ತುತ್ತಿನ ಚೀಲ…
ಅನುದಿನದ ಅಲೆದಾಟದಲಿ
ಹಸಿವೆಂಬ ಪಾತ್ರೆಯನಿಡಿದು
ಪರದಾಡುತ್ತಾ ಪರಿತಪಿಸಿ
ದೈನ್ಯ ಮನಸುಗಳತ್ತ ಹುಡುಕಾಟ.
ಒಂದೊ ಎರಡೊ
ತಟ್ಟೆಯಲ್ಲಿ ಸದ್ದಾದರೆ
ಅ ದಿನದ ಮಟ್ಟಿಗೆ ಔತಣವೇ ಸರಿ.
ಬದುಕನ್ನು ಮರೆತು
ಭಾವನೆಗಳನ್ನು ಬದಿಗಿಟ್ಟು
ಮರವಾದರೇನು
ಗುಡಿಯಾದರೇನು
ಕಣ್ಣು ಮುಚ್ಚಿದರೆ
ಸ್ವರ್ಗವೆ ಧರೆಗಿಳಿದಂತೆ.
ಮಡಿಯುಟ್ಟ ನಾರೆಯರು
ಅಡಿಯಿಡುವ ನೀರೆಯರಂತೆ
ಮೈಮರೆತ ಮನವು
ಚಿಂದಿಯೊಳು ಕಾಣುತ್ತಿದೆ
ರಂಬೆ ಮೇನಕೆಯರ ಸೊಗಸು.
ಯಾರು ಏನೆಂದರು
ಬದುಕುವ ಬವಣೆ ತಪ್ಪುವುದೇನು?.
ಕಾಡಿದರೇನಂತೆ
ಬೇಡಿದರೇನಂತೆ
ತನ್ನ ಬದುಕಿಗೆ ಬೇಕಲ್ಲವೆ ಕೀಲೆಣ್ಣೆ.
ಒತ್ತು ಉರಿಯುತ್ತದೆ
ಧರಣಿ ಉರುಳುತ್ತದೆ
ನಿಂತು ಬಿಟ್ಟರೆ ಬಿಡುವುದೆ ಈ ಜಗವು?.
ಉರಿಸಲು ಬೆಂಕಿಯಿಲ್ಲ
ಹತ್ತಿಕೊಂಡರು ನಿಲ್ಲುವುದಿಲ್ಲ.
ರಬಸದಲಿ ಬರುವ ಬಿರುಗಾಳಿಗೆ
ಕತ್ತಲೆಯು ಕೆಕ್ಕರಿಸಿ ನಗುತ್ತದೆ.
ಇನ್ನೆಲ್ಲಿದೆ ಆಸರೆ
ಇನ್ನೆಲ್ಲಿದೆ ಅರಿಗೋಲು
ಬಿಕ್ಷೆಯೊ ಶಿಕ್ಷೆಯೊ
ಬದುಕಿನ ಬಂಡಿಯನ್ನು ತಡೆಯುವವರುಂಟೆ?.
Rating
Comments
ಉ: ತುತ್ತಿನ ಚೀಲ…
In reply to ಉ: ತುತ್ತಿನ ಚೀಲ… by gopinatha
ಉ: ತುತ್ತಿನ ಚೀಲ…
ಉ: ತುತ್ತಿನ ಚೀಲ…
In reply to ಉ: ತುತ್ತಿನ ಚೀಲ… by ksraghavendranavada
ಉ: ತುತ್ತಿನ ಚೀಲ…
In reply to ಉ: ತುತ್ತಿನ ಚೀಲ… by vasanth
ಉ: ತುತ್ತಿನ ಚೀಲ…
ಉ: ತುತ್ತಿನ ಚೀಲ…