ವೋಟ್ ಬ್ಯಾಂಕ್ ಜಪ - ಕಾನೂನು ಸುವ್ಯವಸ್ಥೆಯ ನೆಪ !
ಬರಹ
ಇಂದು ರಾಜೀವ್ ಗಾಂಧೀ ಹುತಾತ್ಮರಾದ ದಿನ.ಆದರೆ ನನಗೆ ಈಗ ನೆನಪಾಗುತ್ತಿರುವವರು ಅವರಮ್ಮ ಇಂದಿರಾ.'ಇಂದಿರಾ ಗಾಂಧಿ!' ಬಹುಷಃ ಸ್ವತಂತ್ರ ಭಾರತದ ಇತಿಹಾಸದಲ್ಲಿ ದೇಶದ ರಕ್ಷಣೆಯ ವಿಷಯದಲ್ಲಿ ಯಾವ ರಾಜಿ ಮಾಡಿಕೊಳ್ಳದೆ ಮುನ್ನುಗ್ಗುತಿದ್ದ ಅವರಂತ ಇನ್ನೊಬ್ಬ ಪ್ರಧಾನಿ ಈ ದೇಶಕ್ಕೆ ಮತ್ತಿನ್ಯಾರು ಸಿಕ್ಕಿಲ್ಲ ಅಂದರೆ ಅದು ಉತ್ಪ್ರೇಕ್ಷೆಯಾಗಲಾರದು.ಅವರ ಬಗ್ಗೆ ಹಿಂದೊಮ್ಮೆ ಬರೆದಿದ್ದೇನೆ.ಆದರೆ ಅಲ್ಲಿ ಮರೆತಿದ್ದ ಒಂದು ವಿಷಯ ಇವತ್ತಿನ ಪರಿಸ್ಥಿತಿಗೆ ನೆನಪಾಯಿತು.
ಅವನು ಮಕ್ಬೂಲ್ ಭಟ್!, JKLF ಸ್ಥಾಪಕರಲ್ಲೊಬ್ಬ.ಮರಣದಂಡನೆ ಶಿಕ್ಷೆಗೆ ಗುರಿಯಾಗಿ ಜೈಲಿನಲ್ಲಿದ್ದ ಈ ಕಾಶ್ಮೀರಿ ಮುಸಲ್ಮಾನನ್ನ ಬಿಡಿಸಿಕೊಳ್ಳಲು, ಇಂಗ್ಲೆಂಡಿನಲ್ಲಿ ಭಾರತದ ರಾಜತಾಂತ್ರಿಕ ಅಧಿಕಾರಿಯಾಗಿದ್ದ ರವೀಂದ್ರ ಮ್ಹಾತ್ರೆಯವರನ್ನ ಅಪಹರಿಸಿದ ಉಗ್ರಗಾಮಿಗಳು, ಅವನ ಬಿಡುಗಡೆಯ ಷರತ್ತನ್ನ ಮುಂದಿಟ್ಟರು.ಇಂದಿರಮ್ಮ ಅಲ್ಲದೆ ಬೇರೆ ಯಾರಾದರು ಇದ್ದಿದ್ದರೆ ಬಿಡುತಿದ್ದರೆನೋ!?, ಆದ್ರೆ ಆಕೆ ಬಗ್ಗಲಿಲ್ಲ,ಕ್ಷಮಾಪಣೆ ನೀಡುವಂತೆ ಕೋರಿ ರಾಷ್ಟ್ರಪತಿ ಗ್ಯಾನಿ ಜೈಲ್ ಸಿಂಗ್ ಬಳಿ ಹೋಗಿದ್ದ ಅರ್ಜಿ ತಿರಸ್ಕ್ರುತವಾಗುವಂತೆ ನೋಡಿಕೊಂಡರು,ಅವನನ್ನ ಗಲ್ಲಿಗೇರಿಸಿ ಇಂತವಕ್ಕೆಲ್ಲ ಭಾರತ ಬಗ್ಗುವುದಿಲ್ಲ ಅನ್ನುವ ಸ್ಪಷ್ಟ ಸಂದೇಶ ನೀಡಿದ್ದರು ಇಂದಿರಮ್ಮ.
