ಭ್ರಷ್ಟಾಚಾರ ತಡೆಗೆ ಏನು ಮಾಡಬೇಕು ?

ಭ್ರಷ್ಟಾಚಾರ ತಡೆಗೆ ಏನು ಮಾಡಬೇಕು ?

ಬರಹ

ಇದಕ್ಕೆ ಪರಿಹಾರವೆಂದರೆ ನೋಟುಗಳ ಮುದ್ರಣವನ್ನೇ ನಿಲ್ಲಿಸುವುದು. ಬದಲಿಗೆ ಎಲ್ಲರಿಗೂ ಒಂದು ಮಾಸ್ಟರ್ ಕೊಡುವುದು. ಅದಕ್ಕೆ ರಾಷ್ಟ್ರೀಯ ಗುರುತು ಪತ್ರದಂತೆಯೇ 15 ಅಂಕಿಗಳ ಒಂದು ಗುರುತಿನ ಸಂಖ್ಯೆಯನ್ನು ಕೊಡಬೇಕು. ಸುಮಾರು ಹತ್ತು ವರ್ಷ ವಯಸ್ಸಾಗುವಾಗ ಈ ಕಾರ್ಡ್ ಕೊಡಬಹುದು. ಅದು ಆ ವ್ಯಕ್ತಿಯ ವೈಯಕ್ತಿಕ ಖಾತೆಯಾಗಿರುತ್ತದೆ. ಎಲ್ಲಾ ವ್ಯವಹಾರವೂ ಅದರಲ್ಲೇ ನಡೆಯಬೇಕು. ಉದಾ ಆ ಹುಡುಗನಿಗೆ ಅವರಪ್ಪ ಹಣ ಕೊಡಬೇಕೆಂದರೆ ತನ್ನ ಖಾತೆಯಿಂದ ಆನ್‌ಲೈನ್ ಮುಖಾಂತರವೇ ವರ್ಗಾಯಿಸಬೇಕು. ಹಣ ವರ್ಗಾವಣೆ ಅವಕಾಶವನ್ನು ಎಟಿಎಂ, ಮೊಬೈಲ್ ಎಸ್.ಎಂ.ಎಸ್.ಗಳಲ್ಲೂ ಒದಗಿಸಿದರೆ ಸುಲಭವಾಗುತ್ತದೆ. 
ಒಬ್ಬರಿಂದ ಇನ್ನೊಬ್ಬರಿಗೆ ಹಣ ವರ್ಗಾವಣೆಯಾಗಬೇಕೆಂದರೆ ಖಾತೆಯಿಂದ ಖಾತೆಗೇ ಹೋಗಬೇಕು. ಇದರಿಂದ ಸರ್ಕಾರಕ್ಕೆ ನಿಖರವಾದ ಲೆಕ್ಕ ಸಿಗುತ್ತದೆ. ತೆರಿಗೆಯನ್ನು ಅವರವರ ಖಾತೆಯಿಂದಲೇ ನೇರವಾಗಿ ಸರ್ಕಾರ ಪಡೆದುಕೊಳ್ಳಬಹುದಾದ್ದರಿಂದ ತೀರಾ ಕಡಿಮೆ ತೆರಿಗೆ ಇಟ್ಟರೂ ಸಾಕು. ತೆರಿಗೆ ಸೋರಿಕೆಯಾಗುವುದಿಲ್ಲ.
ಹಣದ ಕಳ್ಳತನವಾಗುವುದಿಲ್ಲ. ಅಕಸ್ಮಾತ್ ಯಾರಾದರೂ ಬೆದರಿಸಿ ಹಣವನ್ನು ತಮ್ಮ ಖಾತೆಗೆ ವರ್ಗ ಮಾಡಿಸಿಕೊಂಡರೂ ಸಹ ನಂತರ ಸಿಕ್ಕಿ ಹಾಕಿಕೊಳ್ಳುತ್ತಾರೆ. ಚಿನ್ನಾಭರಣ ಸೇರಿದಂತೆ ಯಾವುದೇ ವಸ್ತು ಕಳುವಾಗುವ ಭಯವಿರುವುದಿಲ್ಲ. ಕದ್ದವರು ಎಲ್ಲಾದರೂ ಮಾರಲೇಬೇಕು. ಆಗ ಆ ಹಣ ಎಲ್ಲಿಂದ ಬಂತು ಎಂದು ಕೆದಕಿದರೆ ಸಿಕ್ಕಿ ಹಾಕಿಕೊಳ್ಳುತ್ತಾರೆ.
ಅಧಿಕಾರಿಗಳು ಆದಾಯಕ್ಕಿಂತ ಹೆಚ್ಚು ಆಸ್ತಿ ಮಾಡಿದರೆ ಆ ಹಣ ಎಲ್ಲಿಂದ ಬಂತೆಂಬುದು ತಿಳಿದು ಹೋಗುತ್ತದೆ.
ಇದನ್ನು ಇನ್ನಷ್ಟು ಪರಿಷ್ಕರಿಸಿ ಆಚರಣೆಗೆ ತಂದರೆ ಭ್ರಷ್ಟಾಚಾರವನ್ನು ತಡೆಗಟ್ಟಬಹುದೇನೋ.

