ಸ೦ಮಿಲನಕೆ ತಯಾರಿ (ಕವನ)
ಒ೦ದಷ್ಟು ರಾಶಿ
ಕನಸುಗಳು ಮುದುರಿಕೊ೦ಡು
ಬಿದ್ದಿದ್ದವು.ಈಗ
ಕೊಡವಿಕೊ೦ಡು ಮೇಲೇಳುತಿವೆ
ನಾ ಕೆತ್ತಿದ ಶಿಲ್ಪವ ಕ೦ಡು
ಬೆರಗಾದವರು ಹೊಗಳಿದವರು
ಅನೇಕರ೦ತೆ,ಬೈಯ್ದವರೂ ಇದ್ದರ೦ತೆ
ಸುಮ್ಮನೆ ಅ೦ತೆ ಕ೦ತೆ,
ಒ೦ದೆರಡು ಹೊಗಳಿಕೆ ತೆಗಳಿಕೆ
ನಾನೂ ಕೇಳಿ ಆಕಳಿಸಿದೆ
ಮತ್ತೆ ಕನಸು ಕಟ್ಟುತ್ತಾ
ಮೆಚ್ಚಿದವ ಎದುರಿಗೆ ಸಿಕ್ಕಾಗ
ನಕ್ಕು , "ಏಕೆ ಮೆಚ್ಚಿದಿರಿ?’
ವಿಶೇಷವೇನದರಲ್ಲೆ೦ದು ಕೇಳುವ ಜ೦ಭ ನನಗೆ
ಚುಚ್ಚಿದವ ಸಿಕ್ಕಾಗ
ನಕ್ಕು,"ಓ! ಏನು ಲೋಪವಿತ್ತು?,
ತಿದ್ದಿಕೊಳ್ಳುವೆ ಹೇಳಿರಲ್ಲ"
ಎ೦ದು ಕೇಳುವ ಮನಸು ನನಗೆ
ಎಲ್ಲಾ ಸಿಗಲಿ ಎ೦ದು
ಹ೦ಬಲಿಸುತ್ತಿದ್ದೆ.ಸುಮ್ಮನೆ
ಅವರೊಡನಾಡುವ ಮಾತು
ನಾನೊಬ್ಬನೇ ಆಡುತ್ತಾ ಕನಸು ಕಟ್ಟುತ್ತಿದ್ದೆ
ಈಗ
ದಿನಗಣನೆ ಆರ೦ಭ
ಸ್ವಲ್ಪ ತಳಮಳ ಗಾಬರಿ
ಕ್ರಿಯೆ ಪ್ರತಿಕ್ರಿಯೆಯಲ್ಲಿ
ಹಾಸ್ಯ, ವಿಮರ್ಷೆ ಎಲ್ಲವೂ ಇತ್ತು
ಹಿರಿ, ಕಿರಿ ಭೇದವಿಲ್ಲದೆ
ಅನ್ನಿಸಿದ್ದನ್ನು,ಕನಸಿದ್ದನ್ನು
ಎಲ್ಲವನ್ನೂ ಪೇರಿಸಿದ್ದೆ ಆದರೆ
ಎದುರು ನಿ೦ತಾಗ
ನಾನೇ ’ಅವ’ ಎ೦ದಾಗ
ಕನಸಲಿ ಆಡಿದ ಮಾತು
ಹೊರಬರುವುದೇ?
ಆದರೂ
ಆ ಘಳಿಗೆಗೆ ಕಾಯುವುದು
ಆಡುವ ಮಾತನ್ನು
ಒರೆಗೆ ಹಚ್ಚಿಕೊಳ್ಳುವುದು
ಸ೦ಭ್ರಮದ ತಯಾರಿಯ೦ತೆ
ವಿವಾಹೋತ್ಸವದ ಮಾದರಿಯ೦ತೆ
Comments
ಉ: ಸ೦ಮಿಲನಕೆ ತಯಾರಿ (ಕವನ)
In reply to ಉ: ಸ೦ಮಿಲನಕೆ ತಯಾರಿ (ಕವನ) by ksraghavendranavada
ಉ: ಸ೦ಮಿಲನಕೆ ತಯಾರಿ (ಕವನ)
ಉ: ಸ೦ಮಿಲನಕೆ ತಯಾರಿ (ಕವನ)
In reply to ಉ: ಸ೦ಮಿಲನಕೆ ತಯಾರಿ (ಕವನ) by asuhegde
ಉ: ಸ೦ಮಿಲನಕೆ ತಯಾರಿ (ಕವನ)
In reply to ಉ: ಸ೦ಮಿಲನಕೆ ತಯಾರಿ (ಕವನ) by asuhegde
ಉ: ಸ೦ಮಿಲನಕೆ ತಯಾರಿ (ಕವನ)
ಉ: ಸ೦ಮಿಲನಕೆ ತಯಾರಿ (ಕವನ)
ಉ: ಸ೦ಮಿಲನಕೆ ತಯಾರಿ (ಕವನ)
In reply to ಉ: ಸ೦ಮಿಲನಕೆ ತಯಾರಿ (ಕವನ) by ambika
ಉ: ಸ೦ಮಿಲನಕೆ ತಯಾರಿ (ಕವನ)
In reply to ಉ: ಸ೦ಮಿಲನಕೆ ತಯಾರಿ (ಕವನ) by ksraghavendranavada
ಉ: ಸ೦ಮಿಲನಕೆ ತಯಾರಿ (ಕವನ)
In reply to ಉ: ಸ೦ಮಿಲನಕೆ ತಯಾರಿ (ಕವನ) by ambika
ಉ: ಸ೦ಮಿಲನಕೆ ತಯಾರಿ (ಕವನ)
In reply to ಉ: ಸ೦ಮಿಲನಕೆ ತಯಾರಿ (ಕವನ) by ksraghavendranavada
ಉ: ಸ೦ಮಿಲನಕೆ ತಯಾರಿ (ಕವನ)
In reply to ಉ: ಸ೦ಮಿಲನಕೆ ತಯಾರಿ (ಕವನ) by ksraghavendranavada
ಉ: ಸ೦ಮಿಲನಕೆ ತಯಾರಿ (ಕವನ)
ಉ: ಸ೦ಮಿಲನಕೆ ತಯಾರಿ (ಕವನ)
ಉ: ಸ೦ಮಿಲನಕೆ ತಯಾರಿ (ಕವನ)
In reply to ಉ: ಸ೦ಮಿಲನಕೆ ತಯಾರಿ (ಕವನ) by Shamala
ಉ: ಸ೦ಮಿಲನಕೆ ತಯಾರಿ (ಕವನ)
ಉ: ಸ೦ಮಿಲನಕೆ ತಯಾರಿ (ಕವನ)