ನೋಡಿ, ಇಂತಾ ಹಗರಣ ನಡಿಬಾರ್ದಾಗಿತ್ತು. ಮೊದ್ಲೇ ಎಚ್ರವಹಿಸೊದ್ಬ್ಯಾಡ್ವೆ ! ?

ನೋಡಿ, ಇಂತಾ ಹಗರಣ ನಡಿಬಾರ್ದಾಗಿತ್ತು. ಮೊದ್ಲೇ ಎಚ್ರವಹಿಸೊದ್ಬ್ಯಾಡ್ವೆ ! ?

ಬರಹ

ಇದೇ ಪ್ರಶ್ನೆಯನ್ನು ನಾವೇನು ಬಂತು, ಆ ’ಹಂಗಾಮಿ ಅಧ್ಯಕ್ಷ, ಚಿರಾಯು ಅಮೀನ್ ' ರವರು ಎಲ್ಲಾರ್ಗೂಕೇಳ್ತಾ ಇದಾರೆ. ಸರಿಯಾಗಿ ಪಾಲು ಸಿಗ್ತಿರೊವಾಗ ಯಾಕ್ ಹೇಳಿ ಯೋಚ್ನೆ ? ಅದನ್ನೂ ಮಾಡಿರೊ ಚಾಣಾಕ್ಷತನ ನೋಡಿ. ಐಪಿಎಲ್ ಮ್ಯಾಚ್ ಫೈನಲ್ಸ್ ಮುಗಿದಮೇಲೆ ಟ್ರೋಫಿ ಹಂಚಿದಮೇಲೆ, ಹಾಲಿ ಅಧ್ಯಕ್ಷರಿಗೆ ನೋಟೀಸ್ ಕೊಟ್ಟರು. ಎಷ್ಟು ಚಾರ್ಜಗಳು, ಒಟ್ಟು ೨೨.


ಹಾಗೆ ನೋಡಿದರೆ,’ ಐಪಿಎಲ್ ’ ಶುರುವಾಗಿ ೩ ವರ್ಷಗಳಲ್ಲಿ ವಿಶ್ವದ ಅತ್ಯಂತ ಹಣವಂತ ಕ್ರಿಕೆಟ್-ಆಟದ ಲೀಗ್ ಅಗಿ ಪರಿವರ್ತನೆಯಾಗಿದೆ. ಭಾರತದ ದೊಡ್ಡ ಬಿಜಿನೆಸ್ ಹೌಸ್ ಗಳಲ್ಲಿ ಒಂದಾದ ಮೋಡಿ ಹೌಸ್ ನಸ್ಥಾಪಕ,’ ಶ್ರೀ ರಾವ್ ಬಹಾದುರ್ ಲಾಲಾ ಗುಜರ್ ಮಲ್ ಮೋಡಿ ’ಯವರ ಮೊಮ್ಮಗನಾದ,”ಶ್ರೀ ಲಲಿತ್ ಕುಮಾರ್ ಮೋದಿ ’ ಯವರು, ತಮ್ಮ ಕಂಪೆನಿಯನ್ನು ನಡೆಸುವಲ್ಲಿ ಹೆಚ್ಚಿಗೆ ಆಸಕ್ತಿವಹಿಸಿಲ್ಲ. ಲಲಿತ್ ಮೋದಿಯವರ ಪತ್ನಿ, ’ ಶ್ರೀಮತಿ. ಮಿನಾಲ್ ಮೋದಿ ’ಯವರು ಮತ್ತು ಮಕ್ಕಳು ಪಿತ್ರಾರ್ಜಿತ ಆಸ್ತಿಯನ್ನು ನೋಡಿಕೊಳ್ಳುತ್ತಿದ್ದಾರೆ. ಮಿನಾಲ್ ಹೇಗಿದ್ರೂ ಮೋದಿಯವರಿಗಿಂತಾ  ೯ ವರ್ಷ ದೊಡ್ಡೊರು. ಸಿಂಧಿಜಾತಿಯವರು. ಬಿಸಿನೆಸ್ ಅವರ ರಕ್ತದಲ್ಲೆಲ್ಲಾ ಓಡಿಹರಿತಿದೆ. ಮೋದಿಯವರಿಗಿಂತ ಅನುಭವಸ್ತೆ,  ಅಲ್ವಾ.

