ಪ್ರೀತಿ - ತಾತ್ಸಾರ

ಪ್ರೀತಿ - ತಾತ್ಸಾರ

ಬೇಡ ಹುಡುಗ ಈ ಪ್ರೀತಿ ನನ್ನಲ್ಲಿ


ಸ್ವಲ್ಪವಾದರು ಇರಲಿ ಅಲ್ಲಿ ತಾತ್ಸಾರ


ಕೊಡುವೆನೆಂದರು, ಪಡೆವೆನೆಂದರು,


ಬಿಡುವರೆಲ್ಲಿರುವರು,


ತಿರುಗಿಬಿಡು ಅತ್ತ ಕಡೆ


ಮಿನುಗು ನಕ್ಷತ್ರ ಎಂದು ಕೊಳ್ಳುವೆ


ತಿರುಗದಿರು ಬೆಳಕ ಚೆಲ್ಲಿ ಇತ್ತಕಡೆ


ನೀ ಚೆಲ್ಲುವ ಬೆಳಂದಿಗಳು ಎಲ್ಲಿ ಕತ್ತಲಾಗುವುದೊ ಎಂಬ ಭಯ..


ನಗೆ ಹೂವ ನಿ ಚೆಲ್ಲು ಅವಳಲ್ಲಿ


ನಗುತಿರಲಿ ಆ ಹೂಮನಸಿನ " ಸುಮ "


ಅತ್ತ ಸಲ್ಲದ ಇತ್ತ ಸಲ್ಲದ ಬದುಕು ನಿನದಾಗದಿರಲಿ ಗೆಳೆಯ


ನನ್ನದಲ್ಲದ ಪ್ರೀತಿ ನನದೆ ಎಂದು ಬದುಕುವ ರೀತಿ


ನನಗೆನು ಹೊಸದಲ್ಲ ಹುಡುಗ..


ಕಣ್ಗಳು ಕಣ್ಣೀರ ಕೊಳವಾಗಿದೆ..


ಹೇಗೆ ನಾ ದೂರ ಹೋಗಲಿ..


 


 


 


 


 


 

Rating
No votes yet

Comments