ದೇವರನ್ನು ನೆನೆಯದೇ ಇದ್ದಾಗ...

ದೇವರನ್ನು ನೆನೆಯದೇ ಇದ್ದಾಗ...

 ನಾನು ನಿರ್ಧಾರಮಾಡಿದ್ದೆ . ಇನ್ನು ಸ್ವಲ್ಪ ದಿನ ದೇವರನ್ನು ನೆನೆಯಬಾರದು ಅಂತ.(ಎಲ್ಲಾ ನನ್ನ ಸ್ನೇಹಿತ ಸೋಮುವಿನ ಕೊಡುಗೆ ಅವನು ಹೇಳಿದ್ದ ಒಂದು ಸ್ವಲ್ಪ ದಿನ ದೇವರು ದಿಂಡಿರು ಎಲ್ಲಾ ಮರೆತು ಬಿಡು. ಆಮೇಲೆ ದೇವರು ಅನ್ನೋ ಹುಚ್ಚು ಮಾಯವಾಗುತ್ತೆ ಅಂತ. ನೋಡೋಣ ಪರೀಕ್ಷೆ ಮಾಡಿಯೇ ಬಿಡೋಣ ಎಂಬ ಹಟಕ್ಕೆ ಬಿದ್ದಿದ್ದು)

ದಿನಾ ದೇವರ (ವೆಂಕಟೇಶನಫೋಟೋ)ನೋಡಿ ಬಲಬದಿಯಲ್ಲಿಯೇ ಏಳುತ್ತಿದ್ದ ನಾನು ಆವತ್ತು ಬೆಳಗ್ಗೆ ನೋಡಿದ್ದು ನನ್ನ ಮಗಳ ಮುಖವನ್ನು .ಕನಸೇನೋಕಾಣುತ್ತಿದ್ದವಳಅವಳ ಮುದ್ದು ಮುಖದಲ್ಲಿ ಕಂಡೂ ಕಾಣದ ನಗೆಯ ಗೆರೆ. ಧನ್ಯಳಾದೆ ಅಂದುಕೊಂಡೆ. ಎಂದಿನಂತೆ ಕರಾಗ್ರೆಯನ್ನೂ ಹೇಳಲಿಲ್ಲ. ಬದಲಿಗೆ ಇವತ್ತು ಮಾಡಬೇಕಾದ ಕೆಲಸಗಳನ್ನು ನೆನೆಸಿಕೊಂಡೆ.

ಸ್ನಾನ ವಾದ ನಂತರ ಪೂಜೆಗೆ ಕೂರುವುದು ವಾಡಿಕೆ .ಆದರೆ ಆವತ್ತು ಪೂಜೆಯ ಬದಲಿಗೆ ಲ್ಯಾಪ್ಟ್ಟಾಪ್ ಹಿಡಿದುಕೊಂಡು ಪ್ರಶ್ನೆ ಪತ್ರಿಕೆ ಸರಿ ಮಾಡಿದೆ.

ದೇವರೇ ಇವತ್ತಿನ ಕೆಲ್ಸ ಸರಾಗವಾಗಿ ಸಾಗುವಂತೆ ಮಾಡು ಎಂದು ಬೇಡಿಕೊಳ್ಳುತ್ತಿದ್ದ ನಾನು ಇವತ್ತು ನಾನು ಎಲ್ಲಾ ಕೆಲಸವನ್ನು ಸರಾಗವಾಗಿ ಮಾಡಬೇಕು ಎಂದುಕೊಂಡೆ.

ಆಫೀಸಿಗೆ ಹೋಗುತ್ತಿದ್ದಂತೆ ದೇವರನ್ನು ನೆನೆಯುವುದು. ಆದರೆ ಇಂದುನನ್ನ ಕ್ಯಾಬಿನ್ನಿಗೆ ನಮಸ್ಕಾರ ಮಾಡಿದೆ. ಅದಲ್ಲವೇ ಅನ್ನದಾತ ಅಂತ

ಹಾಗೂ ಹೀಗೂ ಅಂದಿನ ದಿನ ದೇವರನ್ನು ನೆನೆಯದೇ ಕಳೆಯಿತು ಎಂದುಕೊಂಡೆ. ರಾತ್ರಿ ದೇವರ ಮನೆಯ ಮುಂದೆ ನಿಂತ್ ಕೈ ಮುಗಿಯಲಿಲ್ಲ.

ಇದರಿಂದ ನನ್ನ ಯಾವುದೇ ಕೆಲಸಕ್ಕೆ ಅಡಚಣೆ ಬರಲಿಲ್ಲ . ಮನಸಿಗೂ ಯಾವುದೇ ಕಸಿವಿಸಿಯಾಗಲಿಲ್ಲ.

ಅಂತೂ ಒಂದು ದಿನ ದೇವರಿಲ್ಲದೇ ಕಳೆಯಿತು ಎಂದುಕೊಂಡೆ .

ರಾತ್ರಿ ಹಿಂದಿನ ದಿನ ಸಮ್ಮರ್ ಕ್ಯಾಂಪಲ್ಲಿ ಈಜಾಡಿದ್ದಕ್ಕೋ ಏನೋ ಮಗಳಿಗೆ ಜ್ವರ ಕಾಣಿಸಿಕೊಂಡಿತು. ಸಿರಪ್ ಹಾಕಿದರೂ ಏನೋ /ಆತಂಕ.

ಚಾಮುಂಡೇಶ್ವರಿ ಕಾಪಾಡಮ್ಮ ತಾಯಿ ಎನ್ನುವ ಶಬ್ಧಗಳು ನನ್ನ ಬಾಯಿ ಇಂದ ಅಚಾನಕ್ ಆಗಿ ಹೊರಗೆ ಬಂದವು.

ದೇವರನ್ನು ನೆನೆಯಲೇ ಬಾರದೆಂದುಕೊಂಡವಳು ನಾನು . ಆದರೆ ಅಪ್ರಯತ್ನ ಪೂರ್ವಕವಾಗಿ ಆ ಶಬ್ದಗಳು ಬಂದಿದ್ದವು.

ನನಗೆ ಒಂದು ವಿಷಯ ಸ್ಪಷ್ಟವಾಗಿ ಅರ್ಥವಾಯಿತು

ದೇವರನ್ನು ನೆನೆಯದೇ ಇದ್ದರೂ ಏನೂ ತೊಂದರೆ ಇಲ್ಲ. ಆ ಪರಿ ಕಲ್ಪನೆ ಇಲ್ಲದಿದ್ದರೂ ನಡೆಯುತ್ತೆ.

ಆದರೆ ದೇವರನ್ನು ನೆನೆಯೋದೇ ತೊಂದರೆ ಬಂದಾಗ ಅಂತ .

 

 

Rating
No votes yet

Comments