'ಬಿಸಿಸಿಐ ನ  ಹಿಂದಿನ ಅಧ್ಯಕ್ಷ ಮನಮೋಹನ್ ದಾಲ್ಮಿಯ 'ರವರನ್ನು ಕುರ್ಚಿಯಿಂದ ಕೆಳಗಿಳ್ಸಿ, ಕೂಡ್ಸಿದ್ ಯಾರನ್ನ ? ನಮ್ಮ ಈಗಿನ ವಿವಾದದ ಕೇಂದ್ರಬಿಂದುವಾಗಿರುವ ಮಾನ್ಯ ಲಲಿತ್ ಮೋದಿಯವರನ್ನ. ಯಾರು ಕೂಡ್ಸಿದ್ದು ? ಅದೇ ಈಗಿನ ನಮ್ಮ 'ಶರದ್ ಪವಾರ್ ಸಾಹೇಬೃ '. ಮತ್ತೇನು ಗೊತ್ತಾಯ್ತಲ್ಲ. ಇನ್ನೇನಾದೃ ಡೌಟ್ ಇದ್ಯಾ ಕೇಳಕ್ಕೆ ! ಎಲ್ಲಾ ಎಷ್ಟ್ ಚೆನ್ನಾಗಿ ಒಬ್ರಿಗೊಬ್ರು ಅಡ್ಜಸ್ಟ್ ಮಾಡ್ಕಂಡ್ ನಡೀತಾ ಅವ್ರೆ. ಹಾವೂ ಸಾಯ್ಬಾರ್ದು. ಲಾಠಿನು ಮುರಿಬಾರ್ದು. ಅಲ್ವರಾ ?

”ಶರದ್ ಪವಾರ್ ’ರವರ ಹತ್ತಿರಲ್ಲೇ ಓಡಾಡುತ್ತಿದ್ದ ಮೋದಿಯವರ ತಪ್ಪೆಂದರೆ, ಒಪ್ಪಂದದ ಹಲವಾರು ದಾಖಲೆಗಳು ಗಾಯಬ್ ಆಗಿವೆ. ಅಥವಾ ಗಾಯಬ್  ಮಾಡಿಸಲ್ಡಟ್ಟಿವೆ ಅಷ್ಟೆ. ಬೇರೇನೂ ಇಲ್ಲ. ಅವೆಲ್ಲಾ ಹೊರಗೆ ಬಂದು ”ಸಾಬೀತ್ ’ಆಗಿ ಆಗುವುದಾದರೂ ಏನು ? ಇಷ್ಟಕ್ಕೂ ಅವು ಹೊರಕ್ಕೆ ಬರುತ್ತವೆಯೇ ?


ಶ್ರೀ ಲಲಿತ್ ಮೋದಿಯವರು ರಾಕೆಟ್ ತರಹ ಗಗನವನ್ನೇರಲು ರಾಜಕಾರಣಿಗಳೇ ಕಾರಣ. ಈಗ ಅವರ ಮೇಲೆ ಮೊಕದ್ದಮೆ ನಡೆಸುವ ನಾಟಕ ಆದ್ತಿರೋರು ಅವರೇ ! ದಿಧೀರನೆ ತಮಗೆ ಬೇಕಾದ ವ್ಯಕ್ತಿ,ಚಿರಾಯು ಅಮೀನ್ ರವರನ್ನು ಮೋದಿಯವರ ಗದ್ದುಗೆಯಲ್ಲಿ ಕುಳ್ಳಿರಿಸಿದವರು ಯಾರು,  ಅವರೇ ರಾಜಕಾರಣಿಗಳು ! ಚಿರಾಯುರವರು ಕನಸುಮನಸಿನಲ್ಲೂ ಆಲೋಚಿಸದ ರಾಜಮರ್ಯಾದೆ, ಪದವಿ ಅವರಿಗೆ ದಕ್ಕಿದೆ ! ಸರ್ವಾನುಮತಕ್ಕೆ ಬೆಲೆಯಿದೆಯೇ ಅಥವಾ ಅದನ್ನು ಯಾರಾದರೂ ಅಪೇಕ್ಷಿಸುತ್ತಿದ್ದಾರೆಯೇ ! ಅಷ್ಟಕ್ಕೂ ಶರದ್ ಪವಾರ್ ರವರಿಗೆ, ’ಕ್ಲೀನ್ ಚಿಟ್ ’ಕೊಟ್ಟವರ್ಯಾರು ? ಅವರ್ಯಾಕ್ ಕೊಡಬೇಕು ? ಅಥವಾ ಕೊಡಲು ಅವರ್ಯಾರು ? ಇತ್ಯಾದಿಗಳನ್ನು ನೋಡಿದರೆ,ಪ್ರಜಾಪ್ರಭುತ್ವದ ಅನೇಕಾನೇಕ ತೃಟಿಗಳು ನಮ್ಮ ಕಣ್ಣಿನಮೇಲೆ ಸುಳಿದಾಡುತ್ತವೆ
!!

ಏನಂತೀರಾ. ’ಹೋಗ್ಲಿ ಬಿಡಿ ಸಾರ್ ನಮಗ್ಯಾಕೆ, ಅದೇನೊ ಅಂತಾರಲ್ಲ”...... ಅಂತ ಶುರುಮಾಡೊದ್ ತಾನೇ ನಮ್ಮಂತ ಕನ್ನಡಿಗರ ವರ್ತನೆ !!!!!