ಮಥನ

ಮಥನ

ಬರಹ

ಅಂಕು  ಡೊಂಕಿನ  ಹಾದಿಯಲ್ಲಿ,

ದೂರದೂರಿಗೆ  ಪಯಣ ,

ಕನ್ನಳತೆಗೆ  ನಿಲುಕುವಷ್ಟೇ  ಪರಿಧಿ 

ಪ್ರತಿ  ಹಂತ  ಹಂತದಲ್ಲೂ ,

ಆಗೋಚರ  ದಿಗಂತ .

 

ಹತ್ತು  ಹಲವಾರು  ತಿರುವುಗಳು ,

ಮತ್ತೆ  ನೂರಾರು  ಹಾದಿ ,

ಆಯ್ಕೆಗಾಗಿ  ತೊಳಲಾಟ ,

ಬಾಳ್ವೆಗಾಗಿ  ಪರದಾಟ .

 

ಒಬ್ಬಂಟಿಯಲ್ಲ  ಹಾದಿಯಲಿ ,

ಒಂಟಿತನದ  ನೋವು  ಮನದಲಿ ,

ಚಿತ್ತಾರವಿರದ  ವಿಚಿತ್ರ  ಪಯಣ ,

ಬರೀ  ಗುರಿಯೆಡೆಗೆ  ಗಮನ ,

 

ಶರಧಿ  ಸೇರುವ  ತವಕ ,

ಗಮ್ಯ  ಕಾಣುವ  ತನಕ ,

ಹಿಂತಿರುಗಿ  ಕಂಡಾಗ  ನಡೆದು  ಬಂದ  ಹಾದಿ ,

ಮನದ  ಅಂತರಾಳದಿ  ಮೂಡುತಿದೆ ,

ಬದುಕಿನ  ಸಾರ್ಥಕತೆಯ  ಭಾವ .