ಹೀಗೊಂದು ಈ-ಮೇಲ್
ಹೀಗೊಂದು ಈ-ಮೇಲ್ ಬಂದಿತ್ತು: (ನನ್ನ ಮಾಜಿ ಸಹೊದ್ಯೋಗಿಯಿಂದ)
Good Afternoon Nammoora HOD'ge.
Chennagiddira? Giri Sannaga aagiddane. En maadodu, madve tension! Kharchu jaasti, maja kadime. Hudga Huchha Film Sudeep thara aagiddane. Dont tell him that i told about him
Rest all fine here
ನನ್ನ ಉತ್ತರ ಹೀಗಿತ್ತು ನೋಡ್ರಿ:
ಹಲೋ!
ನಂಗೇನೂ ಕೆಲ್ಸ ಇಲ್ಲಾ ಅಂದ್ಕೊಂಡ್ಯಾ...
ಊರೋರ್ ಸುದ್ದಿನೆಲ್ಲಾ ಮಾತಾಡೋಕೆ, ಹೇಳ್ತಾ ಕೂತ್ಕೋಳ್ಳೋಕೆ?
ಸರಿ, ಇನ್ನೇನು ಸಮಚಾರ, ಯಾವ್ ಫಿಲ್ಮ್ ನೋಡ್ದೆ ಇತ್ತೀಚೆಗೆ.
ವೇಣುಗೋಪಾಲ್ (ಮತ್ತೊಬ್ಬ ನೆಚ್ಚಿನ ಸಹೊದ್ಯೋಗಿ) ಕೇಳ್ದೆ ಅಂತ ಹೇಳು.
ನಿಮ್ಮವನಾದ,
ಶಿವಣ್ಣ.
ಅದಕ್ಕೆ ಆತ ಮತ್ತೂ ಮೈಲ್ ಮಾಡಿದ್ದೂ ಆಯ್ತು:
Naanu ninne DHOOM-2 ge hogidde. Hrithik Roshan nimma haage kanutta idda. Ade body, ade height, ade smile mattu ade.....
Bidi saar neevantu purushare alla.....Giri antu nimmanna nenesikollada dinave illa. Paapa Venu kooda sannage aagiddane. Naanu maatra chennagi tindukondu kudukondu....iddini
ನಾನ್ ಬಿಡ್ತೀನಾ... ಕನ್ನಡ ಕಲಿಸ್ದೇ... ಅವನಿಗೆ! ನನ್ನ ಉತ್ತರ:
ಭಲೇ! ಭಲೇ!!
ಮೆಚ್ಚಿದೆ ನಿನ್ನ ಮಾತುಗಳನ್ನ!!!
ಕನ್ನಡ ಬರ್ಯೋಕೆ ಬರಲ್ಲ ಅಂದ್ರೆ ಹೋಗಿ ಹಾಳ್ ಬಾವಿಗೆ ಬೀಳು, ಇಲ್ಲ ನೆಟ್ಟಗ್ ಟೈಪ್ ಮಾಡು. ಗೂಬೆ ರಾಮನ್...
ಗಿರಿ ಫೋನ್ ಮಾಡಿ ಈಗ್ತಾನೆ ಮಾತಾಡ್ದ.
ವೇಣುಗೋಪಾಲಸ್ವಾಮಿಯವರಿಗೆ ನಮ್ಮ ಕಡೆಯಿಂದ ಸ್ವಲ್ಪ ಆಹಾರದ ಪೊಟ್ಟಣಗಳನ್ನು ಕಳುಹಿಸಿಕೊಡಲಿದ್ದೇನೆ, ತಿಂದು ನೀರ್ ಕುಡಿಯೋಕ್ ಹೇಳು, ಆಯ್ತಾ... ದಪ್ಪಗ್ ಅಹುದು ಅಂತಾ ಅಷ್ಟೇ...
ಅಂದಹಾಗೆ, ಏನ್ Receptionist ಜೊತೆ ಹೋಗಿದ್ಯಾ ಫಿಲ್ಮ್ಗೆ... ಅಲ್ಲಾ ಸುಮ್ಮನೇ ಕೇಳ್ದೆ... ಸಂತೋಷಪಟ್ಕೊಬೇಡ. (ಸುಮ್ಮನೆ ತಮಾಷೆಗೆ)
DHOOM-2 ಚೆನ್ನಾಗಿದೆಯಾ? ಐಶ್ ಬೇಬಿ - ಹೃತಿಕ್ ಕಿಸ್ ಮಾಡೋವ್ರಂತೆ... ನಿಜನಾ... ದಿನಪತ್ರಿಕೆಲಿ ಓದಿದೆ, ಅದಕ್ಕೆ ಕೇಳ್ದೆ...
ದೇಹ ಚೆನ್ನಾಗಿ ಕಾಪಾಡ್ಕೊಳ್ಳಪ್ಪಾ... ಈ ವಯಸ್ಸಲ್ಲಿ ತಿನ್ನದೇ-ಕುಡಿದೇ ಇನ್ನೇನ್ ಮಾಡಿ ನೀನಾದ್ರು ತಾನೇ?
ಸಂಬಳ ಬ್ಯಾರೇ, ಬ್ಯಾಡಾಂದ್ರೂ ತಗೋಳಿ ಅಂತಾ ಹೆಚ್ಚಿಗೆ ಕೊಡ್ತಾವ್ರೆ ನಿಮ್ಮ ಕಂಪನಿ (ಮುಚ್ಚಿಡಲಾಗಿದೆ) ಮಹಾಷಯರು... ನೀವ್ ತಾನೇ ಏನ್ಮಾಡಿರಿ...
ದೇವರು ಚೆನ್ನಾಗಿ ಇಟ್ಟಿರ್ಲಿಪ್ಪ ಎಲ್ಲಾರ್ನುವೆ...
ಸದ್ದೀಕೆ... ಮುಗುಸ್ತಾ ಇದ್ದೀನಿ... ಜಾಸ್ತಿ ಬೇಕೂಂದ್ರೆ ಇಲ್ಲಿ ನೋಡು. http://www.sampada.net/blog/shivannakc/05/12/2006/2517
ಶಿವ್ ಶಿವ....
ನಿಮ್ಮವ,
ಶಿವಣ್ಣ.