ಇದು ನಡೆದಿದ್ದು ೧೯೮೪ ರಲ್ಲಿ,ನೇಣಿಗೆರಿಸಲ್ಪಟ್ಟವನು ಒಬ್ಬ ಕಾಶ್ಮೀರಿ ಮುಸಲ್ಮಾನ,ಕಾಶ್ಮೀರ ಹೊತ್ತಿ ಉರಿಯುತಿದ್ದ ಆ ದಿನಗಳಲ್ಲೇ ಯಾವ ಕಾನೂನು ಸುವ್ಯವಸ್ಥೆಯ ನೆಪ ಹೇಳಿ ಅವನಿಗೆ ಶಿಕ್ಷೆ ಜಾರಿ ಮಾಡುವಲ್ಲಿ ಕೇಂದ್ರ ಸರ್ಕಾರ ಹಿಂದೆ ಮುಂದೆ ನೋಡಲಿಲ್ಲ.ಆದರೆ ಈಗ ಅಫ್ಜಲ್ ಗುರುವಿನ ವಿಷಯದಲ್ಲಿ ಮಾತ್ರ ಕಾನೂನು ಸುವ್ಯವಸ್ಥೆಯ ನೆಪ ಬಂದು ಕೂತಿದೆ!

ಯಾರ ಕಿವಿಗೆ ಹೂ ಇಡಲು ಹೊರಟಿದ್ದಾರೆ ಈ ಜನ.ಕಾನೂನು ಸುವ್ಯವಸ್ಥೆಯನ್ನು ಕಾಪಡಲಾಗದ ಸರ್ಕಾರವಾದರು ಏಕಿರಬೇಕು ಅಧಿಕಾರದಲ್ಲಿ?,ಅವನನ್ನ ಜೀವಂತವಿಟ್ಟು ಮತ್ತಿನ್ಯಾವ ಅಪಹರಣದ ನಾಟಕ ಶುರುವಾಗಿ ಇದೆ 'ಕಾನೂನು ಸುವ್ಯವಸ್ಥೆಯ' ನೆಪ ಹೇಳಿ ಬಿಡುಗಡೆ ಮಾಡಲು ಕಾದಿದ್ದಾರೆ ಇವರು.ನಂಗೆ ಒಮ್ಮೊಮ್ಮೆ ಅನ್ನಿಸುವುದು ಈಗ ಇಷ್ಟೆಲ್ಲಾ logic ಮಾತಾಡೋ ರಾಜಕಾರಣಿಗಳಲ್ಲಿ ಒಂದಿಬ್ಬರು ಯಾರಾದರು ಅವತ್ತಿನ ದಾಳಿಯಲ್ಲಿ ಬಲಿಯಾಗಿದ್ದರೆ ಆಗ ಇವರಿಗೆ ಬಲಿದಾನಗೈದವರ ಕುಟುಂಬದ ಅಳಲು ಅರ್ಥವಾಗುತ್ತಿತ್ತು,ಆದರೆ ನಮ್ಮ ಭದ್ರತಾ ಪಡೆಯ ಜವಾನರು ಯಾವ ಜನ ಸೇವಕರನ್ನ ಉಳಿಸಲು ತಮ್ಮ ಎದೆಯೊಡ್ಡಿ ನಿಂತರೋ ಅಂತ ಜವಾನರ ಬಲಿದಾನಕ್ಕೆ ಅವಮಾನ ಮಾಡುತ್ತಿರುವ ಈ ಜನಸೇವಕರನ್ನ ಏನು ಮಾಡೋಣ?
'ಕಾನೂನು ಸುವ್ಯವಸ್ಥೆಯ ನೆಪ'ದಲ್ಲಿ ನಿಜವಾಗಿ ಈ ರಾಜಕಾರಣಿಗಳು,ಕೇಂದ್ರ ಸರಕಾರ ಮಾಡುತ್ತಿರುವುದು 'ವೋಟ್ ಬ್ಯಾಂಕ್ ಜಪ' ಅಷ್ಟೇ!,
ಅಂದು ಮುಂಬೈ ದಾಳಿಯಾದಾಗ ಒಂದು ಸಂದೇಶ ಹರಿದಾಡಿತ್ತು ನೆನಪಿದೆಯಾ?
'ಬೋಟಿನಲ್ಲಿ ಬಂದವರ ಬಿಡಿ,ವೋಟಿನಲ್ಲಿ ಬಂದವರ ನೋಡಿ'

- ರಾಕೇಶ್ ಶೆಟ್ಟಿ