ಪ್ರತಿಕ್ರಿಯೆ ಏಕೆ.. ಬೇಕೇ?

ಪ್ರತಿಕ್ರಿಯೆ ಏಕೆ.. ಬೇಕೇ?

ಸಂಪದದಲ್ಲಿ ಬರುವ ಲೇಖನ, ಬ್ಲಾಗ್ ಗಳಿಗೆ ಪ್ರತಿಕ್ರಿಯೆ ಯನ್ನು ಓದುಗರಿಂದ ನಿರೀಕ್ಷಿಸುವುದು ಸಲ್ಲದು ಎಂದು ಕೆಲವರ ಅಭಿಪ್ರಾಯ. ಈ ಮೊದಲೊಮ್ಮೆ ನಾನು ಬರೆದಿದ್ದೆ ಪ್ರತಿಕ್ರಿಯೆ ಬರೆಯುವುದು ಊಳೆಯದು, ಇದರಿಂದ ನವ ಲೇಖರಿಗೆ ಉತ್ಸಾಹ ತುಂಬಲು ಸಹಕಾರಿ ಎಂದು. ಒಂದು ಲೇಖನಕ್ಕೆ ಪ್ರತಿಕ್ರಿಯೆ ಬರದಾದಾಗ ಬರೆದವ ಒಂದು ರೀತಿಯ rejected ಭಾವನೆಯಿಂದ ಕೊರಗಬಹುದು. ಬರೆದದ್ದು ತೀರಾ ಕೆತ್ತದ್ದಾಗಿದ್ದರೂ ಸಹ ಅದನ್ನು ಎತ್ತಿ ತೋರಿಸಿದರೆ  ಭವಿಷ್ಯದಲ್ಲಿ ಆತನ ಬರವಣಿಗೆ ಉತ್ತಮಗೊಳ್ಳಬಹುದು. ಅಷ್ಟೇ ಅಲ್ಲ ಪ್ರತಿಕ್ರಿಯೆ ಬರೆದಾಗ ಬರೆದವನಿಗೆ ಓದುಗ ಏನನ್ನು ನಿರೀಕ್ಷಿಸುತ್ತಾನೆ ಎಂದು ಅರಿಯಲೂ ಸಾಧ್ಯ. ಉದಾಹರಣೆಗೆ, ನನ್ನ ಇತ್ತೀಚಿನ ಲೇಖನಗಳು (ಈ ಪುಟ್ಟ ಮೂವಿಯನ್ನೊಮ್ಮೆ ನೋಡಿರಲ್ಲ, "ಬರಹಾ, ನೂರು ನೂರು ತರಹಾ", ಬೆಟ್ಟ ನಿಟ್ಟುಸಿರು ಬಿಟ್ಟಾಗ ಮತ್ತು ಓ ಹ್ ನಿನ್ನ ಛಲವೇ) spur of the moment ನಿಂದ ಬಂದವು. ಆದರೆ ಅಚ್ಚರಿದಾಯಕವಾಗಿ ಈ ಲೇಖನಗಳನ್ನ ಕೆಲವರು ಮೆಚ್ಚಿಕೊಂಡರು. ನಾನು ಭಾವಿಸಿದ್ದಕ್ಕಿಂತ ಜಾಸ್ತಿಯೇ ಸಕಾರಾತ್ಮಕ ಪ್ರತಿಕ್ರಿಯೆಗಳು ಬಂದವು. ಆಗ ನನಗನ್ನಿಸಿದ್ದು ಕೆಲವರು ಅಷ್ಟಾಗಿ ಸರ್ಫಿಂಗ್ ಮಾಡದೆ ಸಂಪದದಲ್ಲಿ ಬರುವ ಲೇಖನಗಳ ಮೂಲಕವೇ ಹಲವು ವಿಚಾರಗಳನ್ನ ತಿಳಿದುಕೊಳ್ಳುತ್ತಾರೆಂದು. ಈಗ ಪ್ರತಿಕ್ರಿಯೆಯೇ ಬರುತ್ತಿಲ್ಲದಿದ್ದರೆ ನಾನಂತೂ ಬರೆಯುತ್ತಲೇ ಇರುತ್ತಿದ್ದೆ ( ಅಷ್ಟು ಸುಲಭವಾಗಿ rejection ಅನ್ನು ಬೆನ್ನ ಮೇಲೆ ಹೊರುವವನಲ್ಲ ನಾನು J) ಆದರೆ ಇದೆ ಮಾತು ಸೂಕ್ಷ್ಮ ಸ್ವಭಾವದ ಜನರ ಬಗ್ಗೆ ಹೇಳಲು ಸಾಧ್ಯವಿಲ್ಲ. ಬೆಯುವ್ವರು ಮನಸ್ಸಿನಲ್ಲಿ ಏನಾದರೂ ಆಸೆ ಅಭಿಲಾಷೆ ಗಳನ್ನಿಟ್ಟುಕೊಂಡೆ ಬರೆಯುತ್ತಾರೆ. ಬರಹ ಚೆನ್ನಾಗಿದ್ದ ಕಡೆ ಪ್ರೋತ್ಸಾಹಿಸೋಣ, ಇಲ್ಲದಿದ್ದರೆ ಎಲ್ಲಿ ಎಡವಿದ್ದೀರ ಎಂದು ಹೇಳುವ ಎದೆಗಾರಿಕೆಯನ್ನು ತೋರಿಸಿ ಬರಹಗಾರನ ಕೌಶಲ್ಯವನ್ನು ಉತ್ತಮಪಡಿಸುವುದಕ್ಕೆ ಯತ್ನಿಸೋಣ.


ಇನ್ನು ಬರೆದ ಲೇಖನಗಳಿಗೆ ಪ್ರತಿಕ್ರಿಯೆ ಬಂದಾಗ ಪ್ರತಿಯೊಬ್ಬರಿಗೂ ವಂದನೆಗಳು, ಧನ್ಯವಾದಗಳು ಎಂದು ಶಿಷ್ಟಾಚಾರ ತೋರಿಸುವುದು ಬೇಡ. ಆರಂಭದಲ್ಲಿ ನಾನೂ ಹಾಗೇ ಮಾಡುತ್ತಿದ್ದೆ, ಈಗ ಎಲ್ಲರಿಗೂ ಒಟ್ಟಾಗಿ ಧನ್ಯವಾದ ಹೇಳುತ್ತೇನೆ. ಆದರೆ ಅದನ್ನು ಹೇಳಲೇ ಬೇಕಾದ ಅವಶ್ಯಕತೆಯೂ ಇಲ್ಲ. ಓದುಗ ಬರಹದ ಬಗ್ಗೆ ಎತ್ತುವ (relevant) ಪ್ರಶ್ನೆಗಳಿಗೆ ಉತ್ತರಿಸಿವುದು, ವಿವರಿಸುವುದು ಒಳ್ಳೆಯದು.


ನವಲೇಖಕರಿಗೆ ಸಂಪದ ಒಂದು ಅಮೋಘ ಸೇವೆಯಾಗಿದ್ದು ಹೊಸತಾಗಿ ಬರುವವರನ್ನು ಸ್ವಾಗತಿಸಿ, ಅವರ ಸಾಹಿತ್ಯದ ಕಡೆಗಿನ ಶ್ರಮವನ್ನು ಗುರುತಿಸಿ ಪ್ರೋತ್ಸಾಹಿಸೋಣ.                


 

Rating
No votes yet

Comments