ನೈತಿಕತೆ ಮನಃಸಾಕ್ಷಿ ಇರಬೇಕೆ?

ನೈತಿಕತೆ ಮನಃಸಾಕ್ಷಿ ಇರಬೇಕೆ?

ನಾನು ಭಾರತದಲ್ಲಿದ್ದ ಮೇಲೆ ನಾನು ಇದರ ಸಂವಿಧಾನಕ್ಕೆ ತಕ್ಕಂತಿರಬೇಕೆ? ನನ್ನ ಮನೆಯಲ್ಲ್ಲಿ ಅಥವ ನಾನೊಂದು ಸಂಘ ಸಂಸ್ಥೆಯಲ್ಲಿರ ಬೇಕಾದರೆ ಅದರದ್ದೇ ಆದ ಸಂವಿಧಾನಗಳಿಗೆ ಬದ್ದನಾಗಿರಬೇಕಾದ್ದು ನೈತಿಕತೆಯಲ್ಲವೆ?

ಇಲ್ಲಿ ಯಾರೂ ಹಾಗಿಲ್ಲ ಆದ್ದರಿಂದ ನಾನೂ ಕೂಡ ಹಾಗಿರಬೇಕಿಲ್ಲ ಎನ್ನುವ ನಿಲುವು ಸರಿಯೆ? ಮೂರು ಬಿಟ್ಟವರು ಊರಿಗೆ ದೊಡ್ಡವರಾಗಿ ಮೆರೆಯುವುದು ನಮ್ಮ ನೈತಿಕತೆಗೆ ಮತ್ತು ನನ್ನ ಮನಃಸಾಕ್ಷಿಗೆ ಬಗೆದ ದ್ರೋಹವಲ್ಲವೆ? ಮನಃಸಾಕ್ಷಿ, ನೈತಿಕತೆ ಎನ್ನುವುದು ಭಾವನಾತ್ಮಕ ಮೂರ್ಖತನವೆ?

ಇಲ್ಲ ಎನ್ನುವುದಾದರೆ ಅಥವ ಮಾಡಿದ ಅನಾಚಾರಕ್ಕೆ ಅಕೃತ್ಯಕ್ಕೆ ಒಂದು ಕುಂಟು ನೆವವವಿದ್ದರೆ ಸಾಕೆನ್ನುವುದಾದರೆ,
ಮಾಧುರಿ ಗುಪ್ತಾ ಮಾಡಿದ್ದು ಸರಿಯಲ್ಲವೆ? ಏಕೆಂದರೆ ಆಕೆಗೂ ಹಣ ಮಾಡ್ಬೇಕೆನ್ನುವ ಆಸೆಯಿದೆ ಆಕೆಗೂ ಆಕಾಂಕ್ಷೆಗಳಿವೆ.
ಲಾಲೂ ಪ್ರಸಾದ್ ಗೆ ಕೂಡಾ ಆತ ಮೇವು ತಿನ್ನಲು ಆತನದ್ದೇ ಆದ ಕಾರಣಗಳಿವೆ.
ಪರಸ್ಪರ ಕಚ್ಚಾಡಿಕೊಂಡು ಕೊಂದುಕೊಳ್ಳುವ ಭಾರತೀಯರನ್ನು ಕೊಲ್ಲಲು ಕಸಬ್, ದಾವೂದ್, ಮುಷರಫ್ ಎಲ್ಲರಿಗೂ ಭಾರತೀಯರ ಮೇಲೆ ದಾಳಿ ನಡೆಸಲು ಕಾರಣಗಳಿವೆ.
ಪ್ರತಿಯೊಬ್ಬ ವಿಕೃತಕಾಮಿಗೂ ಅವನದೇ ಆದ ನೆಪವಿದೆ. ದೈಹಿಕ ಸಹಜ ಕಾಮನೆಯಿದೆ.
ದಾರಿಯಲ್ಲಿ ಜೇಬು ಕತ್ತರಿಸುವ, ಕಳ್ಳತನ ಮಾಡುವ, ಮುಗ್ಧರನ್ನು ಮೋಸ ಮಾಡುವ ಮನಸ್ಸುಗಳ ಹಿಂದೆ ಅವರನ್ನು ನಂಬಿದವರ ಕನಸುಗಳಿವೆ ಹೊಟ್ಟೆ ಪಾಡಿದೆ.
ಅದೆಲ್ಲಕ್ಕೂ ಕಲಶವಿಟ್ಟಂತೆ ತುಂಬಾ ಜನರು ಅದನ್ನೆ ಮಾಡುತ್ತಿದ್ದಾದ್ದರಿಂದ   ನಾನೂ ಅದನ್ನೆ ಮಾಡುತ್ತೇನೆಂದು ಸಮರ್ಥಿಸಿಕೊಳ್ಳುವುದು ಸರಿ ಎಂಬುದು ಸರಿಯೆ?

Rating
No votes yet

Comments