ನೀಲ ಸಮುದ್ರದ ಕಪ್ಪು ಕಡಲಿನ ತಡಿಯಲ್ಲಿ

ನೀಲ ಸಮುದ್ರದ ಕಪ್ಪು ಕಡಲಿನ ತಡಿಯಲ್ಲಿ

ಸಂಜೇಯು ಕಳೆದು
ಸೂರ್ಯ ಜಾರಿ  ಬೀಳುವ ಸಮಯದಲ್ಲಿ
ನನ್ನಲ್ಲಿ ನೀ ಬಂದು
ಕೇಳಿದ್ದಾದರೂ ಏನು ಗೆಳತಿ?.
ಆಗಸದಲ್ಲೊಂದು ಬೆಳಕನ್ನು
ನೆಟ್ಟು ಬಾ ಎಂದು.
ಕಳೆದು ಹೋಗಿರುವ
ಸೂರ್ಯನನ್ನಾದರೂ
ಹುಡುಕಿ ಕೊಡಲು ಪ್ರಯತ್ನಿಸುವೆ.
ತುಸು ಚಂದ್ರನಿಗಾದರೂ ತಿಳಿಸುಬಿಡು
ಸ್ವಲ್ಪ ಬೆಳಕನಾದರೂ
ದಾನ ಕೊಡಲಿ.
ಬಾನಲಿ ಮಿನುಗುವ ನಕ್ಷತ್ರಗಳಿಗಾದರೂ
ತಿಳಿಸಿ ಬಿಡು  
ಕತ್ತಲಲ್ಲಿ ನನಗೆ ಬೆಳಕದೋರುವ
ದೀಪವಾಗಲಿ.
ರಾತ್ರಿಯಲ್ಲಿ ತಿರುಗುವ
ಮಿಣುಕು ಹುಳುಗಳನ್ನಾದರೂ
ನನ್ನ ಸಂಗಡ ಕಳಿಸಿಕೊಡು
ಹುಡುಕಿ ಕೊಡುವ
ಪ್ರಯತ್ನವನ್ನಾದರೂ ಮಾಡುತ್ತೇನೆ.
ಇಲ್ಲದಿದ್ದಲ್ಲಿ
ಹೇಗೆ ಹುಡುಕಲಿ ಗೆಳತಿ...
ಆ ನೀಲ ಸಮುದ್ರದ
ಕಪ್ಪು ಕಡಲಿನ ತಡಿಯಲ್ಲಿ
ಮುಳುಗಿಹೋದ ಸೂರ್ಯನನ್ನು.

                                                               ವಸಂತ್

 

Rating
No votes yet

Comments