ಕಲಾಶಾಲೆಗೆ ಪೂರ್ಣತೆ ಲಭಿಸುವುದು ಭವಿಷ್ಯವು ಪಳೆಯುಳಿಕೆಯಾದಾಗಲೆ:ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳು ೯

ಕಲಾಶಾಲೆಗೆ ಪೂರ್ಣತೆ ಲಭಿಸುವುದು ಭವಿಷ್ಯವು ಪಳೆಯುಳಿಕೆಯಾದಾಗಲೆ:ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳು ೯

(೪೧) ಒಳ್ಳೆಯ ಕಲಾಶಾಲೆಯೊಂದು, ಮೊದಲಿಗೆ, ಅಲ್ಲಿ ಕಲಿಸುವುದನ್ನೆಲ್ಲೆ ಹೇಗೆ ಮರೆಯುವುದು ಎಂಬುದನ್ನು ತಿಳಿಸುತ್ತದೆ. ಸಾಧಾರಣ ಕಲಾಶಾಲೆಯೊಂದು ಮಿಕ್ಕೆಲ್ಲವನ್ನೂ ಕಲಿಸುತ್ತದೆ.


(೪೨) ನಾನೊಬ್ಬ ಪರಿಪೂರ್ಣ ವ್ಯಕ್ತಿತ್ವವುಳ್ಳ ವ್ಯಕ್ತಿ. ನನ್ನಲ್ಲಿನ ಒಂದೇ ಕೆಟ್ಟ ಗುಣವೆಂದರೆ, ನನ್ನನ್ನೇ ವರ್ಣಿಸಿಕೊಳ್ಳುವಾಗ ನಾನು ಸತ್ಯ ಹೇಳುವುದಿಲ್ಲ.


(೪೩) ಭವಿಷ್ಯದಲ್ಲಿ ಪರಿಗಣಿತವಾಗುವ ನನ್ನ ಪೂರ್ವಾಶ್ರಮವನ್ನೇ ಪಳೆಯುಳಿಕೆ ಎನ್ನುವುದು.


(೪೪) ನಿನ್ನಲ್ಲಿ ಏನಿಲ್ಲವೋ ಅದರ ಬಗ್ಗೆ ಕನವರಿಸುತ್ತೀಯ. ನಿನ್ನಲ್ಲೇನಿದೆಯೋ ಅದಕ್ಕೆ ನಿನ್ನ ಬಗ್ಗೆ ತೃಪ್ತಿಯಿಲ್ಲ. ಆದ್ದರಿಂದಲೇ ಏನನ್ನೂ ಬಯಸಬಾರದೆಂಬ ನಿನ್ನ ಬಯಕೆ ಪೂರ್ಣವಾಗುವುದೇ ಇಲ್ಲ.


(೪೫) ಎಲೆಯೊಂದು ಮರದ ಭವಿಷ್ಯ ಹಾಗೂ ಭೂತ!

Rating
No votes yet

Comments