ಮೂಢ ಉವಾಚ - 10

ಮೂಢ ಉವಾಚ - 10

ಬರಹ

       ಮೂಢ ಉವಾಚ - 10 


ಒಲವೀವುದು ಗೆಲವು ಬಲವೀವುದು|


ಜೊತೆಜೊತೆಗೆ ಮದವು ಮತ್ತೇರಿಸುವುದು||


ಸೋಲಿನವಮಾನ ಛಲ ಬೆಳೆಸುವುದು|


ಯಶದ ಹಾದಿ ತೋರುವುದೋ ಮೂಢ||


 


ತಾನೇ ಸರಿ ತನ್ನದೇ ಸರಿ ಕಾಣಿರಿ|


ಎಂಬ ಸರಿಗರ ಸಿರಿಗರ ಬಡಿದ ಪರಿ||


ಏನು ಪೇಳ್ವುದೋ ತಿಪ್ಪೆಯ ಒಡೆಯ|


ತಾನೆಂಬ ಶುನಕದ ಹಿರಿಮೆಗೆ ಮೂಢ||


*************************


-ಕವಿನಾಗರಾಜ್.