ಅಲೆಯೆಂಬ ಸಾಗರವು ಪ್ರತಿಯೊಬ್ಬನ ಅನನ್ಯತೆಯ ಭೂತಾತೀತ ಇಂದ್ರಿಯ -- ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳು ೧೦
ಬರಹ
(೪೬) ಅಲೆಯು ಸಾಗರದ ಭಾಗವಲ್ಲ. ಎಷ್ಟೇ ನಿಕೃಷ್ಟವಾದರೂ ಅಲೆಯು ಸಾಗರದ ಅವಿಭಾಜ್ಯ ಅಂಗ!
(೪೭) ಮುಂದಿನ ಸಲ ನಾನು ನಿನ್ನನ್ನು ಮತ್ತೊಮ್ಮೆ ಭೇಟಿಮಾಡಿದಾಗ ಅದು ನಮ್ಮಿಬ್ಬರ ಮೂರನೇ ಭೇಟಿಯಾಗುತ್ತದೆ!
(೪೮) ’ಪ್ರತಿಯೊಬ್ಬರೂ ಅನನ್ಯ’ ಎಂಬ ಹೇಳಿಕೆಯು ವ್ಯಾಕರಣವನ್ನು ಇಕ್ಕಟ್ಟಿಗೆ ಸಿಲುಕಿಸುವ ತತ್ವಶಾಸ್ತ್ರ!
(೪೯) ಹಿನ್ನೆಲೆ ಹಾಗೂ ಮುನ್ನೆಲೆಯನ್ನು ನೈಜ ಆಳದಿಂದ ಬೇರ್ಫಡಿಸಲಾಗಿರುವ ಚಿತ್ರಕಲೆಯನ್ನು ಶಿಲ್ಪ ಎನ್ನುತ್ತೇವೆ.
(೫೦) ರೇಡಿಯೋ ಮತ್ತು ಟೆಲಿವಿಷನ್ ಕ್ರಮಬದ್ಧವಾಗಿ ಕಿವಿ ಮತ್ತು ಶ್ರವ್ಯ-ದೃಷ್ಟಿಗೆ ವರ್ತಮಾನದಲ್ಲಿ ಗೋಚರವಾಗುವ ಭೂತ! ಯಾರು ಹೇಳಿದ್ದು ಭೂತ ಇಂದ್ರಿಯಾತೀತವೆಂದು?!