ನಿನ್ನ ಬಣ್ಣಿಸ ಹೊರಟೆ...
ಏನೆಂದು ತಾ ಬಣ್ಣಿಸಲಿ ನಿನ್ನ
ಹೋಲಿಸಲಿ ನಿನ್ನಾರಜೊತೆ
ನಿನ್ನ ಹೊಗಳಿ ತಾರಕಕ್ಕೇರಿಸಲು ನಾನಲ್ಲ ಕವಿ;
ನೀನಲ್ಲ ಚಂದ್ರಮುಖಿ
ನಿನಗಿಲ್ಲ ನಕ್ಷತ್ರದೊಳಪು
ನಿನ್ನಲ್ಲಿಲ್ಲ ಸುಕೋಮಲತೆ!!!
ರೋಧಿಸದಿರೆನ್ನ ಚೆಲುವೆ
ನೀ ನನಗೆ ದೂರದ ಬೆಟ್ಟವಲ್ಲ;
ನೀ ಎನ್ನ ಬಿಗಿದಪ್ಪಿರುವ ಒಲವು
ಬಿಟ್ಟರೂ ಬಿಡಲೊಲ್ಲ
ಹಿಡಿದರೂ ಸಿಗಲೊಲ್ಲ
ನನ್ನುಸಿರು ನೀನು.
ನಿನಗಿಲ್ಲ ಯಾರೂ ಸರಿಸಾಟಿ!!!
-ಜೂನ್ 30, 2006
Rating
Comments
ಉ: ನಿನ್ನ ಬಣ್ಣಿಸ ಹೊರಟೆ
In reply to ಉ: ನಿನ್ನ ಬಣ್ಣಿಸ ಹೊರಟೆ by kavinagaraj
ಉ: ನಿನ್ನ ಬಣ್ಣಿಸ ಹೊರಟೆ