ಜ್ಯೋತಿಷಿಯ ಜ್ಯೋತಿಷ್ಯ

ಜ್ಯೋತಿಷಿಯ ಜ್ಯೋತಿಷ್ಯ


ಒಂದು ಸಣ್ಣ ಬದಲಾವಣೆ

ತುಂಬಾ ಸಮಯದ ನಂತರ ಗೆಳತಿಯರು ಭೇಟಿಯಾದರು.
ವಿಮಲ: ಸರಳಾ ನಿನ್ನ ಯಜಮಾನರು ಚಿತ್ರಕಾರರೆಂದು ಕೇಳಿದ್ದೆ. ನೀನು ಸೆಲೆಬ್ರಿಟಿಯಾದೆ ಬಿಡು. ಹೇಗನ್ನಿಸುತ್ತೆ.
ಸರಳ: ಮೊದ ಮೊದಲು ಚೆನ್ನಾಗಿಯೇ ಇತ್ತು. ಆಗ ಅವರು ನನ್ನನ್ನೇ ಮೋಡೆಲ್ ಮಾಡಿಕೊಂಡು ಚಿತ್ರ ಬರೆಯುತ್ತಿದ್ದರು.
ವಿಮಲ: ಈಗ?
ಸರಳ: ಈಗ ಯಾರ್‍ಯಾರೋ ಮೋಡೆಲ್ ಗಳನ್ನು ಕರೆತಂದು ಅವರ ಚಿತ್ರ ಬಿಡಿಸ್ತಾ ಇರ್ತಾರೆ.
ವಿಮಲ: ನೀನು ವಿರೋಧಿಸಲಿಲ್ವಾ?
ಸರಳ: ವಿರೋಧಿಸಿದ್ದೆ, ಆದರೆ ಅವರು ಯಾವಾಗಲೂ ಒಂದೇ ಮೊಡೆಲ್ಲಾದರೆ ಸರಿಯಾಗಿರಲ್ಲ,ಜನಾ ಚೇಂಜ್ ಬಯಸ್ತಾರೆ ಅಂದರು,
ವಿಮಲ: ನೀನು ಏನ್ ಮಾಡ್ತೀಯಾ ಈಗ?
ಸರಳ: ನಾನೂ ಅದೇ ನಾನೂ ಅದೇ ಮಾಡೋಣ ಅಂದ್ಕೋಂಡಿದ್ದೀನಿ, ಅಂದ ಹಾಗೆ ನಿನ್ನೆಜಮಾನ್ರು ಏನ್ ಮಾಡ್ಕೋಂಡಿದಾರೆ ಈಗ?
ವಿಮಲ: ಹ್ಞಾ!



ಸಂಪಾದಕರು  v/s   ಗುಜರಿ ವ್ಯಾಪಾರಿ

 ಲಕ್ಷ್ಮಮ್ಮ:ಏನ್ರೀ ಸಾವಿತ್ರಮ್ಮ, ನೀವು ನಿಮ್ ಗಂಡಂಗೆ ಡೈವೋರ್ಸ್ ಕೊಟ್ರಂತೆ, ಹೌದಾ?
 ಸಾವಿತ್ರಮ್ಮ: ಹೌದ್ರೀ, ಅವರು ಸಂಪಾದಕರಾಗಿದ್ರಲ್ವಾ, ದಿನಾ ಹೊಸತು ಬೇಕೂ, ಹೊಸತು ಬೇಕೂ, ಅಂತಿದ್ರು. ಕೇಳಿ ಕೇಳಿ ಬೇಜಾರ್ ಬಂತು,  ಡೈವೋರ್ಸ್ ಕೊಟ್ಟು ಬಿಟ್ಟೆ.
ಲಕ್ಷ್ಮಮ್ಮ:  ಮತ್ತೆ ಈಗ?
ಸಾವಿತ್ರಮ್ಮ: ಈಗ ಒಂದು ಹಳೇ ಸಾಮಾನು ಕೊಳ್ಳೋ ಗುಜರಿ ವ್ಯಾಪಾರೀನ ಮದುವೆ ಮಾಡ್ಕಂಡೆ ಕಣೇ.
ಲಕ್ಷ್ಮಮ್ಮ: ಯಾಕೆ?
ಸಾವಿತ್ರಮ್ಮ: ಅವನಿಗಾದ್ರೂ ಹಳೆ ವಸ್ತು ಖುಷಿಯಾಗತ್ತಲ್ವಾ  ಅಂತ?
ಲಕ್ಷ್ಮಮ್ಮ: ಸರಿ, ಈಗ್ಲಾದ್ರೂ ಖುಷಿಯಾಗಿದ್ದೀಯಲ್ವಾ?
ಸಾವಿತ್ರಮ್ಮ: ಇಲ್ಲ ಕಣೇ.
ಲಕ್ಷ್ಮಮ್ಮ: ಯಾಕೆ? ಏನಾಯ್ತೇ?
ಸಾವಿತ್ರಮ್ಮ: ಇವ್ನಿಗಂತೂ ಎಲ್ಲಾ ಹಳತರ ಮೇಲೂ ಕಣ್ಣು ಕಣೇ!


 
ಜ್ಯೋತಿಷಿಯ ಜ್ಯೋತಿಷ್ಯ

ಗಿರಾಕಿ:ಸ್ವಾಮೀ ಜ್ಯೋತಿಷಿಗಳೇ ನನ್ನ ಮಗನ ಜಾತಕ ಸರಿಯಾಗಿ ನೋಡಿ ಹೇಳಿ, ಅವನಿಗೆ ತಂದೆಯಾಗೋ ಯೋಗ ಇದೆಯಾ ಅಂತ?
ಜ್ಯೋತಿಷಿ: ಇಲ್ಲ ಕಣಯ್ಯಾ, ಇವನು ಈ ಜನ್ಮದಲ್ಲಿ ತಂದೆಯಾಗೋಲ್ಲ ಬಿಡು.
ಗಿರಾಕಿ: ಹಾಗಾದರೆ ಸರಿ ಬಿಡಿ.
ಜ್ಯೋತಿಷಿ: ಯಾಕೆ ಏನಾಯ್ತು?
ಗಿರಾಕಿ: ನಿಮ್ಮ ಮಗಳು ನನ್ನ ಮಗನಿಂದ್ಲೇ ಗರ್ಭಿಣಿಯಾದೆ ಅಂತಿದ್ದಳು,ಅದು ಸುಳ್ಳು ಅಂತಾಯ್ತಲ್ಲ, ನನ್ನ ಮಗನಿಗೆ ಬೇಗ ಬೇರೆ ಮದುವೆ ಮಾಡಬೇಕೀಗ.
ಜ್ಯೋತಿಷಿ: ಹ್ಞಾ!


Rating
No votes yet

Comments