ ಅಭಿವೃಧ್ಧಿ  ಬಗ್ಗೆ ಮಾತು,ಚರ್ಚೆ ಹಾಗೂ ಆಗುವುದು ದೂರದ ಮಾತು ವಿಚಾರವೂ ಸಹ ಬರುವುದಿಲ್ಲ ಅಂತ ಅನಿಸ್ತ ಇದೆ.. ಹಾಗೆ ಒಂದು ವಿಚಾರ ,,..ಒಂದು ಆರೋಗ್ಯಕರ ಚರ್ಚೆಗೆ ಆಸ್ಪದವಿರಲಿ ಎಂದು ವಿನಂತಿ..
ಏನಂತೀರಿ..?
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet