ಜ್ವರ ಇಳಿಸುವ ಫ್ರೀಜರ್ ಸಂಶೋಧನೆ
ಬೊಗಳೂರು, ಡಿ.7- ಜ್ವರ ಬಂದರೆ ಮೈ ಬಿಸಿಯಾಗುತ್ತೆ. ಅದನ್ನು ತಣಿಸಲು ಏನು ಮಾಡಬೇಕು ಎಂದು ಯೋಚಿಸುತ್ತಿದ್ದವರಿಗೆ ಹೊಸ ಉಪಕರಣವನ್ನು ಇಲ್ಲಿ ಸಂಶೋಧನೆ ಮಾಡಲಾಗಿದೆ. (http://bogaleragale.blogspot.com)
ಸಿಕ್ಕಾ ಬಟ್ಟೆ ಜ್ವರ ಏರಿ ಮೈ ಬಿಸಿಯಾದರೆ ನಿಮ್ಮ ದೇಹವನ್ನು ಮಾತ್ರ Freezer ನಲ್ಲಿಟ್ಟರಾಯಿತು. ಆದರೆ ಅದನ್ನು ಶಾಶ್ವತವಾಗಿ ತಣಿಯದಂತೆ ನೋಡಿಕೊಳ್ಳಬೇಕು ಎಂಬುದು ತಜ್ಞರು ಸಲಹೆ ನೀಡಿದ್ದಾರೆ !
ಹಾಗಾಗಿ ಫ್ರೀಜರ್ ಅನ್ನುವುದು ಕೇವಲ ತಂಗಳನ್ನ ಪೆಟ್ಟಿಗೆಯಾಗಿ, ಅನಾರೋಗ್ಯಕ್ಕೆ ಪೂರಕವಾಗಿ ಮಾತ್ರವೇ ಅಲ್ಲ, ಆರೋಗ್ಯವನ್ನೂ ರಿಪೇರಿ ಮಾಡಬಹುದಾಗಿದೆ ಎಂಬುದನ್ನು ಈ ಸಂಶೋಧಕ ಮಹಾಶಯ ತೋರಿಸಿಕೊಟ್ಟಿದ್ದಾನೆ.
ಆದರೆ ಜ್ವರ ಬಂದ ಮಗುವಿನ ಮೈ ಬಿಸಿ ಇಳಿಸಲು ಆತ ಮಾಡಿದ ಪ್ರಯತ್ನಗಳು ಮಾತ್ರ ಸಂಶೋಧನೆಗೆ ತಕ್ಕುದಾದಂತಿತ್ತು. ಯಾವುದೇ ಸಂಶೋಧನೆಗಳು accident ನಿಂದಲೇ ಆಗುತ್ತವೆ ಎಂಬ ವೇದವಾಕ್ಯವನ್ನು ಇಲ್ಲಿ ಸ್ಮರಿಸಬಹುದು.
ಮೊದಲಿಗೆ ಆತ ಮಗುವಿಗೆ ಚಂಡಿ ಬಟ್ಟೆ ಕಟ್ಟಿದ, ಅದನ್ನು ಒಣಗಿಸಲು ಮಗುವನ್ನು ಗಾಳಿಯಲ್ಲಿರಿಸಿದ. ಮಗು ಒಣಗಿದ್ದು ಜಾಸ್ತಿಯಾದ ಕಾರಣ, ಸ್ವಲ್ಪ humidity ಬರಲಿ ಅಂತ ಮತ್ತೆ ಫ್ರಿಜ್‌ನಲ್ಲಿಟ್ಟ.
ಇದೀಗ ಈ ಸಂಶೋಧನೆ ಮಾಡಿದ ವ್ಯಕ್ತಿಯೇ ಫ್ರೀಜರ್‌ನಂತಹ ಕೊಠಡಿಯಲ್ಲಿ ಕಾಲ ಕಳೆಯುತ್ತಿದ್ದಾನೆ ಅಂತ ತಿಳಿದುಬಂದಿದೆ. ಆದರೆ ಇಲ್ಲಿ ಆತನಿಗೆ ಎಣಿಸುವುದಕ್ಕೆ ಎದುರಿಗೆ ಕಂಬಿಗಳನ್ನು ಇರಿಸಲಾಗಿದೆ ಎಂದೂ ತಿಳಿದುಬಂದಿದೆ.