ಎರಡು ಸಾಲುಗಳು - ೪
'ಇಂದು ನಾವೆಲ್ಲಿದ್ದೇವೆ' ಎಂದು ಭಾಷಣ ಕೊಟ್ಟವನಿಗೆ
ನಾವು ಎಲ್ಲಿಂದ ಬಂದಿದ್ದೇವೆ ಎಂದು ತಿಳಿದಿರಲಿಲ್ಲ
ಲೋಕ ಹಾಳಾದದ್ದು (ಖಳ)ನಾಯಕರಿಂದ ಅಲ್ಲ
ಮೆದುಳಲ್ಲಿ ಮಣ್ಣು ತುಂಬಿಕೊಂಡು ಹಿಂಬಾಲಿಸಿದವರಿಂದ
ನನಗೀಗ ಭಯವಿಲ್ಲ, ಏಕೆಂದರೆ
ಕಳೆದುಕೊಳಲು ನನಗೆ ಏನು ಉಳಿದಿಲ್ಲ
ಆಗಸದೆತ್ತರಕ್ಕೆ ಹಾರಲು ಸಿದ್ಧನಾಗಿದ್ದೇನೆ
ರೆಕ್ಕೆಗಳು ಮೊಳೆಯಬೇಕಷ್ಟೇ, ಮತ್ತೆ ಹಿಡಿಯುವವರಾರಿಲ್ಲ
ನನಗೋ ದಿನವೂ ಅಮ್ಮನ ದಿನ
ಬೆಳಿಗ್ಗೆ ಬೆಳಿಗ್ಗೆ ಸುಂದರ ನಿದ್ದೆಯನ್ನು ಭಂಗಗೊಳಿಸುತ್ತಾಳೆ
'ಸತ್ತ ಶವ' ಎಂದೇಕೆ ಹೇಳುವೆ, ಶವ ಜೀವಂತವಿರುವುದೇ?
ಅವನೆಂದ, 'ನಾನಿದ್ದೆನಲ್ಲಾ?'
ತಾವು ನಂಬಿದ್ದೇ ಸತ್ಯ ಎಂದು ಹೊಡೆದಾಡಿದರು
ಅವರು ಸತ್ಯದ ಅರಿವುಳ್ಳವರಿಗೆ ವಿಮುಖರು!
ರಕ್ತದಿಂದ ಧರ್ಮವನ್ನು ಉಳಿಸಲು ಹೋದವರು
ಪ್ರೀತಿ ತೋರಿಸಿದವನನ್ನು ಕೊಂದು ಹಾಕಿದರು.
ನೀನಿಲ್ಲ ಎಂಬ ಚಿಂತೆ ಈಗೀಗ ಕಾಡುತ್ತಿಲ್ಲ
ನಿನ್ನನ್ನು ನನ್ನಲ್ಲಿ ಕಂಡುಕೊಂಡಿದ್ದೇನೆ
ಇದಕ್ಕಿಂತ ಬೆಲೆ ಬಾಳುವದ್ದು ಯಾವುದೂ ಇಲ್ಲ
'ಇದೆ'. ನಾನೆಂದೆ, 'ನನ್ನ ವ್ಯಕ್ತಿತ್ವ'
Rating
Comments
ಉ: ಎರಡು ಸಾಲುಗಳು - ೪
ಉ: ಎರಡು ಸಾಲುಗಳು - ೪
ಉ: ಎರಡು ಸಾಲುಗಳು - ೪
ಉ: ಎರಡು ಸಾಲುಗಳು - ೪
ಉ: ಎರಡು ಸಾಲುಗಳು - ೪
In reply to ಉ: ಎರಡು ಸಾಲುಗಳು - ೪ by Roopashree
ಉ: ಎರಡು ಸಾಲುಗಳು - ೪
In reply to ಉ: ಎರಡು ಸಾಲುಗಳು - ೪ by santhosh_87
ಉ: ಎರಡು ಸಾಲುಗಳು - ೪
In reply to ಉ: ಎರಡು ಸಾಲುಗಳು - ೪ by ksraghavendranavada
ಉ: ಎರಡು ಸಾಲುಗಳು - ೪
In reply to ಉ: ಎರಡು ಸಾಲುಗಳು - ೪ by santhosh_87
ಉ: ಎರಡು ಸಾಲುಗಳು - ೪
In reply to ಉ: ಎರಡು ಸಾಲುಗಳು - ೪ by ksraghavendranavada
ಉ: ಎರಡು ಸಾಲುಗಳು - ೪
ಉ: ಎರಡು ಸಾಲುಗಳು - ೪
ಉ: ಎರಡು ಸಾಲುಗಳು - ೪
In reply to ಉ: ಎರಡು ಸಾಲುಗಳು - ೪ by gopinatha
ಉ: ಎರಡು ಸಾಲುಗಳು - ೪