ನನ್ನವಳು ಮನೆಯೊಳಿಲ್ಲ...
ಬರಹ
ಮು೦ಬಾಗಿಲ ರ೦ಗೋಲಿ
ಅಳಿದು ಹೋಗಿ ಅಲ್ಲಲ್ಲಿ,
ಒಣಗಿದ೦ಗಳವಿದೆ ಎದುರಲ್ಲಿ.
ತಲಬಾಗಿಲ ತೋರಣವೇ ಕಾರಣವ ಕೇಳುವೆಯಾ?
ಮನೆಯೊಡತಿ ನನ್ನವಳು, ಮನೆಯೊಳಿಲ್ಲ...
ತುಳಸೀ ವೃ೦ದಾವನದ
ಸುತ್ತಲಿದೆ ಕತ್ತಲು,
ಮೇಲೆ ಮಾಸಿದ ಕು೦ಕುಮವು ಬೇರೆ.
ಎಣ್ಣೆ ಬತ್ತಿದ ಹಣತೆ, ಏಕೆ೦ದು ಕೇಳುವೆಯಾ?
ಮನೆಯೊಡತಿ ನನ್ನವಳು, ಮನೆಯೊಳಿಲ್ಲ...
ಮಾಡಿನ ಮೂಲೆಯಲಿ
ಜೇಡ ಕಟ್ಟಿದೆ ಗೂಡು,
ಅಡುಗೆ ಮನೆ ಒಲೆಯಲ್ಲಿ
ಬೆಕ್ಕು ಮಲಗಿದೆ ಮುದುಡಿ.
ವಿರಹದುರಿಯಲಿ ಬೇಯದೇ
ತಾಳಿಕೋ ಓ ಮನವೇ...
ಬ೦ದು ಬಿಡುವವಳು ಬೇಗ,
ಈಗ ಮನೆಯೊಳಿಲ್ಲ....