ಮತಾಂಧರೂ ಕೃತಘ್ನರೂ...
ನೆನ್ನೆ ಟೈಮ್ಸ್ ಆಫ್ ಇಂಡಿಯ ದಲ್ಲಿ ಪ್ರಕಟವಾದ ಸುದ್ದಿ ಓದುತ್ತಿದ್ದೆ. ಅದರ ಕೊಂಡಿ ಇಲ್ಲಿದೆ ನೋಡಿ :
http://timesofindia.indiatimes.com/India/Shopian-doctors-charged-with-fudging-to-defame-security-forces/articleshow/5979908.cms
ಇದನ್ನು ಓದಿ ನನಗೆ ಅನಿಸಿದ್ದು ಆ ಕಾಶ್ಮೀರಿ ವೈದ್ಯರನ್ನು ಸೇರಿದಂತೆ ಇಡಿ ದೇಶವನ್ನೇ ರಕ್ಷಿಸುತ್ತಿರುವ ಭಾರತಿಯ ಸೇನೆಯ ಮೇಲೆ ಈ ಥರದ ಹೀನ ಸುಳ್ಳು ಆಪಾದನೆ ಹೊರಿಸಬೇಕೆಂದಿದ್ದರೆ, ಅವರ ಮನಸ್ಸಾದರೂ ಎಂಥಾದ್ದಿರಬಹುದು? ಭಾರತದ ಮೇಲೆ, ಭಾರತೀಯರ ಮೇಲೆ ಈ ಬಗೆಯ ಸೇಡು ಅವರ ಮನಸ್ಸಿನಲ್ಲಿ ಬರಲು ಕಾರಣವೇನು? ಜನಸಾಮಾನ್ಯರಲ್ಲಿ ಎಷ್ಟೇ ಸೇಡು ಇದ್ದರು ಉಪಕಾರ ಮಾಡಿದವರಿಎಗೆ ಅಪಕಾರ ಮಾಡುವಷ್ಟು ಕ್ರೂರಿಗಳಲ್ಲ. ಅಂಥ ಕ್ರೂರಿಗಳು ಇದ್ದರೂ ಎಲ್ಲೋ ಅಲ್ಲೊಂದು ಇಲ್ಲೊಂದು ಅಪರಾಧಿ ಹಿನ್ನೆಲೆಯುಳ್ಳವರು ಮಾತ್ರ. ಆದರೆ ಕಾಶ್ಮೀರ ವಿಷಯದಲ್ಲಿ ಇಡೀ ಒಂದು ಸಮುದಾಯವೇ (ಪ್ರತ್ಯೇಕತಾವಾದಿಗಳು) ಈ ರೀತಿ ಯೋಚಿಸಲು ಕಾರಣಗಳೇನು?
Rating