ಮನುಷ್ಯ ಎಂದರೆ ?.
ಮನುಷ್ಯ ಎಂದರೆ ?
ಯೋಚಿಸುವ ತಿಳುವಳಿಕೆ
ಯುಳ್ಳವನು.
ಮನುಷ್ಯ ಎಂದರೆ ?
ರೋಗ ರುಜನೆಗಳ
ಮಾಂಸದ ಮುದ್ದೆ.
ಮನುಷ್ಯ ಎಂದರೆ ?
ಮೂಳೆ ಚರ್ಮಗಳ
ಮಿಶ್ರಣ.
ಮನುಷ್ಯ ಎಂದರೆ ?
ಪ್ರಾಣಿ ಪಕ್ಷಿಗಳಿಗಿಂತಲು
ಹೀನವಾದ ಮುಖವಾಡ.
ಮನುಷ್ಯ ಎಂದರೆ ?
ಮಾನವ ಸಂಭಂದಗಳ
ಸರಮಾಲೆ.
ಮನುಷ್ಯ ಎಂದರೆ ?
ಆಹಂಕಾರದ ಪರಮಾವದಿ.
ಮನುಷ್ಯ ಎಂದರೆ ?
ತನ್ನೋಳಗೆ ತಾನೆ ಕುದಿಯುವ
ಜ್ಯಾಲಾಮುಖಿ.
ಮನುಷ್ಯ ಎಂದರೆ ?
ತನ್ನ ನಾಶವನ್ನು ತಾನೇ
ಕಾಣದ ಅಂಧ....
ವಸಂತ್
Rating
Comments
ಉ: ಮನುಷ್ಯ ಎಂದರೆ?
In reply to ಉ: ಮನುಷ್ಯ ಎಂದರೆ? by Harish Athreya
ಉ: ಮನುಷ್ಯ ಎಂದರೆ?