ಕನಸುಗಳ ಭಾರಕೆ ಕುಸಿದಿದೆ ಮನಸು

ಕನಸುಗಳ ಭಾರಕೆ ಕುಸಿದಿದೆ ಮನಸು


 


 


 ದಾರಿಯಲ್ಲಿ ಬಿಕ್ಷೆ ಬೇಡಿದರೆ ಸಿಗುತ್ತವೆ


ಆದರೆ ಕನಸುಗಳು  ಬೇಡದೆಯೇ ಸಿಗುತ್ತವೆ


ಚಿಂದಿ ಆಯುವಂತೆ  ಆ ಕನಸುಗಳನ್ನೂ  ಆರಿಸುತ್ತಾ


ಮಾಲೆ ಕಟ್ಟುತ್ತಲೇ ನಡೆಯಿತು


ಇಂದಲ್ಲ ನಾಳೆ ಈಡೇರಬಹುದೆಂಬ


ಹುಂಬನಂಬಿಕೆ ಇಂದಲಿ ಆ ಮನಸು


 


ಯಾರೆಂದೇ ಗೊತ್ತಿರದ ಅಪ್ಪ ,  ಅಮ್ಮನ ಹುಡುಕಿ  ಬರುವ


ನಾಳೆಯ ಅನ್ನ ಇಂದೇ ದಕ್ಕಿದಂತ ಅನುಭವ


ಪಾಟಿಯ ಹೆಗಲಿಗೇರಿಸುವ ,


ಅಕ್ಷರ ನಾಲ್ಕು ಕಲಿಯುವ  


ನೂರಾರು ಕನಸುಗಳ ಕಟ್ಟಿತು


 


ಹಾದಿಯ ಕಾರಿನ ದಣಿ ಕೊಟ್ಟಂತೆ ಹಣದ ಕಂತೆ


ಅಮ್ಮ ಕುಡಿತ ಬಿಟ್ಟಂತೆ, ಹಸಿದ  ಕಂಗಳಿಗೆ


ಅಕ್ಕನ ಮೈ  ಕಾಣದಂತೆ ಮೈ ತುಂಬ ಅಂಗಿ


ಆಸೆ ಪಟ್ಟಷ್ಟು ಜಾಮೂನು ತಿನ್ನುವ ತಂಗಿ


 


 


ಧೂಳಾದ ಕಂಗಳು  ಮುಚ್ಚುವುದದೇಕೆ


ತಥ್ ಈ ಕನಸುಗಳ  ತರಲೇಕೆ


ಕನಸುಗಳ ಮಾಲೆಯಲ್ಲೇ ಬದುಕಿ


ಕೊನೆಗೆ ಕುಸಿಯಿತೇಕೆ ಮನಸು


 


 


 


 


 

Rating
No votes yet

Comments