ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳು ೧೧
(೫೧) ಕಾಯುವುದೆಂದರೆ ಅದೊಂದು ಹಿಂಸೆ. ಏಕೆಂದರೆ ಅದು ಬಂದಾಗ ’ಕಾಯುವ’ ದುಶ್ಚಟವೂ ಅದರೊಂದಿಗೆ ಬಂದುಬಿಡುತ್ತದೆ!
(೫೨) ಜಗತ್ತಿನ ಬಗ್ಗೆ ಎಂದಿಗೂ ಅಚ್ಚರಿಪಡಬೇಡಿ. ಅದೆಷ್ಟು ತಿಕ್ಕಲು ಎಂದು ತಿಳಿಯಬೇಕಾದರೆ ಕನ್ನಡಿ ನೋಡಿಕೊಳ್ಳಿ ಸಾಕು!
(೫೩) ’ಶೂನ್ಯ’ ಎಂಬ ನಿರಂತರವಾಗಿ ಪ್ರಸಾರವಾಗುವ, ನಿರಂತರ ಮೆಗಾಸೀರಿಯಲ್ಲಿನ ನಡುವಿನ ’ಕ್ಷಣಿಕ ವಿರಾಮವನ್ನು’ ಬದುಕು ಎನ್ನುತ್ತೇವೆ. ಈ ಸತ್ಯವನ್ನು ನಂಬಲಿಚ್ಛಿಸದವರು ದೇವರು, ತೀರ್ಥಯಾತ್ರೆ, ಮೋಕ್ಷ, ದೈಹಿಕ ವಾಂಛೆ ಮತ್ತು ಮ್ಯಾಕ್ ಡೋನಾಲ್ಡ್ ಪಿಝ್ಜ ಮುಂತಾದ ಜಾಹಿರಾತನ್ನು ಹೆಚ್ಚು ಹೆಚ್ಚು ಅನುಭವಿಸಲಿಚ್ಛಿಸುತ್ತಾರೆ.
(೫೪) ನೋವೆಂಬುದು ನೋವಿನ ಭಯದಲ್ಲಿದೆ. ಸತ್ತವರಿಗಾಗಿ ನಾವು ಅಳುತ್ತೇವೆಯೇ ಹೊರತು ಸ್ವತಃ ಅವರು ದುಃಖಿಸುವುದಿಲ್ಲ!
(೫೫) ನಿಶ್ಚಿತ ಹಾದಿಯೊಂದನ್ನು ಅನುಸರಿಸದೆ ಮಾತನಾಡುವವರನ್ನು ಹುಚ್ಚರು ಅಥವ ಮೇಧಾವಿಗಳೆನ್ನುತ್ತೇವೆ. ನಿಶ್ಚಿತ, ನಿರೀಕ್ಷಿತ ಮಾತುಗಳನ್ನು ಅನುಸರಿಸುವವರನ್ನು ಏರ‍್ಪೋರ್ಟ್, ರೇಲ್ವೆ ಮತ್ತು ಬಸ್‍ಸ್ಟಾಪ್‍ಗಳಲ್ಲಿನ ಸುದ್ಧಿವಾಹಕರೆನ್ನುತ್ತೇವೆ.
Comments
ಉ: ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳು ೧೧
In reply to ಉ: ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳು ೧೧ by vasanth
ಉ: ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳು ೧೧