ಮಾನವ ದೇಹ ಮತ್ತು ಭೂಮಿ!

ಮಾನವ ದೇಹ ಮತ್ತು ಭೂಮಿ!

ಮಾನವ ದೇಹವಿದು
ನಿಜದಿ ಭೂಮಿಯ ಚಿಕ್ಕದಾದ ರೂಪ


ಭೂಮಿಯಂತೆಯೇ ಇದೂ
ನಿಗೂಢ ಚಟುವಟಿಕೆಗಳ ಕೂಪ


ಕಾಡು ಮೇಡುಗಳಿವೆ
ಭುವಿಯ ಮೇಲ್ಮೈಯಲ್ಲಿರುವಂತೆ


ದಿಣ್ಣೆ ಕಣಿವೆಗಳೂ ಇವೆ
ಭೂಮಿಯುದ್ದಗಲಕೂ ಇರುವಂತೆ


ಇಲ್ಲಿ ಕ್ರಿಮಿ ಕೀಟಾಣುಗಳ ವಾಸ
ಅಲ್ಲಿ ಪ್ರಾಣಿ ಪಕ್ಷಿ ಸಂಕುಗಳಿರುವಂತೆ


ಇಲ್ಲಿ ಖಾಯಿಲೆ ಖಸಾಲೆಗಳು
ಅಲ್ಲಿನ ಅತಿವೃಷ್ಟಿ ಅನಾವೃಷ್ಟಿಗಳಂತೆ


ಮಾಂಸಖಂಡಗಳು ಆಡುವವು
ಅಲ್ಲಿ ಭೂಕಂಪನಗಳು ಆಗುವಂತೆ


ಇಲ್ಲಿ ವಾಂತಿ ಭೇದಿಗಳಿವೆ
ಅಲ್ಲಿರುವ ಜ್ವಾಲಾಮುಖಿಗಳಂತೆ


ಇಲ್ಲಿಯೂ ನಿರಂತರ ಚಲನೆ
ಭೂಮಿಯ ಆ ಪರಿಭ್ರಮಣದಂತೆ


ಮಾನಸಿಕ ಚಂಚಲತೆ ಇಲ್ಲಿ
ಅಲ್ಲಿನ ವಾತಾವರಣದಲ್ಲಿರುವಂತೆ


ಆದರೆ ಒಂದೇ ಅಂತರ
ಇಲ್ಲಿಗೂ ಅಲ್ಲಿಗೂ ಅರಿತಿರಾ?


ಇಲ್ಲಿ ಏರುಪೇರುಗಳಲ್ಲಿ
ಒಮ್ಮೊಮ್ಮೆ ವಿಪರೀತ ಉಷ್ಣತೆ


ಅಲ್ಲಿ ಉಷ್ಣತೆಯಲ್ಲಿ
ಒಮ್ಮೊಮ್ಮೆ ವಿಪರೀತ ಏರುಪೇರು!
*****************
ಆತ್ರಾಡಿ ಸುರೇಶ ಹೆಗ್ಡೆ

Rating
No votes yet

Comments