ರಾಜ್ಯ ಸಭೆಗೆ ಪರಭಾಷಿಕರು?
ಬರಹ
ನಮ್ಮ ರಾಜ್ಯದಿಂದ ರಾಜ್ಯಸಭೆಗೆ ಪರಭಾಷಿಕರು ಆಯ್ಕೆಯಾಗಿ ಹೋಗೋದು ತುಂಬಾ ದಿನದಿಂದ ನಡೆದು ಬಂದಿದೆ. ನಮ್ಮ ರಾಜ್ಯದ ರಾಜಕೀಯ ಪಕ್ಷಗಳು ಯಾರದೋ ಒತ್ತಡಕ್ಕೆ ಮಣಿದು ಅಥವಾ ಇನ್ಯಾವುದೋ ಆಸೆಯಿಂದ ಪರಭಾಷಿಕರನ್ನು ಆಯ್ಕೆ ಮಾಡಿ ಕನ್ನಡಿಗರ ಸ್ವಾಭಿಮಾನಕ್ಕೆ ದಕ್ಕೆ ಮಾಡಿರೋದು ಎಲ್ಲರಿಗೂ ಗೊತ್ತಿರೋ ವಿಷಯನೇ. ಈ ರೀತಿ ಆಯ್ಕೆಯಾದ ಹಲವಾರು ಸದಸ್ಯರು ಕನ್ನಡವನ್ನು ಕಲಿತು ಕನ್ನಡಿಗರೊಡನೆ ಬೆರೆಯುವುದಿರಲಿ, ಕನ್ನಡ-ಕರ್ನಾಟಕ-ಕನ್ನಡಿಗನ ಪರವಾಗಿ ರಾಜ್ಯಸಭೆಯಲ್ಲಿ ದನಿಯೆತ್ತದಿರೋದು ದೊಡ್ಡ ದುರಂತ. ಈ ಭಾರಿಯೂ ಸಹ ನಮ್ಮ ರಾಜ್ಯದ ರಾಜಕೀಯ ಪಕ್ಷಗಳು ಪರಭಾಷಿಕರನ್ನು ಆರಿಸಲು ಮುಂದಾಗಿದೆ. ಇದರ ವಿರುದ್ಧ ಕರವೇ ಎಲ್ಲಾ ಪಕ್ಷಗಳನ್ನು ಕನ್ನಡಿಗರನ್ನೇ ಆರಿಸಲು ಒತ್ತಾಯಿಸಿದೆ.
http://karave.blogspot.com/2010/05/rajyasabhege-kannadigaru.html
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