ಪುಟ್ಟ ಕಲಿತ ಅಣ್ಣಾವರ ಹಾಡು

ಪುಟ್ಟ ಕಲಿತ ಅಣ್ಣಾವರ ಹಾಡು

ಬರಹ

ಮೊನ್ನೆ ನಮ್ಮ ದೂರದ ಸಂಬಂಧಿ ಒಬ್ಬರ ಮನೆಗೆ ಹೋಗಿದ್ದೆ. ಅವರ ಐದು ವರ್ಷದ ಮುದ್ದು ಮಗನಿಗೆ ಅಣ್ಣಾವರ ಹಾಡು ಕಲಿಸಿದೆ.
ಆ ಹಾಡು ಈ ರೀತಿ ಇತ್ತು.
ಮಾನವನಾಗಿ ಹುಟ್ಟಿದಮೇಲೆ ಏನೇನ್ ಕಂಡಿ
ಸಾಯೋತನಕ ಸಂಸಾರದಲ್ಲಿ ಗಂಡ ಗುಂಡಿ
ಹೇರಿಕೊಂಡು ಹೋಗೋದಿಲ್ಲ ಸತ್ತಾಗ ಬಂಡಿ
ಇರೋದ್ರೊಳಗೆ ಒಮ್ಮೆ ನೋಡು ಜೋಗದ ಗುಂಡಿ.

ಮಗು ಕೂಡಾ ಬಹಳ ಖುಷಿಯಲ್ಲೇ ಹಾಡು ಕಲಿಯಿತು. ಸ್ವಲ್ಪ ತಿಂಡಿ ಪೋತ. ಇಡೀ ದಿನ ಬಾಯಲ್ಲಿ ಏನಾದ್ರೂ ತಿಂತಾ ಇರಬೇಕು ಅವನಿಗೆ.
ನನಗು ಹಾಡು ಕಲಿಸಿದ ಖುಷಿ. ಸಂಜೆ ಮನೆಯಲ್ಲಿದ್ದ ಎಲ್ಲರನ್ನು ಒಟ್ಟು ಸೇರಿಸಿ , ಹೆಮ್ಮೆಯಿಂದ ಪುಟ್ಟನಿಗೆ ಹಾಡು ಹೇಳಲು ಹೇಳಿದೆ.
ಪುಟ್ಟ ಖುಷಿಯಿಂದ ಹಾಡಿದ್ದು ಹೀಗೆ.
ಮಾನವನಾಗಿ ಹುಟ್ಟಿದಮೇಲೆ ಏನೇನ್ ತಿಂದಿ?,
ಸಾಯೋತನಕ ಸಂಸಾರದಲ್ಲಿ ಬರೀ ಗಂಜಿ!,
ಹೇರಿಕೊಂಡು ಹೋಗೋದಿಲ್ಲ ಸತ್ತಾಗ ಬಂಡಿ
ಇರೋದ್ರೊಳಗೆ ಒಮ್ಮೆ ತಿನ್ನು ಎಲ್ಲಾ ತಿಂಡಿ .
ಹಾಡು ಕೇಳಿ ಎಲ್ಲಾ ನನ್ನ ಮುಖ ನೋಡ್ತಾ ಇದ್ರು. ನಾನು ಏನು ಹೇಳಲೂ ತೋಚದೆ ಒಂದು ಪೆಚ್ಚು ನಗೆ ನಕ್ಕು ಜಾಗ ಖಾಲಿ ಮಾಡಿದೆ.