ಇದಕ್ಕೆ ಪರಿಹಾರವೆಂದರೆ ನೋಟುಗಳ ಮುದ್ರಣವನ್ನೇ ನಿಲ್ಲಿಸುವುದು. ಬದಲಿಗೆ ಎಲ್ಲರಿಗೂ ಒಂದು ಮಾಸ್ಟರ್ ಕಾರ್ಡ್ ಕೊಡುವುದು. ಅದಕ್ಕೆ ರಾಷ್ಟ್ರೀಯ ಗುರುತು ಪತ್ರದಂತೆಯೇ 15 ಅಂಕಿಗಳ ಒಂದು ಗುರುತಿನ ಸಂಖ್ಯೆಯನ್ನು ಕೊಡಬೇಕು. ಒಬ್ಬ ವ್ಯಕ್ತಿಗೆ ಸುಮಾರು ಹತ್ತು ವರ್ಷ ವಯಸ್ಸಾಗುವಾಗ ಈ ಕಾರ್ಡ್ ಕೊಡಬಹುದು. ಅದು ಆ ವ್ಯಕ್ತಿಯ ವೈಯಕ್ತಿಕ ಖಾತೆಯಾಗಿರುತ್ತದೆ. ಎಲ್ಲಾ ವ್ಯವಹಾರವೂ ಅದರಲ್ಲೇ ನಡೆಯಬೇಕು. ಉದಾ ಆ ಹುಡುಗನಿಗೆ ಅವರಪ್ಪ ಹಣ ಕೊಡಬೇಕೆಂದರೆ ತನ್ನ ಖಾತೆಯಿಂದ ಆನ್‌ಲೈನ್ ಮುಖಾಂತರವೇ ವರ್ಗಾಯಿಸಬೇಕು. ಹಣ ವರ್ಗಾವಣೆ ಅವಕಾಶವನ್ನು ಎಟಿಎಂ, ಮೊಬೈಲ್ ಎಸ್.ಎಂ.ಎಸ್.ಗಳಲ್ಲೂ ಒದಗಿಸಿದರೆ ಸುಲಭವಾಗುತ್ತದೆ. 

ಒಬ್ಬರಿಂದ ಇನ್ನೊಬ್ಬರಿಗೆ ಹಣ ವರ್ಗಾವಣೆಯಾಗಬೇಕೆಂದರೆ ಖಾತೆಯಿಂದ ಖಾತೆಗೇ ಹೋಗಬೇಕು. ಇದರಿಂದ ಸರ್ಕಾರಕ್ಕೆ ನಿಖರವಾದ ಲೆಕ್ಕ ಸಿಗುತ್ತದೆ. ತೆರಿಗೆಯನ್ನು ಅವರವರ ಖಾತೆಯಿಂದಲೇ ನೇರವಾಗಿ ಸರ್ಕಾರ ಪಡೆದುಕೊಳ್ಳಬಹುದಾದ್ದರಿಂದ ತೀರಾ ಕಡಿಮೆ ತೆರಿಗೆ ಇಟ್ಟರೂ ಸಾಕು. ತೆರಿಗೆ ಸೋರಿಕೆಯಾಗುವುದಿಲ್ಲ.

ಹಣದ ಕಳ್ಳತನವಾಗುವುದಿಲ್ಲ. ಅಕಸ್ಮಾತ್ ಯಾರಾದರೂ ಬೆದರಿಸಿ ಹಣವನ್ನು ತಮ್ಮ ಖಾತೆಗೆ ವರ್ಗ ಮಾಡಿಸಿಕೊಂಡರೂ ಸಹ ನಂತರ ಸಿಕ್ಕಿ ಹಾಕಿಕೊಳ್ಳುತ್ತಾರೆ. ಚಿನ್ನಾಭರಣ ಸೇರಿದಂತೆ ಯಾವುದೇ ವಸ್ತು ಕಳುವಾಗುವ ಭಯವಿರುವುದಿಲ್ಲ. ಕದ್ದವರು ಎಲ್ಲಾದರೂ ಮಾರಲೇಬೇಕು. ಆಗ ಆ ಹಣ ಎಲ್ಲಿಂದ ಬಂತು ಎಂದು ಕೆದಕಿದರೆ ಸಿಕ್ಕಿ ಹಾಕಿಕೊಳ್ಳುತ್ತಾರೆ.

ಅಧಿಕಾರಿಗಳು ಆದಾಯಕ್ಕಿಂತ ಹೆಚ್ಚು ಆಸ್ತಿ ಮಾಡಿದರೆ ಆ ಹಣ ಎಲ್ಲಿಂದ ಬಂತೆಂಬುದು ತಿಳಿದು ಹೋಗುತ್ತದೆ.ಇದನ್ನು ಇನ್ನಷ್ಟು ಪರಿಷ್ಕರಿಸಿ ಆಚರಣೆಗೆ ತಂದರೆ ಭ್ರಷ್ಟಾಚಾರವನ್ನು ತಡೆಗಟ್ಟಬಹುದೇನೋ.